ಜಗತ್ತೇ ತಿರುಗಿನೋಡುವಂಥಹ ಸಿನಿಮಾ ಕೊಟ್ಟ ‘ಕೆಜಿಎಫ್’ ಮೇಲೆ ಇಡೀ ದೇಶದ ದೃಷ್ಟಿ ಇದೆ. ಕನ್ನಡ ಮೂಲದ ಚಿತ್ರವಾದ್ದರಿಂದ ಕನ್ನಡ ನೆಲದಲ್ಲೇ ಕೆಜಿಎಫ್ 2 ಟ್ರೈಲರ್ ಅನಾವರಣ ಮಾಡಲಾಗಿದೆ. ವಿಶೇಷ ಅಂದ್ರೆ ಈ ಅದ್ದೂರಿ ಕಾರ್ಯಕ್ರಮವನ್ನ ನಟ, ನಿರ್ದೇಶಕ, ನಿರೂಪಕ ಕರಣ್ ಜೋಹರ್ ನಿರೂಪಣೆ ಮಾಡಿದ್ದು. ಬೆಂಗಳೂರಿನ ಓರಾಯನ್ ಮಾಲ್‍ನಲ್ಲಿ ನಡೆದ ಅದ್ದೂರಿ ಟ್ರೈಲರ್ ರಿಲೀಸ್ ಸಮಾರಂಭದಲ್ಲಿ ಸಿನಿಮಾ ಮತ್ತು ಅತಿಥಿಗಳಾಗಿ ಶಿವರಾಜ್ ಕುಮಾರ್ ಹಾಗೂ ಸಚಿವ ಅಶ್ವತ್ಥ್ ನಾರಾಯಣ್ ಆಗಮಿಸಿದ್ದರು.
Advertisement
ಒದೊಂದೂ ಭಾಷೆಯಲ್ಲೂ ಆಯಾ ಸೂಪರ್ ಸ್ಟಾರ್‌ಗಳು ಡಿಜಿಟಲ್ ರಿಲೀಸ್ ಉಸ್ತುವಾರಿಯನ್ನ ವಹಿಸಿಕೊಂಡ್ರು. ಕನ್ನಡದಲ್ಲಿ ಶಿವಣ್ಣ, ತೆಲುಗಿನಲ್ಲಿ ರಾಮ್‍ಚರಣ್ ತೇಜ, ತಮಿಳಿನಲ್ಲಿ ಸೂರ್ಯ, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್, ಹಿಂದಿಯಲ್ಲಿ ಫರಾನ್ ಅಖ್ತರ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ನಟರೇ ಟ್ರೈಲರ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು. ಇದನ್ನೂ ಓದಿ : ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ
Advertisement
Advertisement
ಏಪ್ರಿಲ್ 14ಕ್ಕೆ ರಿಲೀಸ್ ಆಗಲಿರುವ ಕೆಜಿಎಫ್ 2 ಚಿತ್ರದ ಟೀಸರ್ ಹಾಗೂ ಹಾಡೊಂದು ರಿಲೀಸ್ ಆಗಿದ್ದು ಬಿಟ್ಟರೆ ಪಾರ್ಟ್ 2 ಬಗೆಗಿನ ಚಿಕ್ಕ ಸುಳಿವೂ ಇದುವರೆಗೆ ಇರಲಿಲ್ಲ. ಆ ಕುತೂಹಲವನ್ನ ಹಾಗೇ ಕಾಯ್ದಿರಿಸಿಕೊಂಡಿದ್ದ ಚಿತ್ರತಂಡ ರಿಲೀಸ್‍ಗೆ ಕೆಲವೇ ದಿನಗಳ ಮುಂಚೆ ಈಗ ಆಫಿಷಿಯಲ್ ಟ್ರೈಲರ್ ಲಾಂಚ್ ಮಾಡುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ.
Advertisement
ಈ ಸಮಾರಂಭಕ್ಕೆ ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಆಗಮಿಸಿದರು. ಒಂದೇ ಕಾರ್ಯಕ್ರಮದಲ್ಲಿ ರಾಕಿಬಾಯ್ ಮತ್ತು ಮುನ್ನಬಾಯ್ ಒಂದಾಗಿದ್ದು, ಕಾರ್ಯಕ್ರಮಕ್ಕೆ ಹೆಚ್ಚು ಮೆರುಗು ಸೇರಿಕೊಂಡಿತು. ಈ ಅದ್ದೂರಿ ಕಾರ್ಯಕ್ರಮಕ್ಕೆ ಚಂದನವನದ ಅನೇಕ ಗಣ್ಯರು ಭಾಗಿಯಾಗಿದ್ದು, ಟಾಲಿವುಡ್ ಮತ್ತು ಬಾಲಿವುಡ್ ಸಿನಿತಾರೆಯರು ಭಾಗಿಯಾಗಿದ್ದರು. ಇದನ್ನೂ ಓದಿ : ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು
ಯಶ್ ಬೇರೆ ಲೆವೆಲ್ಗೆ ಬೆಳೆದಿದ್ದಾರೆ.
ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಟ್ರೈಲರ್‌ನಲ್ಲಿದ್ದ ಯಶ್ ವೈಲನ್ಸ್… ವೈಲನ್ಸ್.. ಡೈಲಾಗ್ ಹೇಳಿ ಯಶ್, ಪ್ರಶಾಂತ್ ಸರ್, ಸಂಜಯ್ ದತ್ತ್ ಸರ್ ಸೂಪರ್ ಆಗಿ ಟ್ರೈಲರ್ ಬಂದಿದೆ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. ನಂತರ ಮಾತನ್ನು ಮುಂದುವರಿಸಿದ ಅವರು, ನಿಜವಾಗಿ ಟ್ರೈಲರ್ ಸೂಪರ್ ಆಗಿತ್ತು. ಮೊದಲಿನಿಂದಲೂ ನನಗೆ ಯಶ್ ಕಂಡ್ರೆ ತುಂಬಾ ಇಷ್ಟ. ಅವರು ನೋಡಲು ತುಂಬಾ ಹ್ಯಾಂಡ್‍ಸಮ್ ಆಗಿ ಇದ್ದಾರೆ. ಯಶ್ ಸಿನಿಮಾ ನೋಡಲು ನಿಜಕ್ಕೂ ತುಂಬಾ ಖುಷಿಯಾಗುತ್ತೆ. ನಾವಿಬ್ಬರು ‘ತಮಸ್ಸು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೆವು. ಅಲ್ಲಿಂದ ಕೆಜಿಎಫ್ ಮೂಲಕ ಬೇರೆ ಲೆವೆಲ್ಗೆ ಬೆಳೆದಿದ್ದಾರೆ. ಅದರಲ್ಲಿಯೂ ಯಶ್, ರಾಧಿಕಾ ಅವರನ್ನು ಮದುವೆಯಾದ ಮೇಲೆ ಅದೃಷ್ಟ ಹೆಚ್ಚಾಗಿದೆ ಎಂದು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ಎಲ್ಲರಿಗೂ ಧನ್ಯವಾದ ಹೇಳಿದ ಯಶ್
ಟ್ರೈಲರ್ ಲಾಂಚ್ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊದಲು ನಮ್ಮೂರಿಗೆ ಸ್ವಾಗತ. ನಾನು ನನ್ನ ಜೀವನದಲ್ಲಿ ಯಾವತ್ತು ನರ್ವಸ್ ಆಗಿಲ್ಲ. ಆದರೆ ಇವತ್ತು ಯಾವ ರೀತಿ ಫೀಲಿಂಗ್ ಆಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಈ ಭಾವನೆಯನ್ನು ಯಾವ ರೀತಿ ಹೇಳಿಕೊಳ್ಳಬೇಕು ಅಂತ ಗೊತ್ತಾಗುತ್ತಿಲ್ಲ. ವಿ ಮಿಸ್ ಯೂ ಅಪ್ಪು ಸರ್ ಎಂದು ತಮ್ಮ ಮಾತನ್ನು ಮುಂದುವರೆದಿಸಿದರು. ಪುನೀತ್ ರಾಜ್‍ಕುಮಾರ್ ಅವರ ‘ನಿನ್ನಿಂದಲೇ’ ಸಿನಿಮಾದಿಂದಲ್ಲೇ ಹೊಂಬಾಳೆ ಫಿಲ್ಮ್ ಜರ್ನಿ ಪ್ರಾರಂಭವಾಗಿತ್ತು. ಈ ದಿನ ಬರುತ್ತೆ ಎಂದು ನಾವು ತಿಳಿದುಕೊಂಡಿರಲಿಲ್ಲ. ಶಿವಣ್ಣ ನಮ್ಮ ಅಣ್ಣ. ಅವರನ್ನು ಎಲ್ಲರೂ ಅಳಿಸುವುದನ್ನು ನನ್ನ ಕೈಯಲ್ಲಿ ನೋಡೋಕೆ ಆಗುತ್ತಿಲ್ಲ. ಇಲ್ಲಿವರೆಗೂ ನಾನು ಅಪ್ಪು ಅವರ ಬಗ್ಗೆ ಮಾತನಾಡಿಲ್ಲ. ಆದರೆ ಇಂದು ನಾನು ಅವರ ಬಗ್ಗೆ ಮಾತನಾಡಲು ಇಷ್ಟ ಪಡುತ್ತೇನೆ. ಅವರು ನಮ್ಮೆಲ್ಲರ ಜೊತೆಯಲ್ಲೇ ಇರುತ್ತಾರೆ. ಅವರು ಎಲ್ಲರ ನಡುವೆ ಜೀವಂತವಾಗಿ ಇರುತ್ತಾರೆ ಎಂದು ನೆನೆದರು ಇದನ್ನೂ ಓದಿ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ
ನಾನು ನನ್ನ ಇಂಡಸ್ಟ್ರಿಯನ್ನು ತುಂಬಾ ಅಚ್ಚುಕೊಂಡಿದ್ದೇನೆ. ನಾನು ನಮ್ಮ ಸಿನಿಮಾ ಮತ್ತು ನಮ್ಮ ಇಂಡಸ್ಟ್ರಿಗೆ ಪ್ರಶಂಸೆ ಹೋಗಬೇಕು ಎಂದು ನಾನು ಇಷ್ಟ ಪಡುತ್ತೇನೆ. ನನಗೆ ಇವರಲ್ಲಿ ಕ್ರೆಡಿಟ್ ಬೇಡ. ಇದು ನಮ್ಮ ಕನ್ನಡ ಜನರ ಕನಸು ಆಗಿತ್ತು. ಆದರೆ ಒಂದೇ ಸಮಯದಲ್ಲಿ ಕನ್ನಡದ ಲೆಜೆಂಡ್‍ಗಳನ್ನು ನೋಡುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಬೇರೆ ಭಾಷೆ ತಾರೆಯರು ನಮ್ಮ ಇಂಡಸ್ಟ್ರಿ ಬಗ್ಗೆ ಹೆಚ್ಚು ಪ್ರೀತಿ ತೋರಿಸಿ ಇಲ್ಲಿಗೆ ಬಂದಿರುವುದು ತುಂಬಾ ಸಂತೋಷವಾಗುತ್ತಿದೆ. ಕೆಜಿಎಫ್ 1 ಮುಗಿನ ಮೇಲೆ ನಾವು ನಮ್ಮ ಇಂಡಸ್ಟ್ರಿಗೋಸ್ಕರ ಏನಾದರೂ ಮಾಡಿದ್ದೇವೆ ಎಂದು ಸಂತೋಷವಾಗುತ್ತಿದೆ ಎಂದರು.
ನಾನು ಈ ಬಗ್ಗೆ ಹೊಂಬಾಳೆ ವಿಜಯ್ ಕಿರಗಂದೂರು ಅವರ ಜೊತೆ ಕೆಜಿಎಫ್ ಬಗ್ಗೆ ಮಾತನಾಡುತ್ತಿರಬೇಕಾದರೆ ಎಲ್ಲರೂ ನಮ್ಮನ್ನು ಹುಚ್ಚ ಎಂದು ತಿಳಿದಿದ್ದರು. ಎಲ್ಲ ಹೀರೋಗಳಿಗೂ ಹೆಚ್ಚು ದೊಡ್ಡ ಸ್ಥಾನದಲ್ಲಿ ಇರಬೇಕು ಎಂದು ಇಷ್ಟವಿರುತ್ತೆ. ಅದೇ ರೀತಿ ನಾನು ಮಾತನಾಡುತ್ತಿದ್ದೆ ಎಂದು ಕೆಲವರು ತಿಳಿದುಕೊಂಡಿದ್ದರು. ಆದರೆ ವಿಜಿ ಅವರು ನನ್ನ ಉದ್ದೇಶವನ್ನು ಸರಿಯಾಗಿ ತಿಳಿದುಕೊಂಡು ನನಗೆ ಬೆಂಬಲವಾಗಿ ನಿಂತರು. ಯಾರು ಊಹಿಸಲು ಸಾಧ್ಯವಾಗದನ್ನು ಅವರು ಮಾಡಿದ್ದಾರೆ. ಇದೇ ರೀತಿ ಕೆಜಿಎಫ್ ಆಯ್ತು. ಇದಕ್ಕೆ ಮುಖ್ಯ ಕಾರಣ ಪ್ರಶಾಂತ್ ನೀಲ್ ಎಂದು ವಿವರಿಸಿದರು. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು
ಸಂಜಯ್ ದತ್ತ ಅಣ್ಣ
ಟ್ರೈಲರ್ ರಿಲೀಸ್ ಆದ ನಂತರ ಸಭೆಯನ್ನು ಉದ್ದೇಶಿ ಮಾತನಾಡಿದ ಅವರು, 45 ವರ್ಷಗಳ ನನ್ನ ಸಿನಿಜರ್ನಿಯಲ್ಲಿ ಕೆಜಿಎಫ್-2 ಒಂದು ಅದ್ಭುತವಾದ ಪಾಠವಾಗಿದೆ. ಸಿನಿಮಾ ಸೆಟ್‍ನಲ್ಲಿ ಇದ್ದ ಶಿಸ್ತು, ಸಿನಿಮಾ ಮಾಡಬೇಕು ಎಂದು ಈ ತಂಡಕ್ಕೆ ಇರುವ ಗುರಿ ನೋಡಿ ತುಂಬಾ ಖುಷಿಯಾಗುತ್ತೆ. ಈ ತಂಡದಿಂದ ನಾನು ತುಂಬಾ ಕಲಿತಿದ್ದೇನೆ. ಈ ಸಿನಿಮಾ ಕುಟುಂಬದ ರೀತಿ ಎಂದು ಸಂತೋಷವನ್ನು ವ್ಯಕ್ತಪಡಿಸಿದರು. ಇಲ್ಲಿರುವ ಪ್ರತಿಯೊಬ್ಬ ಜೂನಿಯರ್ ಆರ್ಟಿಸ್ಟ್ ಕೂಡ ತುಂಬಾ ಮುಖ್ಯವಾಗಿದ್ದರು. ಎಲ್ಲರನ್ನು ಗೌರವದಿಂದ ನೋಡಿಕೊಳ್ಳುತ್ತಿದ್ದರು. ನಾನು ಯಶ್ ಅವರಿಗೆ ಧನ್ಯವಾದ ಹೇಳುತ್ತೇನೆ. ನನ್ನ ಕೋ ಆರ್ಟಿಸ್ಟ್ ಆಗಿ ನೀವು ತುಂಬಾ ಚೆನ್ನಾಗಿ ಬೆಂಬಲ ಕೊಟ್ಟಿದ್ದಾರೆ. ನನ್ನನ್ನು ಅಣ್ಣ ಎಂದು ಪ್ರೀತಿಯಿಂದ ಕರೆದಿದ್ದಾರೆ.
ಪುನೀತ್ ನೆನೆದ ರಾಧಿಕಾ ಪಂಡಿತ್
ಟ್ರೈಲರ್ ರಿಲೀಸ್ ಆದ ನಂತರ ಸಭೆಯನ್ನು ಉದ್ದೇಶಿ ಮಾತನಾಡಿದ ಅವರು, 3 ವರ್ಷದ ನಂತರ ನಾನು ಎಲ್ಲರೊಂದಿಗೆ ಮಾತನಾಡುತ್ತಿದ್ದೇನೆ. ಈ ಸಿನಿಮಾಕ್ಕೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ. ಕೆಜಿಎಫ್ ಚಿತ್ರವನ್ನು ನಾನು ವೀಕ್ಷಿಸಿದ್ದೇನೆ. ನನ್ನ ಪತಿಯ ಸಿನಿಮಾ ಎಂದು ನಾನು ಹೊಗಳುತ್ತಿಲ್ಲ. ಕೆಜಿಫ್ ಎನ್ನುವ ಕಾರಣಕ್ಕೆ ನನಗೆ ಸಿನಿಮಾದ ಮೇಲೆ ಪ್ರೀತಿ ಇದೆ. ಸಿನಿಮಾವನ್ನು ನಾನು ನಿಜಕ್ಕೂ ಇಷ್ಟಪಟ್ಟೆ ಎಂದು ಹೇಳಿದರು. ವಿಜಯ್, ಪ್ರಶಾಂತ್ ನಿಲಜ್, ರವಿ ಬಸೂರ್ ಯಶ್, ಶ್ರೀನಿಧಿ ಪ್ರತಿಯೊಬ್ಬರು ಈ ಸಿನಿಮಾದ ಕಂಬಂಗಳಿದ್ದಂತೆ. ಅದರಲ್ಲೂ ರವೀನಾ ಟಂಡನ್ ಅವರ ಅಭಿನಯ ನನಗೆ ತುಂಬಾ ಇಷ್ಟವಾಯಿತು. ಗುಸ್ಕೆ ಮಾರೆಂಗೆ ಡೈಲಾಗ್ ತುಂಬಾ ಇಷ್ಟವಾಯಿತು. ಸಂಜಯ್ ದತ್ ಅವರನ್ನು ಈ ರೀತಿ ನಾನು ಎಂದೂ ನೋಡಿರಲಿಲ್ಲ. ಆದರೆ ಇಡೀ ಸಿನಿಮಾದಲ್ಲಿ ನಿಮ್ಮ ಇರುವಿಕೆ ನನಗೆ ತುಂಬಾ ಇಷ್ಟವಾಯಿತು ಎಂದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಶಿವರಾಜ್ ಕುಮಾರ್ ಅವರೇ ನೀವು ಇಲ್ಲಿ ಬಂದಿದ್ದಕ್ಕೆ ಸಂತೋಷವಾಗಿದೆ. ಅಪ್ಪು ಅವರು ನಮ್ಮನ್ನಗಲಿದ್ದಾರೆ. ಆದರೆ ಅವರನ್ನು ಶಿವಣ್ಣನ್ನಲ್ಲೆ ಕಾಣುತ್ತಿದ್ದೇವೆ ಎಂದು ಪುನೀತ್ ರಾಜ್‍ಕುಮಾರ್ ಅವರನ್ನು ನೆನೆದರು.