ಯಶ್‌ ಜೊತೆಗಿನ ಲೇಟೆಸ್ಟ್‌ ಫೋಟೋ ಹಂಚಿಕೊಂಡ ರಾಧಿಕಾಗೆ ವಿಶೇಷ ಬೇಡಿಕೆಯಿಟ್ಟ ಫ್ಯಾನ್ಸ್

Public TV
1 Min Read
radhika pandit

ನ್ಯಾಷನಲ್ ಸ್ಟಾರ್ ಯಶ್ ‘ಕೆಜಿಎಫ್ 2’ (KGF2) ಸಕ್ಸಸ್ ನಂತರ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ಯಶ್ ಮುಂದಿನ ನಡೆ ಬಗ್ಗೆ ಯಾವುದೇ ಅಪ್‌ಡೇಟ್ ಸಿಗದೇ ಫ್ಯಾನ್ಸ್ ಬೇಸರದಲ್ಲಿದ್ದಾರೆ. ಈ ನಡುವೆ ಅಂಬಿ ಪುತ್ರನ ಮದುವೆಗೆ ಯಶ್- ರಾಧಿಕಾ ಜೋಡಿ ಮಸ್ತ್ ಆಗಿ ಎಂಟ್ರಿ ಕೊಟ್ಟಿದ್ದರು. ಜೋಡಿಯ ಲುಕ್‌ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಕುರಿತ ಹೊಸ ಫೋಟೋವನ್ನ ಈ ಸ್ಟಾರ್ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕೇಸರಿ ಸೀರೆಯುಟ್ಟ ರಮ್ಯಾ ಫೋಟೋ ವೈರಲ್

Yash Radhika Pandit

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಹಾಟ್ ಟಾಪಿಕ್ ಅಂದರೆ ಯಶ್ ಮುಂದಿನ ಸಿನಿಮಾ, ಮತ್ತೊಂದು ಅಭಿಷೇಕ್ ಅಂಬರೀಶ್ ಮದುವೆ ವಿಚಾರ. ಅಂಬಿ ಪುತ್ರನ ಮದುವೆಯಲ್ಲಿ ಯಶ್ ದಂಪತಿ, ಪಿಂಕ್ ಬಣ್ಣದ ಉಡುಗೆಯಲ್ಲಿ ಸಖತ್ ಆಗಿ ಮಿಂಚಿದ್ರು. ಇವರ ಮುದ್ದಾದ ಜೋಡಿ ನೋಡಿ ದೃಷ್ಟಿ ತೆಗಿರೋ ಅಂತಾ ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದರು. ಈಗ ಮತ್ತೆ ನಟಿ ರಾಧಿಕಾ (Radhika Pandit), ಪತಿ ಜೊತೆಗಿನ ಹೊಸ ಫೋಟೋ ಶೇರ್ ಮಾಡಿದ್ದಾರೆ.

 

View this post on Instagram

 

A post shared by Yash (@thenameisyash)

ಪಿಂಕ್ ಬಣ್ಣದ ಧಿರಿಸಿನಲ್ಲಿ ಮಸ್ತ್ ಫೋಟೋಶೂಟ್ ಶೇರ್ ಮಾಡಿದ್ದಾರೆ. ಲೈಫ್ ಇಸ್ ಬ್ಯೂಟಿಫುಲ್ ಅಂತಾ ಅಡಿಬರಹ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡ್ತಿದ್ದಂತೆ ಫ್ಯಾನ್ಸ್, ನೀವು ಮತ್ತೆ ಒಟ್ಟಾಗಿ ನಟಿಸಿ ಸಿನಿಮಾ ಮಾಡಿ ಅಂತಾ ಯಶ್ ದಂಪತಿಗೆ ಮನವಿ ಮಾಡ್ತಿದ್ದಾರೆ. ಈ ವಿಶೇಷ ಬೇಡಿಕೆಯನ್ನ ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡುವ ಮೂಲಕ ಫ್ಯಾನ್ಸ್‌ ತಿಳಿಸಿದ್ದಾರೆ.

ಇನ್ನೂ ಕೆಜಿಎಫ್, ಕೆಜಿಎಫ್ 2 ಸಿನಿಮಾ ಸಕ್ಸಸ್ ಬಳಿಕ ಕಥೆಯ ಆಯ್ಕೆ ವಿಚಾರದಲ್ಲಿ ಯಶ್ (Yash) ಮತ್ತಷ್ಟು ಚ್ಯುಸಿಯಾಗಿದ್ದಾರೆ. ಅವರ ಮುಂದಿನ ನಡೆಯೇನು.? ಎಂಬುದನ್ನ ರಿವೀಲ್ ಮಾಡದೇ ಹೊಸ ಪ್ರಾಜೆಕ್ಟ್ ಬಗ್ಗೆ ತಯಾರಿ ಮಾಡ್ತಿದ್ದಾರೆ.

Share This Article