ನ್ಯಾಷನಲ್ ಸ್ಟಾರ್ ಯಶ್ (Yash) ಅವರು ಇತ್ತೀಚೆಗೆ ಮಗನ 5ನೇ ವರ್ಷದ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿದರು. ಇಬ್ಬರೂ ಮುದ್ದಾದ ಮಕ್ಕಳ ಜೊತೆ ಯಶ್ ದಂಪತಿ ಕುಣಿದು ಕುಪ್ಪಳಿಸಿರುವ ಬರ್ತ್ಡೇ ಸಂಭ್ರಮದ ವಿಡಿಯೋವನ್ನು ರಾಧಿಕಾ ಪಂಡಿತ್ (Radhika Pandit) ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ತಲೆಹರಟೆ’ ಹಾಡಿಗೆ ಗಾಯಕನಾದ ನಟ ಜಗ್ಗೇಶ್
Advertisement
ಯಶ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಸಿನಿಮಾ ಕೆಲಸ ಅಂತ ಅದಷ್ಟೇ ಬ್ಯುಸಿ ಇದ್ದರೂ ಕೂಡ ಫ್ಯಾಮಿಲಿ ಸಮಯ ಮೀಸಲಿಡುತ್ತಾರೆ. ಪತ್ನಿ, ಮಕ್ಕಳ ಜೊತೆ ಕಾಲ ಕಳೆಯುತ್ತಾರೆ. ಇದೀಗ ಮಗ ಯಥರ್ವ್ 5ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
Advertisement
Advertisement
ಯಥರ್ವ್ ಮತ್ತು ಐರಾ ಜೊತೆ ತಾವು ಮಕ್ಕಳಂತೆಯೇ ಯಶ್, ರಾಧಿಕಾ ಕುಣಿದು ಎಂಜಾಯ್ ಮಾಡಿದ್ದಾರೆ. ‘ಟಗರು’ ಸಿನಿಮಾದ ಹಾಡಿಗೆ ಮಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಇಬ್ಬರೂ ಜೀನ್ಸ್- ಟೀ ಶರ್ಟ್ನಲ್ಲಿ ಮಿಂಚಿದ್ದಾರೆ. ಬಳಿಕ ಯಥರ್ವ್ ಕೈಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಯಶ್ ಮಗನ ಬರ್ತ್ಡೇ ಸಂಭ್ರಮದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಪಕ ವೆಂಕಟ್ ಅವರು ಕುಟುಂಬದ ಜೊತೆ ಭಾಗಿಯಾಗಿದ್ದಾರೆ. ನಟನ ಕುಟುಂಬದ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು.
Advertisement
View this post on Instagram
ಅಂದಹಾಗೆ, 2016ರ ಡಿ.9ರಂದು ಯಶ್ ಮತ್ತು ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಯ ದಾಂಪತ್ಯಕ್ಕೆ ಇಬ್ಬರೂ ಮಕ್ಕಳು ಸಾಕ್ಷಿಯಾಗಿದ್ದಾರೆ.