ಸ್ಯಾಂಡಲ್‌ವುಡ್ ಸ್ಟಾರ್ ಯಶ್- ರಾಧಿಕಾ ಪಂಡಿತ್ (Radhika Pandit) ಜೋಡಿ ಇದೀಗ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡು ಸುದ್ದಿಯಲ್ಲಿದ್ದಾರೆ. ಸ್ನೇಹಿತನ ಮದುವೆಯಲ್ಲಿ (Wedding) ರಾಕಿಭಾಯ್ ಯಶ್- ರಾಧಿಕಾ ಪಾಲ್ಗೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.
‘ಕೆಜಿಎಫ್ 2’ (KGF2) ಸಕ್ಸಸ್ ನಂತರ ಹೊಸ ಸಿನಿಮಾ ತಯಾರಿಯಲ್ಲಿ ಯಶ್ (Yash) ಬ್ಯುಸಿಯಾಗಿದ್ದಾರೆ. ಅದಕ್ಕಾಗಿ ಶ್ರೀಲಂಕಾದಲ್ಲಿ ಕೆಲವು ದಿನಗಳ ಕಾಲ ಬೀಡು ಬಿಟ್ಟಿದ್ದರು. ಈಗ ಕೊಂಚ ಕೆಲಸಕ್ಕೆ ಬ್ರೇಕ್ ಹಾಕಿ ಸ್ನೇಹಿತನ ಮದುವೆಯಲ್ಲಿ ಪತ್ನಿ ರಾಧಿಕಾ ಜೊತೆ ಯಶ್ ಮಿಂಚಿದ್ದಾರೆ. ಮದುವೆ ಮನೆಯಲ್ಲಿ ಯಶ್-ರಾಧಿಕಾಗೆ ಗ್ರ್ಯಾಂಡ್ ವೆಲ್‌ಕಮ್ ಕೂಡ ಮಾಡಲಾಗಿದೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್- ಸೈಫ್ ಅಲಿ ಖಾನ್ ಚಿತ್ರದಲ್ಲಿ ಕನ್ನಡದ ನಟಿ ಚೈತ್ರಾ ರೈ

‘ಕೆಜಿಎಫ್ 2’ ಸಿನಿಮಾ ನಂತರ ಕೆಜಿಎಫ್ ಪಾರ್ಟ್ 3ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಇತ್ತೀಚಿಗಷ್ಟೇ ಹೊಂಬಾಳೆ ಸಂಸ್ಥೆ ಈ ಬಗ್ಗೆ ಅನೌನ್ಸ್ ಕೂಡ ಮಾಡಿತ್ತು.


