‘ಕೆಜಿಎಫ್ 2′ (KGF 2) ಸಿನಿಮಾದ ಸಕ್ಸಸ್ ನಂತರ ‘ಟಾಕ್ಸಿಕ್’ (Toxic Film) ಸಿನಿಮಾ ಕೆಲಸದಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ಹುಲಿ ಚಿತ್ರವನ್ನೇ ಡಾಲರ್ ಆಗಿ ಯಶ್ ಧರಿಸಿದ್ದು, ಇದರ ಮೇಲೆ ಎಲ್ಲರ ಕಣ್ಣಿದೆ. ಯಶ್ ಧರಿಸಿದ ಡಾಲರ್ ಈಗ ಸಖತ್ ಸದ್ದು ಮಾಡುತ್ತಿದೆ.
ಇತ್ತೀಚೆಗೆ ಯಶ್ (Yash) ಮನೆಯಲ್ಲಿ ಸರಳವಾಗಿ ವರಮಹಾಲಕ್ಷ್ಮಿ ಪೂಜೆ ಜರುಗಿದೆ. ಈ ಕುರಿತ ಸುಂದರ ಫೋಟೋಗಳನ್ನು ಪತ್ನಿ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವೇಳೆ, ಪಂಚೆ ಮತ್ತು ಶರ್ಟ್ ಅನ್ನು ಯಶ್ ಧರಿಸಿಕೊಂಡಿದ್ದಾರೆ. ಅದರ ಜೊತೆಗೆ ಯಶ್ ಅವರು ಧರಿಸಿದ್ದ ಗೋಲ್ಡ್ ಕಲರ್ ಟೈಗರ್ ಡಾಲರ್ ಬಗ್ಗೆ ಚರ್ಚೆ ಶುರುವಾಗಿದೆ.
ಸದ್ಯ ಎಲ್ಲರ ಕಣ್ಣು ರಾಕಿಭಾಯ್ ಧರಿಸಿದ ಡಾಲರ್ ಮೇಲಿದೆ. ಹುಲಿ ಚಿತ್ರವನ್ನು ಡಾಲರ್ ಆಗಿ ಹಾಕಿಕೊಂಡಿರುವ ಯಶ್‌ರನ್ನು ರಿಯಲ್ ಹುಲಿ ಎಂದೆಲ್ಲಾ ಹಾಡಿಹೊಗಳುತ್ತಿದ್ದಾರೆ ಫ್ಯಾನ್ಸ್. ಇದನ್ನೂ ಓದಿ:‘ಧ್ರುವತಾರೆ’ ಸಿನಿಮಾದಲ್ಲಿ ವಿಲನ್ ಆದ ಕಾರ್ತಿಕ್ ಮಹೇಶ್
ಇನ್ನೂ ‘ಟಾಕ್ಸಿಕ್’ ಚಿತ್ರವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರೀಕರಣ ಕೂಡ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ. 2025ರಲ್ಲಿ ಸಿನಿಮಾ ರಿಲೀಸ್ ಆಗಲಿದೆ.