Bengaluru CityBollywoodCinemaKarnatakaLatestMain PostSandalwood

ಬಾಕ್ಸಾಫೀಸ್ ಪೀಸ್ ಪೀಸ್: ಟಾಪ್ ಎರಡನೇ ಸ್ಥಾನಕ್ಕೆ `ಕೆಜಿಎಫ್ 2′

ಸಿನಿದುನಿಯಾದಲ್ಲಿ ಸದ್ಯ ಸೌಂಡ್ ಮಾಡ್ತಿರೋ ಸಿನಿಮಾ ಅಂದ್ರೆ ಯಶ್ ನಟನೆಯ ಬ್ಲಾಕ್ ಬಸ್ಟರ್ ಚಿತ್ರ `ಕೆಜಿಎಫ್ ೨’ ದಿನದಿಂದ ದಿನಕ್ಕೆ ರಾಕಿಭಾಯ್ ಸಿನಿಮಾ ರೆಕಾರ್ಡ್ ಬ್ರೇಕ್ ಮಾಡ್ತಿದೆ. ಹಿಂದಿ ಕಲೆಕ್ಷನ್‌ನಲ್ಲಿ 400 ಕೋಟಿಯತ್ತ ಮುನ್ನುಗ್ಗುತ್ತಿರುವ `ಕೆಜಿಎಫ್ 2′ ಮತ್ತೊಂದು ಹೊಸ ದಾಖಲೆ ಬರೆದಿದೆ. ಒಟ್ಟು ಗಳಿಕೆಯ ವಿಚಾರಕ್ಕೆ ಬಂದ್ರೆ `ಕೆಜಿಎಫ್ 2′ ಎರಡನೇ ಸ್ಥಾನದಲ್ಲಿದೆ.

ಅದ್ಯಾವಾಗ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಕೆಜಿಎಫ್ ಸಿನಿಮಾ ಕಥೆ ರೆಡಿ ಮಾಡಿದ್ರೋ ಏನೋ ಕೆಜಿಎಫ್ ಚಾಪ್ಟರ್ ಒನ್‌ಯಿಂದ ಶುರುವಾದ ಗೆಲುವಿನ ಓಟ `ಕೆಜಿಎಫ್ ಚಾಪ್ಟರ್ 2′ ರಿಲೀಸ್ ಆಗಿ 21 ದಿನ ಕಳೆದರು. ಕಲೆಕ್ಷನ್‌ನಲ್ಲಿ ಎಲ್ಲೂ ಕುಗ್ಗದೇ ಗಲ್ಲಾಪೆಟ್ಟಿಗೆಯಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ.

ಇತ್ತೀಚೆಗೆ `ಕೆಜಿಎಫ್ 2′ ವರ್ಲ್ಡ್ ವೈಡ್ ಕಲೆಕ್ಷನ್ 1000 ಸಾವಿರಕ್ಕೂ ಅಧಿಕ ಕೋಟಿ ಬಾಚಿದ್ರೆ, ಇದೀಗ ಹಿಂದಿ ಬಾಕ್ಸಾಫೀಸ್‌ನಲ್ಲಿ 400 ಕೋಟಿ ಕಲೆಕ್ಷನ್ ಮಾಡುತ್ತಾ ಹಿಂದಿ ಸಿನಿಮಾಗಳಿಗೆ ಸೆಡ್ಡು ಹೊಡೆದು ಮುನ್ನುಗ್ಗುತ್ತಿದೆ. ಹಿಂದಿಯಲ್ಲಿ ಯಶ್‌ ಸಿನಿಮಾ ಸದ್ಯ 391.65 ಕೋಟಿ ಗಳಿಕೆ ಮಾಡಿದೆ. ಹಿಂದಿಯ ʻದಂಗಲ್ʼ ಚಿತ್ರ ಮತ್ತು 410 ಕೋಟಿ ಕಲೆಕ್ಷನ್‌ ಮಾಡಿ ಅಗ್ರಸ್ಥಾನದಲ್ಲಿದೆ. `ಕೆಜಿಎಫ್ 2′ ಟಾಪ್ ಎರಡರ ಸ್ಥಾನವನ್ನ ಅಲಂಕರಿಸಿದೆ. ಇದನ್ನೂ ಓದಿ: ಅಮ್ಮನಾಗ್ತಿದ್ದಾರೆ ಕಿರುತೆರೆ ನಟಿ ರಶ್ಮಿ ಜಯರಾಜ್: ಬೇಬಿ ಬಂಪ್ ಫೋಟೋಸ್ ವೈರಲ್

ಒಟ್ನಲ್ಲಿ ಪ್ರಶಾಂತ್ ನೀಲ್ ಡೈರೆಕ್ಷನ್ ಪ್ಲಸ್ ಯಶ್ ಆಕ್ಟಿಂಗ್ ಜತೆ ತಂಡದ ಎಲ್ಲರ ಪರಿಶ್ರಮ ಸೇರಿ ಗೆಲುವಿನ ಜಯಭೇರಿ ಬಾರಿಸಿರೋ `ಕೆಜಿಎಫ್ 2′ ಕಲೆಕ್ಷನ್ ನೋಡಿ 2000 ಸಾವಿರಕ್ಕೂ ಅಧಿಕ ಕೋಟಿ ಗಳಿಕೆ ಮಾಡಿದ್ರು ಅಚ್ಚರಿ ಪಡಬೇಕಿಲ್ಲ ಅಂತಾ ಸಿನಿಪಂಡಿತರು ಚಿತ್ರದ ಬಗ್ಗೆ ಮಾತಾನಾಡ್ತಿದ್ದಾರೆ.

Leave a Reply

Your email address will not be published.

Back to top button