ಸ್ಟಾರ್ ನಟ ಯಶ್ (Yash) ಅವರ ಹುಟ್ಟುಹಬ್ಬದಂದು (ಜ.8) ರಾಕಿಭಾಯ್ ಕಟೌಟ್ ಕಟ್ಟಲು ಹೋಗಿ ಕರೆಂಟ್ ದುರಂತದಿಂದ ಮೂವರು ಮೃತಪಟ್ಟಿದ್ದರು. ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಯಶ್ ಮೃತ ಯುವಕರ ಕುಟುಂಬಕ್ಕೆ ಭೇಟಿಯಾಗಿ ಪರಿಹಾರ ಧನ ನೀಡಿದ್ದರು. ಚಿಕಿತ್ಸೆಯಲ್ಲಿದ್ದ ಗಾಯಾಳುಗಳಿಗೆ ಪರಿಹಾರ ನೀಡುವುದಾಗಿ ಯಶ್ ಭರವಸೆ ನೀಡಿ, ಯೋಗಕ್ಷೇಮ ವಿಚಾರಿಸಿದ್ದರು. ಇದೀಗ ಯಶ್ ನುಡಿದಂತೆ ನಡೆದುಕೊಂಡಿದ್ದಾರೆ. ಗಾಯಾಳುಗಳ ಕುಟುಂಬಕ್ಕೆ ನೇರವಾಗಿ 1 ಲಕ್ಷ ರೂ. ಅವರ ಖಾತೆಗೆ ವರ್ಗಾಯಿಸಿದ್ದಾರೆ. ಇದನ್ನೂ ಓದಿ:ತಂದೆ ಸಿ.ವಿ ಶಿವಶಂಕರ್ ಹಾದಿಯಲ್ಲಿ ಪುತ್ರ ವೆಂಕಟ್ ಭಾರದ್ವಾಜ್!
ಯಶ್ (Yash) ಅವರ ಹುಟ್ಟುಹಬ್ಬಕ್ಕೆ ಬೃಹತ್ ಗಾತ್ರದ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ 3 ಯುವಕರು ಸಾವನ್ನಪ್ಪಿದ ಘಟನೆ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದಲ್ಲಿ ನಡೆದಿತ್ತು. ಹನುಮಂತ ಹರಿಜನ್ (24), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (20) ಎಂಬುವವರು ನಿಧನರಾಗಿದ್ದು, ಇನ್ನೂಳಿದ ಮೂವರಿಗೆ ಗಂಭೀರ ಗಾಯಗಳಾಗಿದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಉಳಿದ ಗಾಯಾಳುಗಳ ಕುಟುಂಬಕ್ಕೆ ಯಶ್ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಜ.8ರಂದು ದುರಂತ ನಡೆದ ಸೊರಣಗಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ, ಅತಿಯಾದ ಅಭಿಮಾನ ಬೇಡ. ಇನ್ಮುಂದೆ ನನ್ನ ಹುಟ್ಟುಹಬ್ಬಕ್ಕೆ ಕಟೌಟ್ ಹಾಕಲೇಬೇಡಿ ಎಂದು ಯಶ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದರು.