ಪಾಸ್‌ಪೋರ್ಟ್ ಇಲ್ಲದೇ ವಿಮಾನ ನಿಲ್ದಾಣಕ್ಕೆ ಬಂದ ‘ಕೆಜಿಎಫ್’ ನಟಿಗೆ ಗೇಟ್ ಪಾಸ್

Public TV
1 Min Read
mouni roy

ಕೆಜಿಎಫ್ (KGF) ಬ್ಯೂಟಿ ಮೌನಿ ರಾಯ್ (Mouni Roy) ಅವರು ಬಾಲಿವುಡ್ ರಂಗದಲ್ಲಿ ನಾಯಕಿ, ಐಟಂ ಡ್ಯಾನ್ಸ್ ಅಂತಾ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾ ವಿಚಾರದ ಬದಲು ವೈಯಕ್ತಿಕ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಪಾಸ್‌ಪೋರ್ಟ್ ಇಲ್ಲದೇ ವಿಮಾನ ನಿಲ್ದಾಣ ಪ್ರವೇಶಿಸಿದ ಮೌನಿಗೆ ಅಧಿಕಾರಿಗಳು ಮನೆಗೆ ಕಳುಹಿಸಿದ್ದಾರೆ. ಇದೀಗ ಅವರ ಸಾಮಾಜಿಕ ಜಾಲತಾಣ ತುಂಬೆಲ್ಲಾ ಸದ್ದು ಮಾಡುತ್ತಿದೆ.

MOUNI ROY

ಯಶ್ (Yash) ಜೊತೆ ಗಲಿ ಗಲಿ ಮೇ ಸಾಂಗ್‌ನಲ್ಲಿ ಸೊಂಟ ಬಳುಕಿಸಿದ್ದ ನಾಗಿನ್ (Naagin) ಬ್ಯೂಟಿ ಮೌನಿ ರಾಯ್ ಅವರು ಅಕ್ಷಯ್ ಕುಮಾರ್ (Akshay Kumar) ನಟನೆಯ ಗೋಲ್ಡ್ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೆಂಗಳೂರು (Bangalore) ಮೂಲದ ಉದ್ಯಮಿ ಸೂರಜ್ ಮದುವೆಯಾಗಿ ಖುಷಿಯಿಂದ ಸಂಸಾರ ಸಾಗಿಸುತ್ತಿದ್ದಾರೆ. ಆಗಾಗ ವೇಕೆಷನ್ ಅಂತಾ ದೂರದ ದೇಶಕ್ಕೆ ಹೋಗಿ ಬರುತ್ತಾರೆ.

Mouni Roy 2
ಜುಲೈ 12ರಂದು (ಇಂದು) ಮೌನಿ ರಾಯ್ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ ಅವರ ಫೋಟೋ ಮತ್ತು ವೀಡಿಯೋಗಾಗಿ ಪಾಪರಾಜಿಗಳು ಮುತ್ತಿಗೆ ಹಾಕುತ್ತಾರೆ. ಇತ್ತೀಚೆಗೆ ಅದೇ ರೀತಿ ಆಯಿತು. ಪಾಪರಾಜಿಗಳ ಕಡೆಗೆ ಕೈ ಬೀಸಿ, ನಂತರ ಅವರು ವಿಮಾನ ನಿಲ್ದಾಣ ಪ್ರವೇಶಿಸಲು ಮುಂದಾದರು. ಆಗ ಅಲ್ಲಿದ್ದ ಅಧಿಕಾರಿಯು ಪಾಸ್‌ಪೋರ್ಟ್ ತೋರಿಸುವಂತೆ ಸೂಚಿಸಿದ್ದಾರೆ. ಬ್ಯಾಗ್ ಪೂರ್ತಿ ಹುಡುಕಾಡಿದರೂ ಮೌನಿ ರಾಯ್‌ಗೆ ಪಾಸ್ ಪೋರ್ಟ್ ಸಿಕ್ಕಿಲ್ಲ. ಹಾಗಾಗಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಪ್ರವೇಶ ನಿರ್ಬಂಧಿಸಲಾಯಿತು. ಬೇರೆ ಆಯ್ಕೆ ಇಲ್ಲದೇ ಮೌನಿ ರಾಯ್ ವಾಪಸ್ ಮನೆ ಕಡೆ ಹೊರಟರು. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್

ಈ ವಿಡಿಯೋ ವೈರಲ್ ಆದ ಬಳಿಕ ಮೌನಿ ರಾಯ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಶೂಟಿಂಗ್, ಟ್ರಿಪ್ ಅಂತಾ ಬ್ಯುಸಿಯಿರುವ ಈ ನಟಿ ಪಾಸ್‌ಪೋರ್ಟ್ ಇಟ್ಟುಕೊಳ್ಳುವುದನ್ನೇ ಮೌನಿ ರಾಯ್ ಮರೆತಿದ್ದಾರೆ ಎಂದು ಅನೇಕರು ಕಾಲೆಳೆದಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article