ಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ (Kumbh Mela) ದಿನದಿಂದ ದಿನಕ್ಕೆ ಭಕ್ತಸಾಗರ ಹರಿದು ಬರುತ್ತಿದೆ. ಅಪಾರ ಸಂಖ್ಯೆಯಲ್ಲಿ ಕುಂಭ ಮೇಳದಲ್ಲಿ ಜನ ಭಾಗಿಯಾಗುತ್ತಿದ್ದಾರೆ. ಇದರ ನಡುವೆ ‘ಕೆಜಿಎಫ್ 2’ (KGF 2) ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರು ಮಾಸ್ಕ್ ಹಾಕಿಕೊಂಡೇ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಈ ಆಧ್ಯಾತ್ಮಿಕ ಅನುಭವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Advertisement
ಮೌನಿ ಅಮಾವಾಸ್ಯೆಯಂದು ಮಹಾಕುಂಭ ಮೇಳದಲ್ಲಿನ ತ್ರಿವೇಣಿ ಸಂಗಮದಲ್ಲಿ ನಾನು ಪವಿತ್ರವಾದ ಸ್ನಾನ ಮಾಡುತ್ತೇನೆ ಎಂದು ಕನಸು ಮನಸಿನಲ್ಲಿಯೂ ಕೂಡ ಅಂದುಕೊಂಡಿರಲಿಲ್ಲ. ಈ ಅದ್ಭುತವಾದ ಅನುಭವವನ್ನು ನಾನು ಸಂಪೂರ್ಣವಾಗಿ ಅನುಭವಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಬದುಕು ಅಚ್ಚರಿಯ ಸಂತೆ ಈ ದೈವಿಕ ಅನುಗ್ರಹ ಮತ್ತು ಆಶೀರ್ವಾದದಿಂದ ನನ್ನ ಹೃದಯ ತುಂಬಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ದರ್ಶನ್-ಪ್ರೇಮ್ ಸಿನಿಮಾ ಮಾಡೇ ಮಾಡ್ತಾರೆ – ರಕ್ಷಿತಾ
Advertisement
View this post on Instagram
Advertisement
ಅಂದಹಾಗೆ, ಯಶ್‌ಗೆ ನಾಯಕಿಯಾಗಿ ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈ ಚಿತ್ರದ ಸಕ್ಸಸ್ ಬಳಿಕ ತೆಲುಗು ಹಾಗೂ ತಮಿಳಿನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ನ್ಯಾಚುರಲ್ ಸ್ಟಾರ್ ನಾನಿಗೆ ನಾಯಕಿಯಾಗಿ ‘ಹಿಟ್ 3’ ಸಿನಿಮಾದಲ್ಲಿ ನಟಿಸಿದ್ದಾರೆ.
Advertisement