ಭಾರತೀಯ ಚಿತ್ರರಂಗವನ್ನು ಕನ್ನಡದತ್ತ ತಿರುಗಿ ನೋಡುವಂತೆ ಮಾಡಿರುವವರ ಪೈಕಿ ನಟ ರಾಕಿಂಗ್ ಸ್ಟಾರ್ ಯಶ್ (Yash) ಕೂಡ ಒಬ್ಬರು. ಅವರ ತಾಯಿ ತಮ್ಮದೇ ಪಿಎ ಪ್ರೊಡಕ್ಷನ್ಸ್ ಸಂಸ್ಥಾಪಿಸಿದ್ದು, ಈ ನಿರ್ಮಾಣ ಸಂಸ್ಥೆಯಡಿ ‘ಕೊತ್ತಲವಾಡಿ’ ಎಂಬ ಚೊಚ್ಚಲ ಚಿತ್ರ ತಯಾರಾಗಿದೆ. ಈ ಟೀಸರ್ ಬಿಡುಗಡೆ ಕಾರ್ಯಕ್ರಮ ಇಂದು ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಿರ್ಮಾಪಕಿ ಯಶ್ ಪೋಷಕರು ಪುಷ್ಪ ಅರುಣ್ ಕುಮಾರ್ (Pushpa Arun Kumar), ಅರುಣ್ ಕುಮಾರ್, ನಟ ಪೃಥ್ವಿ ಅಂಬರ್, ನಟಿ ಕಾವ್ಯ, ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ, ನಿರ್ದೇಶಕ ಶ್ರೀರಾಜ್ ಭಾಗಿಯಾಗಿದ್ದರು. ನಟ ಶರಣ್ ಅತಿಥಿಯಾಗಿ ಆಗಮಿಸಿ ಟೀಸರ್ ಅನಾವರಣ ಮಾಡಿ ಶುಭಾಶಯ ಕೋರಿದರು. ಇದನ್ನೂ ಓದಿ:‘ಜಯಹೇ ಕರ್ನಾಟಕ ಮಾತೆ’ ಎಂದು ಕನ್ನಡದಲ್ಲಿ ಮಾತನಾಡಿದ ಪವನ್ ಕಲ್ಯಾಣ್
ಟೀಸರ್ ರಿಲೀಸ್ ಮಾಡಿದ ಶರಣ್ ಮಾತನಾಡಿ, ಒಂದು ಹೊಸ ಶುರುವಾತಿನ ವೈಬ್ ಇಲ್ಲಿ ಕಾಣಿಸುತ್ತಿದೆ. ನಮ್ಮ ಯಶಸ್ಸಿನ ಗುಟ್ಟಿಗೆ ಈ ಒಗ್ಗಟ್ಟೇ ಸಾಕ್ಷಿ. ಈ ಚಿತ್ರಕ್ಕೆ ಕೆಲಸ ಮಾಡಿರುವವರ ಮುಖದಲ್ಲಿ ಕುತೂಹಲ, ಪಾಸಿಟಿವ್ ಎನರ್ಜಿ, ಭಕ್ತಿ, ಆತ್ಮೀಯತೆ, ಪ್ರೀತಿ ಇದೆ. ಇಷ್ಟು ಸಾಕು ಒಂದು ಯಶಸ್ಸಿಗೆ. ಈ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಕೊಟ್ಟಿದ್ದಕ್ಕೆ ಅಮ್ಮನಿಗೆ ಧನ್ಯವಾದ. ಇಷ್ಟು ವರ್ಷದ ಕನಸು ಲೋಕಾರ್ಪಣೆ ಮಾಡುತ್ತಿರುವ ಖುಷಿ ಚಿತ್ರತಂಡದ ಮುಖದಲ್ಲಿ ಕಾಣಿಸುತ್ತದೆ. ಇಡೀ ತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ (Pushpa Arun Kumar) ಮಾತನಾಡಿ, ನಮ್ಮ ಕೆಲಸ ನೋಡಿ ಮಾತನಾಡಬೇಕು. ನಾವು ಮಾತನಾಡಬಾರದು. ಈ ಸಿನಿಮಾನಾ ನಾವು ನೋಡಲ್ಲ. ಯಶ್ ಮನೆ ಸಿನಿಮಾ ಅಂದ್ರೆ ಇಡೀ ದೇಶ ನೋಡುತ್ತದೆ. ಅದಕ್ಕೆ ತಕ್ಕ ರೀತಿ ಮಾಡಿ. ಇಲ್ಲ ಅಂದರೆ ಮಾಡಬೇಡಿ. ಎಲ್ಲ ನಿಮಗೆ ಕೊಡುತ್ತೇವೆ. ಆರ್ಟಿಸ್ಟ್ ಯಾರು ಬೇಕು. ಎಲ್ಲಾ ಸೆಲೆಕ್ಷನ್ ಅವರೇ ಮಾಡಿದ್ದಾರೆ. ನಮ್ಮ ಬ್ಯಾನರ್ ಯಾವುದು? ಎಲ್ಲವನ್ನೂ ಯಶ್‌ಗೆ ಉತ್ತರ ಕೊಡಬೇಕು. ಯಶ್‌ನಿಂದ ನಾವು ಏನು ಕಲಿತಿದ್ದೇವೆ ಎಂದರೆ ಸಿನಿಮಾ ಏನು ಕೇಳುತ್ತದೆಯೋ ಅದು ಕೊಡಬೇಕು. ಸಿನಿಮಾಗೆ ಮೋಸ ಮಾಡಬಾರದು ಎನ್ನುವುದು. 10 ರೂಪಾಯಿ ಜಾಸ್ತಿಯಾಗಲಿ. ಕ್ವಾಲಿಟಿ ಕೊಡಬೇಕು. ಕಥೆ ಮಾತನಾಡಬೇಕು. ಅದೇ ರೀತಿ ನೀವು ಮಾಡುತ್ತೇವೆ ಎಂದರೆ ನಿಮಗೆ ಕೊಡುತ್ತೇವೆ ಎಂದು ಹೇಳಿದ್ದೆ. ಆಡಿಯನ್ಸ್ ರಿಸಲ್ಟ್ಗೆ ನಾವು ಕಾಯುತ್ತೇವೆ ಎಂದು ಹೇಳಿದರು.
ಯಶ್ ತಂದೆ ಅರುಣ್ ಕುಮಾರ್ ಮಾತನಾಡಿ, ನಿನಗೆ ಖುಷಿಯಾದರೆ ಮಾಡಮ್ಮ. ನಾನು ರೈತ. ನೀನು ಏನ್ ಬೇಕಾದರೂ ಮಾಡು ಎಂದು ಪತ್ನಿಗೆ ಬೆಂಬಲವಾಗಿ ನಿಂತಿರುವುದಾಗಿ ತಿಳಿಸಿದರು. ಇದನ್ನೂ ಓದಿ:‘ಆರ್ಯ 3’ ಟೈಟಲ್ ರಿಜಿಸ್ಟರ್ ಮಾಡಿಸಿದ ನಿರ್ಮಾಪಕ- ಸಾಥ್ ನೀಡ್ತಾರಾ ಅಲ್ಲು ಅರ್ಜುನ್?
ನಟ ಪೃಥ್ವಿ ಅಂಬರ್ (Pruthvi Ambaar) ಮಾತನಾಡಿ, ರಾಜು ಸರ್ ನನಗೆ ಮೊದಲಿನಿಂದ ಪರಿಚಯ. ನನಗೆ ಅವರು ಹೇಳಿರುವ ಎರಡನೇ ಕಥೆ. ಹಳ್ಳಿಯ ಸೊಡಗಿರುವ, ಹಳ್ಳಿಯ ಮುಗ್ದ, ಪವರ್ ಫುಲ್ ಸ್ಟ್ರಾಂಗ್ ಕ್ಯಾರೆಕ್ಟರ್ ಪ್ಲೇ ಮಾಡಬೇಕು ಎಂಬ ಮನಸ್ಸು ಇತ್ತು. ಎಲ್ಲರೂ ಚೆನ್ನಾಗಿ ಪಾತ್ರ ಮಾಡಿದ್ದಾರೆ. ಸಿನಿಮಾ ಮುಗಿದ್ರು ಪ್ರೊಡ್ಯೂಸರ್ ಯಾರು ಎಂದು ಗೊತ್ತಿರಲಿಲ್ಲ. ಪ್ರೊಡಕ್ಷನ್ ಹೌಸ್ ಮೀಟ್ ಮಾಡೋಣಾ ಎಂದು ರಾಜು ಸರ್ ಹೇಳುತ್ತಿದ್ದರು. ಪುಷ್ಪ ಮೇಡಂ ಹಾಸನದ ಮನೆಗೆ ಹೋದೆವು. ಮೀಟಿಂಗ್ ಮುಗಿಸಿ ಹೊರಟ ಬಳಿಕ ಮೇಡಂ ಕಾಲಿಗೆ ಬಿದ್ದಾಗ ನನ್ನ ಮಗನಿಗಿಂತ ಚೆನ್ನಾಗಿ ಬೆಳೆಯಪ್ಪ ಎಂದರು. ಮೇಡಂ ಬ್ರ‍್ಯಾಗ್ರೌಂಡ್ ಇಲ್ಲದವರ ಜೊತೆ ನಿಲ್ಲುತ್ತಾರೆ ಎಂಬ ನಂಬಿಕೆ ಇದೆ. ಸಿನಿಮಾ ಕಥೆಗೆ ಏನು ಬೇಕೋ ಎಲ್ಲವನ್ನೂ ಕೊಟ್ಟಿದ್ದಾರೆ. ಬಹಳ ಪ್ರೀತಿಯಿಂದ ಎಲ್ಲರೂ ಈ ಸಿನಿಮಾಗೆ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ನಿರ್ದೇಶಕ ಶ್ರೀರಾಜ್ ಮಾತನಾಡಿ, ನನಗೆ ಮೊದಲ ಬಾರಿಗೆ ಅವಕಾಶ ಕೊಟ್ಟಿರುವುದಕ್ಕೆ ಅಪ್ಪಾಜಿ-ಅಮ್ಮನಿಗೆ ಧನ್ಯವಾದ. ಅಮ್ಮನಿಗೆ ಕಥೆ ಜಡ್ಟ್ ಮೆಂಟ್ ಚೆನ್ನಾಗಿ ಮಾತನಾಡುತ್ತಾರೆ. ಆಗ ನಾನು ಕಥೆ ಹೇಳಿದೆ ಅವರು ಇದು ವರ್ಕ್ ಆಗಲ್ಲ ಎಂದರು. ನಾನು ಸಿನಿಮಾ ಮಾಡುವುದು ನನಗೆ ನಿನಗೆ ಮಾತ್ರ ಗೊತ್ತಿರಬೇಕು. ಯಾರಿಗೂ ಗೊತ್ತಾಗಬಾರದು ಎಂದು ಹೇಳಿದರು. `ಕೊತ್ತಲವಾಡಿ’ ಒನ್ ಲೈನ್ ಕಥೆ ಹೇಳಿದೆ ಅವರಿಗೆ ಇಷ್ಟವಾಯ್ತು. ಅದಕ್ಕೆ ಓಂಕಾರ ಹಾಕಿದರು. ಕಥೆ ಬರೆಯೋದಿಕ್ಕೆ ಎಂಟು ತಿಂಗಳು ಟೈಮ್ ತೆಗೆದುಕೊಂಡೆ. ಕಥೆ ಪೂರ್ತಿಯಾದಾಗ ಬಾ ಎಂದಿದ್ದರು. ಅಮ್ಮನಿಗೆ ಪೂರ್ತಿಯಾಗಿ ಕಥೆ ಹೇಳಿದೆ ಅವರಿಗೆ ಇಷ್ಟವಾಯ್ತು. ಅಲ್ಲಿಂದ ಈ ಜರ್ನಿ ಶುರುವಾಯ್ತು ಎಂದರು.
‘ಕೊತ್ತಲವಾಡಿ’ ಚಿತ್ರದ ಟೀಸರ್ ನಿರೀಕ್ಷೆಗಿಂತಲೂ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಇಷ್ಟು ದಿನ ರೋಸ್ ಹಿಡಿಯುತ್ತಿದ್ದ ಪೃಥ್ವಿ ಈಗ ಕಂಪ್ಲೀಟ್ ರಗಡ್ ಹಾಗೂ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಕ್ವಾಲಿಟಿ ಚೆನ್ನಾಗಿದೆ. ಕೊತ್ತಲವಾಡಿ ಎಂಬ ಹಳ್ಳಿಯಲ್ಲಿ ನಡೆಯುವ ಕಥೆಯನ್ನು ನಿರ್ದೇಶಕ ಶ್ರೀರಾಜ್ ಹೇಳೋದಿಕ್ಕೆ ಹೊರಟಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ, ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ ಟೀಸರ್ ಹೈಲೆಟ್.
ಹಿರಿಯ ನಿರ್ದೇಶಕರಾದ ಕೆವಿ ರಾಜು, ರವಿಶ್ರೀವತ್ಸ ಗರಡಿಯಲ್ಲಿ ಕೆಲಸ ಮಾಡಿರುವ ಶ್ರೀರಾಜ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೆಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಕನ್ನಡದ ಪ್ರತಿಭಾನ್ವಿತ ನಾಯಕ ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿದ್ದು, ಕಿರುತೆರೆ ನಟಿ ಕಾವ್ಯಾ ಶೈವ ನಾಯಕಿಯಾಗಿ ನಟಿಸುತ್ತಿದ್ದಾರೆ. ಪಿಎ ಪ್ರೊಡಕ್ಷನ್ಸ್ ಪ್ರಮುಖ ಉದ್ದೇಶ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬ ನಿಟ್ಟಿನಲ್ಲಿ ಪುಷ್ಪ ಅರುಣ್ ಕುಮಾರ್ ನಿರ್ಮಾಣ ಸಂಸ್ಥೆಯನ್ನು ಹುಟ್ಟಾಕಿದ್ದಾರೆ. ಅದರಂತೆ ಕೊತ್ತಲವಾಡಿ ಚಿತ್ರದಲ್ಲಿಯೂ ಹೊಸ ಪ್ರತಿಭೆಗಳಿಗೆ ಅವಕಾಶ ದೊರೆತಿದೆ. ಯುವ ನಿರ್ದೇಶಕರ ಜೊತೆಗೆ ಹಿನ್ನೆಲೆ ಸಂಗೀತ ಕೊಟ್ಟಿರುವ ಅಭಿನಂದನ್ ಕಶ್ಯಪ್, ಸಾಹಸ ನಿರ್ದೇಶಕ ಸಾಗರ್ ಕೂಡ ಹೊಸಬರೇ.
ಕಾರ್ತಿಕ್ ಎಸ್ ಕ್ಯಾಮೆರಾ ಕೈಚಳಕ, ರಾಮಿಸೆಟ್ಟಿ ಪವನ್ ಸಂಕಲನ, ವಿಕಾಸ್ ವಸಿಷ್ಠ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ, ಡಾ.ವಿ.ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್ ಹಾಗೂ ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ‘ಕೊತ್ತಲವಾಡಿ’ ಸಿನಿಮಾಗೆ ಇದೆ.