ಭಾರೀ ಮೊತ್ತಕ್ಕೆ ಕೆಜಿಎಫ್ ಸ್ಯಾಟಲೈಟ್ ಹಕ್ಕು ಖರೀದಿಸಿದ ಜೀ ಸ್ಟುಡಿಯೋಸ್

Public TV
2 Min Read
KGF 2

ಬೆಂಗಳೂರು: ಸ್ಯಾಂಡಲ್‍ವುಡ್ ಬಹು ನಿರೀಕ್ಷಿತ ಕೆಜಿಎಫ್-2 ಸಿನಿಮಾದ ಸ್ಯಾಟಲೈಟ್ ಹಕ್ಕನ್ನು ಜೀ ವಾಹಿನಿ ಭಾರಿ ಮೊತ್ತಕ್ಕೆ ಖರೀದಿಸಿದೆ. ಜೀ ಕನ್ನಡ, ಜೀ ತೆಲುಗು, ಜೀ ತಮಿಳು ಮತ್ತು ಜೀ ಕೇರಳ ವಾಹಿನಿಯಲ್ಲಿ ಕೆಜಿಎಫ್-2 ಪ್ರಸಾರ ಆಗಲಿದೆ.

FotoJet 10 18

ಹೌದು, ಕೆಜಿಎಫ್-2 ಸಿನಿಮಾದ ಸ್ಯಾಟಲೈಟ್ ಹಕ್ಕನ್ನು ಜೀ ವಾಹಿನಿಯು ಬರೋಬ್ಬರಿ 3 ಕೋಟಿಗೂ ಅಧಿಕ ಮೊತ್ತಕ್ಕೆ ಖರೀದಿಸಿದೆ. ಸದ್ಯಈ ಕುರಿತಂತೆ ನಿರ್ದೇಶಕ ಪ್ರಶಾಂತ್ ನೀಲ್‍ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೆಜಿಎಫ್ ಸಿನಿಮಾದ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದು, ದಕ್ಷಿಣ ಭಾಷೆಗಳಲ್ಲಿ ಕೆಜಿಎಫ್-2 ಸಿನಿಮಾದ ಸ್ಯಾಟಲೈಟ್ ಹಕ್ಕನ್ನು ಜೀ ವಾಹಿನಿ ಖರೀದಿಸಿದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

Prashanth Neel

ರಾಕಿಂಗ್ ಸ್ಟಾರ್ ಯಶ್ ಕೂಡ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕೆಜಿಎಫ್ ಸಿನಿಮಾದ ಪೋಸ್ಟರ್‌ವೊಂದನ್ನು ಶೇರ್ ಮಾಡಿದ್ದು, ಕೆಜಿಎಫ್-2 ಹಕ್ಕನ್ನು ಜೀ ವಾಹಿನಿ ಖರೀದಿಸಿ ಎಂದು ಸಂತಸದಿಂದ ಘೋಷಿಸುತ್ತಿದ್ದೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಆಡಿಯೋ ಹಕ್ಕು ಮಾರಾಟದಲ್ಲಿ ಬಾಹುಬಲಿಯನ್ನ ಹಿಂದಿಕ್ಕಿದ ಕೆಜಿಎಫ್-2

ಸದ್ಯ ಕೆಜಿಎಫ್-2 ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯುತ್ತಿದೆ. ಈಗಾಗಲೇ ಜುಲೈ 16ರಂದು ಬಿಡುಗಡೆಯಾಗಬೇಕಿದ್ದ ಕೆಜಿಎಫ್ ಸಿನಿಮಾ ಕೋವಿಡ್‍ನಿಂದಾಗಿ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿತ್ತು. ಆದರೆ ಪ್ರಸ್ತುತ ವರದಿಗಳ ಪ್ರಕಾರ ಕೆಜಿಎಫ್-2 ಸಿನಿಮಾ ಕ್ರಿಸ್ಮಸ್ ಹಬ್ಬಕ್ಕೆ ತೆರೆಕಾಣುವ ಸಾಧ್ಯತೆ ಇದೆ. ಆದರೆ ಇನ್ನೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ.

ಕೆಜಿಎಫ್-2 ಸಿನಿಮಾದ ಯಶ್‍ಗೆ ಖಳನಾಯಕನಾಗಿ ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ಶ್ರೀ ನಿಧಿ ಶೆಟ್ಟಿ, ರವೀನಾ ಟಂಡನ್, ಬಾಲಕೃಷ್ಣ, ಅನಂತ್ ನಾಗ್, ಮಾಳವಿಕಾ ಅವಿನಾಶ್, ಶರಣ್ ಶಕ್ತಿ ಮತ್ತು ಅಚ್ಯುತ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಕೆಜಿಎಫ್ 2 ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಪಡೆಯಲಿರುವ ವಿಶೇಷ ಅಭಿಮಾನಿ

 

View this post on Instagram

 

A post shared by Yash (@thenameisyash)

 

Share This Article
Leave a Comment

Leave a Reply

Your email address will not be published. Required fields are marked *