ಕೊನೆಗೂ `ಕೆಜಿಎಫ್ 2′ ಸಿನಿಮಾದ ನಿರೀಕ್ಷಿತ ಅಮ್ಮ ಹಾಡು ‘ಗಗನ ನೀ, ಭುವನ ನೀ’ ರಿಲೀಸ್ ಆಗಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ವೈರಲ್ ಆಗಿದ್ದು, ಅಮ್ಮನ ಗುಣಗಾನ ಮಾಡುವಂತಹ ಭಾವನಾತ್ಮಕ ಸಾಲುಗಳು ಕೇಳುಗರನ್ನು ಸೆಳೆದಿವೆ. ಕೆಜಿಎಫ್ ಒಂದರಲ್ಲಿ ತಾಯಿ ಮತ್ತು ಮಗನ ಭಾವನೆಗಳನ್ನು ದೃಶ್ಯ ರೂಪದಲ್ಲಿ ಸೆರೆ ಹಿಡಿಯಲಾಗಿತ್ತು. ಚಾಪ್ಟರ್ 2 ರಲ್ಲಿ ಹಾಡಿನ ಮೂಲಕವೂ ಆ ಭಾವನೆಗಳನ್ನು ದಾಟಿಸುವ ಪ್ರಯತ್ನ ಮಾಡಿದ್ದಾರೆ ಎನ್ನುವುದು ಹಾಡು ನೋಡಿದಾಗ ಅರಿವಾಗುತ್ತದೆ.

`ಕೆಜಿಎಫ್ 2′ ಆಕ್ಷನ್ ದೃಶ್ಯಗಳಿಗೆ ಅದೆಷ್ಟು ಪ್ರಾಮುಖ್ಯತೆ ಕೊಡಲಾಗಿದೆಯೋ ಹಾಗೆಯೇ ಹಾಡುಗಳಿಗೂ ಪ್ರಾಶಸ್ತ್ಯ ನೀಡಲಾಗಿದೆ. ರವಿ ಬಸ್ರೂರ್ ಸಂಗೀತ ನಿರ್ದೇಶನದಲ್ಲಿ ಈ ಹಿಂದೆ ರಿಲೀಸ್ ಆಗಿದ್ದ `ತೂಫಾನ್’ ಸಾಂಗ್ ಭರ್ಜರಿ ವಿವ್ಸ್ ಗಿಟ್ಟಿಸಿಕೊಂಡಿತ್ತು. ಈಗ ಚಿತ್ರದ ಸೆಕೆಂಡ್ ಸಾಂಗ್ ಕೂಡ ಜನರ ಮನಗೆದ್ದಿದೆ. ತಾಯಿ ಮಗನ ಬಾಂಧವ್ಯ ಸಾರುವ ಮತ್ತು ನೋಡುಗನ ಮುನಮುಟ್ಟವ ಈ ಸಾಂಗ್ ಮೂಲಕ `ಕೆಜಿಎಫ್ 2′ ಟೀಮ್ ಎಲ್ಲ ತಾಯಂದಿರಿಗೆ ಈ ಸಾಂಗ್ ಡೆಡಿಕೇಟ್ ಮಾಡಿದ್ದಾರೆ.

ನ್ಯಾಷನಲ್ ಸ್ಟಾರ್ ಯಶ್‌ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಜತೆಯಾಗಿದ್ದು, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ವಸಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಪೋಸ್ಟರ್ ಲುಕ್, ಹಾಡುಗಳ ಮೂಲಕ ಮೋಡಿ ಮಾಡುತ್ತಿರುವ `ಕೆಜಿಎಫ್ 2′ ಇದೇ ಏಪ್ರಿಲ್ 14ಕ್ಕೆ ತೆರೆಗೆ ಬರಲಿದೆ.


