ಕನ್ನಡದ ‘ಕೆಜಿಎಫ್ 2’ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಸದ್ಯ ನಾನಿ ಜೊತೆಗಿನ ‘ಹಿಟ್ 3’ ಸಿನಿಮಾ ರಿಲೀಸ್‌ಗೆ ಎದುರು ನೋಡ್ತಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ಚಿತ್ರದ ಸಂದರ್ಶನದಲ್ಲಿ ಇಂಟ್ರೆಸ್ಟಿಂಗ್ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. ರಣಬೀರ್ ಕಪೂರ್ ನಟನೆಯ ‘ರಾಮಾಯಣ’ (Ramayana) ಚಿತ್ರ ಕೈಬಿಟ್ಟಿದ್ಯಾಕೆ ಎಂಬ ಇಂಟ್ರೆಸ್ಟಿಂಗ್ ಸಂಗತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಪಾಕ್ ನಟನ ಬಾಲಿವುಡ್ ಸಿನಿಮಾ ರಿಲೀಸ್‌ಗೆ ಬಹಿಷ್ಕಾರ
ಸಂದರ್ಶನವೊಂದರಲ್ಲಿ ನಟಿ ಮಾತನಾಡಿ, ನಾನು ಈ ಸಿನಿಮಾಗೆ ಆಯ್ಕೆ ಆಗಿದ್ದು ನಿಜ. 3 ದೃಶ್ಯಗಳಿಗೆ ತಯಾರಾಗಿ ಸ್ಕ್ರೀನ್ ಟೆಸ್ಟ್ ಕೊಟ್ಟಿದ್ದೆ, ಅದಕ್ಕೆ ಚಿತ್ರತಂಡದ ಕಡೆಯಿಂದಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಆ ವೇಳೆ, ಯಶ್ (Yash) ಕೂಡ ಈ ಸಿನಿಮಾದ ಭಾಗವಾಗ್ತಾರೆ ಎಂದು ಕೇಳಿಪಟ್ಟಿದ್ದೆ, ಅದೇ ಸಮಯದಲ್ಲೇ ‘ಕೆಜಿಎಫ್ 2’ ರಿಲೀಸ್ ಆಗಿತ್ತು. ನನ್ನ ಮತ್ತು ಯಶ್ ಜೋಡಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆಗ ನಾನು ಯೋಚಿಸಿದ್ದು ಇಷ್ಟೇ ಯಶ್ ರಾವಣನಾಗಿ, ನಾನು ಸೀತೆಯಾಗಿ ನಟಿಸಿದ್ರೆ ಅಭಿಮಾನಿಗಳು ಒಪ್ಪಿಕೊಳ್ತಾರೆ ಎಂದೆನಿಸಲಿಲ್ಲ. ಅಷ್ಟು ನಮ್ಮ ಜೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದರು. ಹಾಗಾಗಿ ಈ ಸಿನಿಮಾವನ್ನು ಬಿಟ್ಟೆ ಎಂದು ಶ್ರೀನಿಧಿ ಶೆಟ್ಟಿ ವಿವರಿಸಿದ್ದಾರೆ. ಇದನ್ನೂ ಓದಿ:ಟಾಲಿವುಡ್ ಸಿನಿಮಾದಲ್ಲಿ ಸುದೀಪ್ ಪುತ್ರಿ ಸಾನ್ವಿ- ಫ್ಯಾನ್ಸ್‌ಗೆ ಗುಡ್ ನ್ಯೂಸ್
ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಉತ್ತಮ ಆಯ್ಕೆ. ನಾನು ಅವರನ್ನು ಸೀತೆಯ ಪಾತ್ರದಲ್ಲಿ ನೋಡಲು ಇಷ್ಟಪಡುತ್ತೇನೆ ಎಂದು ಶ್ರೀನಿಧಿ ಹೇಳಿದ್ದಾರೆ. ಬೇರೆ ನಟಿಯರನ್ನು ನೋಡಿ ಹೊಟ್ಟೆ ಉರಿದುಕೊಳ್ಳುವ ಕಾಲದಲ್ಲಿ ಸಾಯಿ ಪಲ್ಲವಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಶ್ರೀನಿಧಿ ಶೆಟ್ಟಿ ನಡೆಗೆ ಫ್ಯಾನ್ಸ್ ಭೇಷ್ ಎಂದಿದ್ದಾರೆ.