BollywoodCinemaDistrictsKarnatakaLatestLeading NewsMain PostSouth cinema

ಕೆಜಿಎಫ್-2 : ಎರಡನೇ ದಿನಕ್ಕೆ 240 ಕೋಟಿ ಬಾಚಿದ ರಾಕಿ ಭಾಯ್ : ಗ್ರೌಂಡ್ ರಿಪೋರ್ಟ್

ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾ ಈವರೆಗೂ ಬಾಕ್ಸ್ ಆಫೀಸಿನಲ್ಲಿದ್ದ ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಭಾರತೀಯ ಸಿನಿಮಾ ರಂಗದಲ್ಲೇ ಈವರೆಗೂ ಯಾವ ಚಿತ್ರಗಳು ಮಾಡದೇ ಇರುವಂತಹ ಸಾಧನೆಯನ್ನು ಕನ್ನಡದ ಹೆಮ್ಮೆಯ ಚಿತ್ರ ಕೆಜಿಎಫ್ 2 ಮಾಡಿದೆ. ಹಾಗಾಗಿ ಭಾರತೀಯ ಚಲನಚಿತ್ರ ರಂಗವೇ ಬೆರಗಿನಿಂದ ಕನ್ನಡದತ್ತ ನೋಡುತ್ತಿದೆ. ಇದನ್ನೂ ಓದಿ : ಹನುಮ ಜಯಂತಿ : ದೂರದ ಬೆಟ್ಟ ಸಿನಿಮಾದಲ್ಲಿಯ ಡಾ.ರಾಜ್ ಅವರ ಹನುಮನ ಪಾತ್ರ ಏನಾಯಿತು?

ಮೊದಲನೇ ದಿನ ಬಾಕ್ಸ್ ಆಫೀಸ್ ಕಲೆಕ್ಷನ್ ಭಾರತದಲ್ಲಿ 134.5 ಕೋಟಿ ಗಳಿಸಿತ್ತು. ಇದನ್ನು ಸ್ವತಃ ಸಿನಿಮಾ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಹೇಳಿಕೊಂಡಿತ್ತು. ಎರಡನೇ ದಿನದ ಕಲೆಕ್ಷನ್ ನಲ್ಲೂ ಕೆಜಿಎಫ್ 2 ಹಿಂದೆ ಬಿದ್ದಿಲ್ಲ. ಶುಕ್ರವಾರ ಕೂಡ 105.5  ಕೋಟಿ ಗಳಿಸಿದೆ. ಅಲ್ಲಿಗೆ ಎರಡು ದಿನದ ಒಟ್ಟು ಬಾಕ್ಸ್ ಆಫೀಸ್ ರಿಪೋರ್ಟ್ 240 ಕೋಟಿ ಆಗಿದೆ. ಇದನ್ನೂ ಓದಿ : ಹಸೆಮಣೆ ಏರಿದ ಆಲಿಯಾ-ರಣಬೀರ್‌ಗೆ ಜೋಡಿ ಕುದುರೆ ಉಡುಗೊರೆ

ಕನ್ನಡದ ಸಿನಿಮಾವೊಂದು ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾ ರಂಗದಲ್ಲಿ ಹಲವು ದಾಖಲೆಗಳನ್ನು ಬರೆದಿದೆ. ಭಾರತದಲ್ಲೇ ಎರಡು ದಿನಕ್ಕೆ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಿಂದಿಯಲ್ಲಿ ಎರಡೇ ದಿನಕ್ಕೆ ನೂರು ಕೋಟಿ ಕ್ಲಬ್ ಗೆ ಸೇರಿದ ಮೊದಲ ಸಿನಿಮಾ ಎಂಬ ಗರಿಮೆ ಕೆಜಿಎಫ್ ಚಿತ್ರದ್ದು. ಹಿಂದಿಯಲ್ಲಿ ಮೊದಲ ದಿನ 46.79 ಕೋಟಿ, ಎರಡನೇ ದಿನ 55.21 ಕೋಟಿ ಗಳಿಗೆ ಮಾಡಿ, ಬಾಲಿವುಡ್ ನಲ್ಲಿ ಕಡಿಮೆ ಅವಧಿಯಲ್ಲೇ ನೂರು ಕೋಟಿ ಕ್ಲಬ್ ಸೇರಿದ ಚಿತ್ರ ಎನಿಸಿಕೊಂಡಿದೆ. ಒಬ್ಬನೇ ಸ್ಟಾರ್ ನಟಿಸಿದ ಸಿನಿಮಾಗಳು ಈವರೆಗೂ ಇಷ್ಟೊಂದು ಕಲೆಕ್ಷನ್ ಮಾಡಿಲ್ಲ ಹಾಗಾಗಿ ಆ ಗರಿಮೆ ಯಶ್‍ ಗೆ ಸೇರಿದೆ. ಭಾರತೀಯ ಸಿನಿಮಾ ರಂಗದಲ್ಲೇ ಇದೇ ಮೊದಲ ಬಾರಿಗೆ ಕೇರಳದಲ್ಲಿ ಅತೀ ಹೆಚ್ಚು ದುಡ್ಡು ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆ ಕನ್ನಡ ಚಿತ್ರಕ್ಕೆ ಸಿಕ್ಕಿದೆ. ಕರ್ನಾಟಕದಲ್ಲಿ ಇದುವರೆಗೆ ಈ ಪ್ರಮಾಣದ ದುಡ್ಡನ್ನು ಯಾವ ಚಿತ್ರಗಳು ತಂದುಕೊಟ್ಟಿಲ್ಲ ಎನ್ನುವುದು ಖುಷಿ ಪಡಬೇಕಾದ ಸಂಗತಿ.  ಇದನ್ನೂ ಓದಿ : ಕೆಜಿಎಫ್-2 ಬಾಲಿವುಡ್ ಮೇಲೆ ಹಾಕಿದ ಅಣುಬಾಂಬ್ : ರಾಮ್ ಗೋಪಾಲ್ ವರ್ಮಾ

ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸಿನ ಎಲ್ಲಾ ದಾಖಲೆಗಳನ್ನು ಉಢೀಸ್ ಮಾಡಿದೆ. ಬಿಡುಗಡೆಯಾದ ಒಂದೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಕೇವಲ ಗಲ್ಲಾಪೆಟ್ಟಿಗೆ ಮಾತ್ರವಲ್ಲ, ವಿಮರ್ಶಕರು ಕೂಡ ಸಿನಿಮಾವನ್ನು ಕೊಂಡಾಡಿದ್ದಾರೆ.

Leave a Reply

Your email address will not be published.

Back to top button