ʻಘೋಸ್ಟ್ʼ ಸಿನಿಮಾದಲ್ಲಿ ಪತ್ರಕರ್ತೆಯಾದ ಕೆಜಿಎಫ್‌ ನಟಿ ಅರ್ಚನಾ ಜೋಯಿಸ್

Public TV
1 Min Read
archana jois

ಶಿವಣ್ಣ ನಟನೆಯ `ಘೋಸ್ಟ್’ (Ghost) ಸಿನಿಮಾ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುಲೇ ಇದೆ. ಸ್ಟಾರ್ ಕಲಾವಿದರ ದಂಡೇ ಶಿವಣ್ಣನ ಟೀಮ್‌ಗೆ ಸೇರ್ಪಡೆಯಾಗುತ್ತಿದೆ. ಸದ್ಯ `ಕೆಜಿಎಫ್’ ಖ್ಯಾತಿಯ ಅರ್ಚನಾ ಜೋಯಿಸ್ (Archana Jois) `ಘೋಸ್ಟ್’ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ.

 

View this post on Instagram

 

A post shared by Archana Jois (@jois_archie)

`ವೇದ’ ಬಳಿಕ ಶಿವಣ್ಣ ನಟನೆಯ `ಘೋಸ್ಟ್’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತೀಚಿಗೆ ಚಿತ್ರತಂಡಕ್ಕೆ ಅನುಪಮ್ ಖೇರ್, ಜಯರಾಮ್, ಪ್ರಶಾಂತ್ ನಾರಾಯಣ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಈಗ ನಟಿ ಅರ್ಚನಾ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಜೀವತುಂಬಿದ್ದಾರೆ. ಇದನ್ನೂ ಓದಿ: ರಾಕಿಂಗ್ ಸ್ಟಾರ್ ಮನೆ ಮುಂದೆ ಜನಸಾಗರ: ಯಶ್‌ ಜೊತೆಗೆ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

archana 1ಶ್ರೀನಿ ನಿರ್ದೇಶನದ ಈ ಚಿತ್ರದಲ್ಲಿ `ಕೆಜಿಎಫ್’ (Kgf) ನಟಿ ಅರ್ಚನಾ ಪತ್ರಕರ್ತೆಯ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ತಮ್ಮ ಭಾಗದ ಚಿತ್ರೀಕರಣ ಕೂಡ ಕಂಪ್ಲೀಟ್ ಮಾಡಿದ್ದಾರೆ. ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ಅರ್ಚನಾ ನಟಿಸಿದ್ದಾರೆ.

archana

ಸಂದೇಶ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಶಿವಣ್ಣ ವಿಭಿನ್ನ ಗೆಟಪ್‌ನಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾ 60ರಷ್ಟು ಚಿತ್ರೀಕರಣ ಆಗಿದೆ. ಸದ್ಯದಲ್ಲೇ 3ನೇ ಹಂತದ ಶೂಟಿಂಗ್ ಶುರುವಾಗಲಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *