ನ್ಯಾಷನಲ್ ಸ್ಟಾರ್ ಯಶ್ (Yash) ‘ಟಾಕ್ಸಿಕ್’ (Toxic) ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಜ.8ರಂದು ಯಶ್ ಹುಟ್ಟುಹಬ್ಬದ (Birthday) ಹಿನ್ನೆಲೆ ‘ಟಾಕ್ಸಿಕ್’ ಕುರಿತು ಅಪ್‌ಡೇಟ್ ತಿಳಿಸೋದಾಗಿ ಅನೌನ್ಸ್ ಮಾಡಿದ್ರೆ, ಇದರ ನಡುವೆ ನಟ ಮಂಗಳೂರಿನ (Mangaluru) ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.
Advertisement
ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಯಶ್ ಮುಖಕ್ಕೆ ಮಾಸ್ಕ್ ಹಾಕಿ ತೆರಳುವ ದೃಶ್ಯ ಸಖತ್ ವೈರಲ್ ಆಗುತ್ತಿದೆ. ‘ಟಾಕ್ಸಿಕ್’ ಸಿನಿಮಾದ ಮುಂದಿನ ಶೆಡ್ಯೂಲ್ ಶೂಟಿಂಗ್‌ಗಾಗಿ ಲೊಕೇಶನ್ ನೋಡಲು ನಟ ಮಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ. ಯಾವ ಸ್ಥಳದಲ್ಲಿ ಚಿತ್ರೀಕರಣ ಮಾಡಬೇಕು? ಏನೆಲ್ಲಾ ಯೋಜನೆಗಳಿವೆ ಎಂಬುದು ಇನ್ನೂ ಅಧಿಕೃತವಾಗಿ ತಿಳಿಯಬೇಕಿದೆ.
Advertisement
View this post on Instagram
Advertisement
ಇನ್ನೂ ಈ ಹಿಂದೆ ಕೂಡ ‘ಕೆಜಿಫ್ 2’ ಸಿನಿಮಾದ ಶೂಟಿಂಗ್ ಉಡುಪಿಯ ಮಲ್ಪೆ, ಪಡುಕೆರೆ ಭಾಗದಲ್ಲಿ ಮಾಡಲಾಗಿತ್ತು. ಶ್ರೀನಿಧಿ ಶೆಟ್ಟಿ ಜೊತೆಗಿನ ಕೆಲವು ದೃಶ್ಯಗಳನ್ನು ಉಡುಪಿಯಲ್ಲಿ ಶೂಟಿಂಗ್ ಮಾಡಿದ್ದರು.
Advertisement
ಇನ್ನೂ ಜ.8ರಂದು ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಲುಕ್ ಅನಾವರಣ ಆಗಲಿದೆ. ಬೆಳಗ್ಗೆ 10:25ಕ್ಕೆ ಅನೌನ್ಸ್ ಆಗಲಿದೆ. ಈ ಕುರಿತು ಕೆವಿಎನ್ ನಿರ್ಮಾಣ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ:BBK 11: ತ್ರಿವಿಕ್ರಮ್ ಡೇಂಜರ್ ಎಂದ ಭವ್ಯಾ ಗೌಡ
ಇನ್ನೂ ಜ.8ರಂದು ಬೆಂಗಳೂರಿನಲ್ಲಿ ಇರುವುದಿಲ್ಲ ಬರ್ತ್ಡೇ ಆಚರಣೆ ಮಾಡಲ್ಲ ಎಂದು ಫ್ಯಾನ್ಸ್ ಯಶ್ ಈಗಾಗಲೇ ಮಾಹಿತಿ ನೀಡಿದ್ದಾರೆ. ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ ಎಂದು ಯಶ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.
ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು (ಜ.8) ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಪ್ಲೆಕ್ಸ್, ಬ್ಯಾನರ್‌ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೆ, ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ ಎಂದಿದ್ದಾರೆ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ. ನಿಮ್ಮ ಪ್ರೀತಿಯ ಯಶ್ ಎಂದು ಬರೆದಿದ್ದರು.
ಅಂದಹಾಗೆ, ಕಳೆದ ವರ್ಷ ಯಶ್ ಹುಟ್ಟುಹಬ್ಬದಂದು ಅವರ ಫ್ಲೆಕ್ಸ್ ಕಟ್ಟುವಾಗ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದ ಮೂವರು ಯುವಕರು ಮೃತಪಟ್ಟಿದ್ದರು. ಹಾಗಾಗಿ ಪ್ಲೆಕ್ಸ್, ಬ್ಯಾನರ್‌ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರಬೇಡಿ ಎಂದು ಯಶ್ ಮನವಿ ಮಾಡಿದ್ದಾರೆ.