DistrictsHaveriKarnatakaLatestMain Post

KGF-2 ನೋಡುವ ವೇಳೆ ಕ್ಷುಲ್ಲಕ ಕಾರಣಕ್ಕೆ ಫೈರಿಂಗ್ – ಆರೋಪಿ ಪತ್ತೆಗೆ ಎರಡು ತಂಡ ರಚನೆ

ಹಾವೇರಿ: ಮಂಗಳವಾರ ರಾತ್ರಿ ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಶೂಟೌಟ್ ಮಾಡಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ನಡೆದಿದೆ. ಶೂಟೌಟ್‍ನಲ್ಲಿ ಗುಂಡು ತಗುಲಿದ ಯುವಕನನ್ನ ಶಿಗ್ಗಾಂವಿ ತಾಲೂಕಿನ ಮುಗಳಿ ಗ್ರಾಮದ ನಿವಾಸಿ ವಸಂತಕುಮಾರ್(27) ಎಂದು ಗುರುತಿಸಲಾಗಿದೆ.

ಯುವಕನ ಹೊಟ್ಟೆಯ ಭಾಗಕ್ಕೆ ಎರಡು ಗುಂಡು ಹಾಗೂ ಕೈಗೆ ಒಂದು ಗುಂಡು ತಗುಲಿವೆ. ಕೂಡಲೇ ಗಾಯಾಳುವಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾವೇರಿ ಎಸ್‍ಪಿ ಹನುಮಂತರಾಯ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕೆ.ಸಿ.ಜನರಲ್‍ನಲ್ಲೂ ತಾಯಿ-ಶಿಶು ಆಸ್ಪತ್ರೆ ‘ವಾಣಿ ವಿಲಾಸ’ ಮಾದರಿಯಲ್ಲಿ ನಿರ್ಮಾಣ: ಕೆ.ಸುಧಾಕರ್
ಸಿನಿಮಾ ನೋಡುವ ವೇಳೆಯಲ್ಲಿ ಯುವಕ ಕಾಲು ಚಾಚಿಕೊಂಡು ಕುಳಿತ್ತಿದ್ದನು. ಕಾಲು ಸರಿಸಿಕೊಂಡು ಕುಳಿತುಕೋ ಎಂದು ಹೇಳಿದಾಗ ಮಾತಿಗೆ ಮಾತು ಬೆಳೆದು ಈ ದುರ್ಘಟನೆ ನಡೆದಿದೆ. ಸೆಕೆಂಡ್ ಶೋ ವೇಳೆಯಲ್ಲಿ ಈ ಘಟನೆ ನಡೆದಿದೆ. ರಾಜಶ್ರೀ ಚಿತ್ರಮಂದಿರದಲ್ಲಿ ಬೆಂಗಳೂರಿನ ಎಫ್‍ಎಸ್‍ಎಲ್ ತಂಡವು ಶೋಧಕಾರ್ಯ ನಡೆಸಿದ್ದಾರೆ.

ಶೂಟ್ ಔಟ್ ಮಾಡಿದ ಆರೋಪಿಯ ಪತ್ತೆಗಾಗಿ ಎರಡು ತಂಡಗಳನ್ನ ರಚನೆ ಮಾಡಿ ಜಾಲ ಬಿಸಿದ್ದೇವೆ ಎಂದು ಹಾವೇರಿ ಎಸ್‍ಪಿ ಹನುಮಂತರಾಯ ಹೇಳಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published.

Back to top button