BollywoodCinemaDistrictsKarnatakaLatestMain PostSandalwood

420 ಕೋಟಿ ಕಲೆಕ್ಷನ್ ಮಾಡಿ ಬಾಲಿವುಡ್ ನಿದ್ದೆಗೆಡಿಸಿದ ಕೆಜಿಎಫ್ 2

ಬಾಕ್ಸಾಫೀಸ್ ಸುಲ್ತಾನ್ ಆಗಿ ಮಿಂಚ್ತಿರೋ ರಾಕಿಭಾಯ್ ದಿನದಿಂದ ದಿನಕ್ಕೆ ದಾಖಲೆಗಳ ಸುರಿಮಳೆನೇ ಹರಿಸುತ್ತಿದ್ದಾರೆ. ವಿಶ್ವದ ಮೂಲೆ ಮೂಲೆಯಲ್ಲೂ ಬಿಡದೇ ಕಲೆಕ್ಷನ್ ಮಾಡುತ್ತಿರುವ ಏಕೈಕ ಕನ್ನಡದ ಸಿನಿಮಾ `ಕೆಜಿಎಫ್ 2′ ಪ್ಯಾನ್ ಇಂಡಿಯಾ ಸಿನಿಮಾ ಆಗಿ ರಾರಾಜಿಸುತ್ತಿದೆ. ಸದ್ಯ ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ 420.70 ಕೋಟಿ ಕಲೆಕ್ಷನ್ ಮಾಡಿ, ಮುನ್ನುಗ್ಗುತ್ತಿದೆ.

ಕನ್ನಡದ ಸಿನಿಮಾವೊಂದು ಪರಭಾಷೆಗಳಲ್ಲಿ, ಹೊರದೇಶದಲ್ಲಿ ಸುದ್ದಿ ಮಾಡುತ್ತಾ ರಿಲೀಸ್ ಆಗಿ ಒಂದು ತಿಂಗಳು ಕಳೆದರು ಕಲೆಕ್ಷನ್ ವಿಚಾರದಲ್ಲಿ ಎಲ್ಲೂ ಹಿಂದೆ ಬೀಳದೇ ಮುನ್ನುಗುತ್ತಿರುವ ಏಕೈಕ ಚಿತ್ರ ಅಂದ್ರೆ ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ. ಈ ಚಿತ್ರದ ಸದ್ಯದ ಕಲೆಕ್ಷನ್ ಅಪ್‌ಡೇಟ್ 420.70 ಕೋಟಿ ಕಲೆಕ್ಷನ್ ಮಾಡಿ, 500 ಕೋಟಿ ಕಲೆಕ್ಷನ್ ಮಾಡುವತ್ತ ಸಾಗುತ್ತಿದೆ. ಇದನ್ನೂ ಓದಿ: ಕನ್ನಡದ ‘ಲಾಕ್ ಡೌನ್’ ಸಿನಿಮಾ ನಟಿ ಶಹಾನಾ ಅನುಮಾನಾಸ್ಪದ ಸಾವು – ಪತಿ ವಶಕ್ಕೆ

ಹಿಂದಿ ಸಿನಿಮಾಗಳಿಗೆ ಟಕ್ಕರ್ ಕೊಟ್ಟು ಬಾಕ್ಸಾಫೀಸ್‌ನಲ್ಲಿ ಯಶ್ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಈಗಾಗಲೇ ವರ್ಲ್ಡ್ ವೈಡ್ ಕಲೆಕ್ಷನ್ 1000 ಕೋಟಿ ಬಾಚಿದೆ. ಇನ್ನು 2000 ಕೋಟಿ ಕಲೆಕ್ಷನ್ ಮಡಿದ್ರು ಅಚ್ಚರಿಪಡಬೇಕಿಲ್ಲ. ಅಷ್ಟರ ಮಟ್ಟಿಗೆ ಈ ಸಿನಿಮಾ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

Leave a Reply

Your email address will not be published.

Back to top button