ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಬರ್ತ್‌ಡೇ ಪಾರ್ಟಿಯಲ್ಲಿ ಪತಿ ಯಶ್ (Yash) ಅವರು ಹಾಡೊಂದನ್ನು ಹಾಡಿದ್ದಾರೆ. ಶಂಕರ್‌ನಾಗ್ ನಟನೆಯ ಸಿನಿಮಾದ ಹಾಡನ್ನು ಪತ್ನಿಯ ಹುಟ್ಟುಹಬ್ಬದಂದು ಪ್ರೀತಿಯಿಂದ ಹಾಡಿದ್ದಾರೆ. ಪತಿ ಯಶ್ ‘ಜೊತೆಯಲಿ ಇರುವೆನು ಹೀಗೆ’ ಎಂದು ಹಾಡಿದ ಹಾಡನ್ನು ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಹಂಚಿಕೊಂಡಿದ್ದಾರೆ.
View this post on Instagram
Advertisement
ಯಶ್ ಅವರು ‘ಜೊತೆಯಲಿ ಜೊತೆ ಜೊತೆಯಲಿ’ ಹಾಡನ್ನು ಹಾಡಿದ್ದಾರೆ. ಪತಿ ತಮಗಾಗಿ ಹಾಡು ಹಾಡಿದ ವಿಡಿಯೋವನ್ನು ರಾಧಿಕಾ ಪಂಡಿತ್ ಶೇರ್ ಮಾಡಿದ್ದಾರೆ. ಯಶ್ ಹಾಡುವಾಗ ರಾಧಿಕಾ ಸಖತ್ ಆಗಿ ಎಂಜಾಯ್ ಮಾಡಿದ್ದಾರೆ. ಯಾವಾಗಲೂ ಇದು ನಮ್ಮ ಹಾಡು. ಈಗಲೂ ಇದನ್ನು ಕೇಳಿದಾಗ ನನ್ನ ಹೃದಯ ಓಡುತ್ತದೆ ಎಂದು ರಾಧಿಕಾ ಅವರು ರೆಡ್ ಹಾರ್ಟ್ ಎಮೋಜಿ ಹಾಕಿ ದೃಷ್ಟಿ ಎಮೋಜಿಯನ್ನು ಹಾಕಿದ್ದಾರೆ. ಈ ಜೋಡಿಯ ನಡುವಿನ ಪ್ರೀತಿ ನೋಡಿ ಫ್ಯಾನ್ಸ್ ಹಾಡಿ ಹೊಗಳಿದ್ದಾರೆ.
Advertisement
View this post on Instagram
Advertisement
ಅಂದಹಾಗೆ, ರಾಧಿಕಾ ಪಂಡಿತ್ ಅವರು ಮಾರ್ಚ್ 7ರಂದು ಹುಟ್ಟುಹಬ್ಬದ ಹಿನ್ನೆಲೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಬರ್ತ್‌ಡೇ ಆಚರಿಸಿಕೊಂಡಿದ್ದರು.
Advertisement
View this post on Instagram
ಆ ನಂತರ ಖಾಸಗಿ ಹೋಟೆಲ್‌ವೊಂದರಲ್ಲಿ ಗ್ರ್ಯಾಂಡ್ ಆಗಿ ಪತ್ನಿಯ ಹುಟ್ಟುಹಬ್ಬವನ್ನು ಆಪ್ತರ ಸಮ್ಮುಖದಲ್ಲಿ ಯಶ್ ಆಯೋಜಿಸಿದ್ದಾರೆ. ಲೈಟ್ ಕಲರ್ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಕುಟುಂಬದ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.