ಕನ್ನಡದ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಮತ್ತೆ ಬೆಳ್ಳಿಪರದೆಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಮಿಂಚಲು ಸಜ್ಜಾಗಿದ್ದಾರೆ. 3 ವರ್ಷಗಳ ಬಳಿಕ ಮತ್ತೆ ಬೆಳ್ಳಿಪರದೆಯತ್ತ ನಟಿ ಎಂಟ್ರಿ ಕೊಡ್ತಿದ್ದಾರೆ. ಯಾವೆಲ್ಲಾ ಸಿನಿಮಾಗಳು ಕುಡ್ಲದ ಬೆಡಗಿ ಕೈಯಲ್ಲಿದೆ ಗೊತ್ತಾ? ಇಲ್ಲಿದೆ ವಿವರ. ಇದನ್ನೂ ಓದಿ:ಟ್ರೋಲ್‌ಗೆ ಡೋಂಟ್ ಕೇರ್ ಎನ್ನುತ್ತಾ ಮಿನಿ ಡ್ರೆಸ್‌ನಲ್ಲಿ ಮಿಂಚಿದ ನಿವೇದಿತಾ ಗೌಡ
ರಾಕಿಂಗ್ ಸ್ಟಾರ್ ಯಶ್‌ಗೆ (Yash) ನಾಯಕಿಯಾಗಿ ಸತತ 5 ವರ್ಷಗಳ ಕಾಲ ‘ಕೆಜಿಎಫ್ 1’ ಮತ್ತು ‘ಕೆಜಿಎಫ್ 2’ಗೆ (KGF 2) 5 ವರ್ಷ ಮೀಸಲಿಟ್ಟು ಗೆದ್ದು ಬೀಗಿದ್ದರು. ಆ ನಂತರ ಚಿಯಾನ್ ವಿಕ್ರಮ್‌ಗೆ ನಾಯಕಿಯಾಗಿ ‘ಕೋಬ್ರಾ’ ಮೂಲಕ ಹಿಟ್ ಕೊಡಲು ರೆಡಿಯಾದ್ರು. ಆದರೆ ಅದ್ಯಾಕೋ ಸಕ್ಸಸ್ ಸಿಗದೇ ನಟಿ ಸೈಲೆಂಟ್ ಆದರು. ಈಗ ಬರೋಬ್ಬರಿ 3 ಬಿಗ್ ಪ್ರಾಜೆಕ್ಟ್‌ಗಳ ಮೂಲಕ ಮೂರು ವರ್ಷಗಳ ಬಳಿಕ ಕೆಜಿಎಫ್ ಕ್ವೀನ್ ಶ್ರೀನಿಧಿ ಬರುತ್ತಿದ್ದಾರೆ.
ನ್ಯಾಚುರಲ್ ಸ್ಟಾರ್ ನಾನಿ (Nani) ಜೊತೆ ಹಿಟ್ 3, ಸಿದ್ದು ಜೊನ್ನಲಗಡ್ಡ ಜೊತೆ ‘ತೆಲುಸು ಕದಾ’ ಸಿನಿಮಾಗಳನ್ನ ಮಾಡಿದ್ದಾರೆ. ಕಿಚ್ಚ ಸುದೀಪ್ ನಟನೆಯ ‘ಕಿಚ್ಚ 47’ ಸಿನಿಮಾಗೂ ಇವರೇ ನಾಯಕಿ ಅನ್ನೋದು ಚಿತ್ರತಂಡದ ಕಡೆಯಿಂದ ಅಧಿಕೃತವಾಗಿದೆ. ಅಲ್ಲಿಗೆ ‘ಕೆಜಿಎಫ್’ (KGF) ಕ್ವೀನ್ ಈಸ್ ಬ್ಯಾಕ್. ಹೊಸ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸೋಕೆ ನಟಿ ರೆಡಿಯಾಗಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.