ಬೆಂಗಳೂರು: ಭಾರತ ಚಿತ್ರರಂಗದ ಬಹುನಿರಿಕ್ಷೀತ ಚಿತ್ರ ಕೆಜಿಎಫ್-2 ಚಿತ್ರ ಬಿಡುಗಡೆಯಾಗುವ ದಿನ ರಿವೀಲ್ ಆಗಿದೆ. ಕೆಜಿಎಫ್-2 ಚಿತ್ರ ಇದೇ ವರ್ಷ ಆಕ್ಟೋಬರ್ 23ರಂದು ಬಿಡುಗಡೆಯಾಗಲಿದೆ.
ಕೆಜಿಎಫ್ ಚಾಪ್ಟರ್ 1 2018ರ ಡಿಸೆಂಬರ್ 21ರಂದು ದೇಶ, ವಿದೇಶಗಳಲ್ಲಿ ಐದು ಭಾಷೆಗಳಲ್ಲಿ ತೆರೆಕಂಡು ಸೂಪರ್ ಹಿಟ್ ಫಿಲ್ಮ್ ಆಗಿ ಹೊರಹೊಮ್ಮಿತ್ತು. ಇದೀಗ ಕೆಜಿಎಫ್ ಚಾಪ್ಟರ್ 2 ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದ್ದು ದಸರಾ ಹಬ್ಬದ ಸಮಯದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
Advertisement
— Yash (@TheNameIsYash) March 13, 2020
Advertisement
ಇಡೀ ಭಾರತ ಚಿತ್ರರಂಗವೇ ಕನ್ನಡ ಸಿನಿಮಾ ಕಡೆ ತಿರುಗಿ ನೋಡುವಂತೆ ಮಾಡಿದ್ದ ಕೆಜಿಎಫ್ ಚಾಪ್ಟರ್ 1 ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈ ವಿಚಾರವಾಗಿ ಕೆಜಿಎಫ್-2 ಚಿತ್ರದ ವಿಡಿಯೋವೊಂದನ್ನು ಯಶ್ ಅವರು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೆಜಿಎಫ್-2 ಸಿನಿಮಾದ ಬಿಡುಗಡೆ ದಿನಾಂಕವನ್ನು ಹಾಕಲಾಗಿದೆ.
Advertisement
Advertisement
ಬಾಲಿವುಡ್ ನಟ ಸಂಜಯ್ ದತ್ ಹುಟ್ಟು ಹಬ್ಬದಂದು ಚಿತ್ರತಂಡ ಅಧೀರನ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ದತ್ ಗೆ ವಿಶೇಷ ಉಡುಗೊರೆ ನೀಡಿತ್ತು. ಬಿಡುಗಡೆಯ ದಿನಾಂಕ ಪ್ರಕಟವಾಗುವುದರೊಂದಿಗೆ ಕೆಜಿಎಫ್-2 ಸಿನಿಮಾ ಬಿಡುಗಡೆ ಯಾವಾಗ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಂತಾಗಿದೆ.