CinemaKarnatakaLatestMain PostSandalwood

100 ದಿನ ಪೂರೈಸಿದ ‘ಕೆಜಿಎಫ್ 2’ ಸಿನಿಮಾ: ಯಶ್ ಹೊಸ ಸಿನಿಮಾ ಅನೌನ್ಸ್ ಆಗಲೇ ಇಲ್ಲ

ಕೆಜಿಎಫ್ 2 ಸಿನಿಮಾ ಇದೀಗ ನೂರು ದಿನಗಳ ಪೂರೈಸಿದೆ. ಹೀಗಾಗಿ ಅಭಿಮಾನಿಗಳಿಗೆ ಮತ್ತು ಸಿನಿಮಾ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದೆ ಹೊಂಬಾಳೆ ಫಿಲ್ಮ್ಸ್‍. ನೂರು ದಿನಗಳನ್ನು ಪೂರೈಸಿರುವ ಸಂದರ್ಭದಲ್ಲಿ ಚಿತ್ರತಂಡದಿಂದ ಹೊಸ ಸುದ್ದಿ ಏನಾದರೂ ಸಿಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈ ಸಾರಿಯೂ ಚಿತ್ರತಂಡ ನಿರಾಸೆ ಮೂಡಿಸಿದೆ.

kgf 2

ಕೆಜಿಎಫ್ 2 ಸಿನಿಮಾ ಐವತ್ತು ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ಯಶ್  ನಟನೆಯ ಹೊಸ ಸಿನಿಮಾದ ಘೋಷಣೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಅಂದು ಯಾವುದೇ ಮಾಹಿತಿ ಕೊಡಲಿಲ್ಲ. ಹಾಗಾಗಿ ಶತದಿನ ಸಂದರ್ಭದಲ್ಲಾದರೂ ಸಿಹಿ ಸುದ್ದಿ ಸಿಗಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಈ ಬಾರಿಯೂ ಯಶ್ ಸಿನಿಮಾ ಬಗ್ಗೆಯಾಗಲಿ ಅಥವಾ ಕೆಜಿಎಫ್ 3 ಸಿನಿಮಾ ಬಗ್ಗೆಯಾಗಲಿ ಯಾವುದೇ ಮಾಹಿತಿಯನ್ನು ನಿರ್ಮಾಣ ಸಂಸ್ಥೆ ನೀಡಿಲ್ಲ. ಇದನ್ನೂ ಓದಿ:`ಮಾರ್ಟಿನ್’ ಆ್ಯಕ್ಷನ್ ಸೀನ್‌ಗಾಗಿ ಧ್ರುವಾ ಸರ್ಜಾ- ಎ.ಪಿ ಅರ್ಜುನ್ ಭರ್ಜರಿ ತಯಾರಿ

ತೆಲುಗಿನ ಪುಷ್ಪಾ ಸಿನಿಮಾದ ಭಾಗ 3 ಬಗ್ಗೆ ಸುದ್ದಿ ಹರಡುತ್ತಿದ್ದಂತೆಯೇ ಕೆಜಿಎಫ್ 3 ಸಿನಿಮಾದ ಬಗ್ಗೆಯೂ ಚರ್ಚೆ ನಡೆದಿದೆ. ಆದಷ್ಟು ಬೇಗ ಈ ಸುದ್ದಿಯನ್ನು ನಿರ್ದೇಶಕರಾಗಲಿ ಅಥವಾ ನಿರ್ಮಾಪಕರಾಗಲಿ ಹೇಳಲಿ ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಆದರೆ, ಇನ್ನೆರಡು ವರ್ಷ ಈ ಸಿನಿಮಾ ಬರುವುದು ಅಸಾಧ್ಯ ಎನ್ನಲಾಗುತ್ತಿದೆ. ಆದರೆ, ಭಾಗ 3 ಬರುವುದು ಪಕ್ಕಾ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ.

Live Tv

Leave a Reply

Your email address will not be published. Required fields are marked *

Back to top button