ʼಕೆಜಿಎಫ್’ ನಟಿ ಮೌನಿಗೆ ಆರೋಗ್ಯದಲ್ಲಿ ಏರುಪೇರು- ಅಷ್ಟಕ್ಕೂ ಆಗಿದ್ದೇನು?

Public TV
1 Min Read
mouni roy

‘ಕೆಜಿಎಫ್’ (KGF) ಸಿನಿಮಾದಲ್ಲಿ ಗಲಿಗಲಿ ಹಾಡಿಗೆ ಯಶ್ (Yash) ಜೊತೆ ಸೊಂಟ ಬಳುಕಿಸಿದ್ದ ನಟಿ ಮೌನಿ ರಾಯ್ (Mouni Roy) ಆರೋಗ್ಯದಲ್ಲಿ ಏರುಪೇರಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಆರೋಗ್ಯದ ಬಗ್ಗೆ  ನಟಿ ಅಪ್‌ಡೇಟ್‌ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

MOUNI ROY

ಬಾಲಿವುಡ್ (Bollywood) ಬ್ಯೂಟಿ ಮೌನಿ ರಾಯ್ ಅವರು ಅನಾರೋಗ್ಯದಿಂದ ಬಳುತ್ತಿದ್ದರು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಟಿ ಚಿಕಿತ್ಸೆ ಪಡೆಯುತ್ತಿದ್ದರು. 9 ದಿನಗಳ ಚಿಕಿತ್ಸೆಯ ನಂತರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಇದೀಗ ನಟಿ ಮನೆಗೆ ಹಿಂದಿರುಗಿದ್ದಾರೆ. ಇದನ್ನೂ ಓದಿ:ಸಿನಿಮಾಗೆ ಗುಡ್ ಬೈ, ರಾಜಕೀಯಕ್ಕೆ ಅಭಿಷೇಕ್ ಬಚ್ಚನ್ ಎಂಟ್ರಿ?

mouni roy 1

ಆಸ್ಪತ್ರೆಯಲ್ಲಿದ್ದ ಕೆಲ ಫೋಟೋಗಳನ್ನ ನಟಿ ಶೇರ್ ಮಾಡಿ, ಸಂಕಷ್ಟದ ಸಮಯದಲ್ಲಿ ಜೊತೆಯಲ್ಲಿದ್ದ ಪತಿ ಸೂರಜ್‌ಗೆ ಮೌನಿ ರಾಯ್ ಧನ್ಯವಾದಗಳನ್ನ ತಿಳಿಸಿದ್ದಾರೆ. ಇದೀಗ ಆರೋಗ್ಯವಾಗಿದ್ದೇನೆ, ಆರಾಮ ಆಗಿ ಮನೆಗೆ ವಾಪಸ್ ಆಗಿದ್ದೇನೆ. ಅಭಿಮಾನಿಗಳ ಹಾರೈಕೆಗೆ ಧನ್ಯವಾದಗಳು ಎಂದು ನಟಿ ಬರೆದುಕೊಂಡಿದ್ದಾರೆ. ಆದರೆ ಯಾವ ಕಾರಣಕ್ಕೆ ಅನಾರೋಗ್ಯ ಕಾಡಿತ್ತು ಎಂಬುದನ್ನ ನಟಿ ರಿವೀಲ್ ಮಾಡಿಲ್ಲ.

ಕಳೆದ ವರ್ಷ ಅಂತ್ಯದಲ್ಲಿ ರಣ್‌ಬೀರ್ ಕಪೂರ್- ಆಲಿಯಾ ಭಟ್ (Alia Bhatt) ಅವರು ‘ಬ್ರಹ್ಮಾಸ್ತ್ರʼ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಮೌನಿ ಖಡಕ್ ವಿಲನ್ ಆಗಿ ನಟಿಸಿದ್ದರು. ನಟಿಯ ಅಭಿನಯಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು.

Share This Article