ನ್ಯಾಷನಲ್ ಸ್ಟಾರ್ ಯಶ್- ರಾಧಿಕಾ ಪಂಡಿತ್ (Radhika Pandit) ಜೋಡಿ ಇತ್ತೀಚಿಗೆ ದಕ್ಷಿಣ ಕಾಶಿ ನಂಜನಗೂಡಿಗೆ ಭೇಟಿ ಕೊಟ್ಟಿದ್ದರು. ಮುಂದಿನ ಸಿನಿಮಾ ಬಗ್ಗೆ ಸದ್ಯದಲ್ಲೇ ಅಪ್‌ಡೇಟ್ ಕೊಡ್ತೀನಿ ಎಂದು ಯಶ್ (Yash) ಸಿಹಿಸುದ್ದಿ ನೀಡಿದ್ರು. ಈ ಬೆನ್ನಲ್ಲೇ ಯಶ್, ಫ್ಯಾಮಿಲಿ ಜೊತೆ ವೆಕೇಷನ್‌ಗೆ ಹೋಗಿದ್ದಾರೆ. ಹಳ್ಳಿಯ ಸುಂದರ ತಾಣಗಳಿಗೆ ಭೇಟಿ ನೀಡಿದ್ದಾರೆ. ಈ ಕುರಿತ ಫೋಟೋಗಳನ್ನ ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ಸ್ಟೈಲೀಶ್ ಆಗಿ ಕಾಣಿಸಿಕೊಂಡ ‘ಬಿಗ್ ಬಾಸ್’ ಸಾನ್ಯ ಅಯ್ಯರ್
‘ಕೆಜಿಎಫ್ 2’ (KGF2) ಸಿನಿಮಾದ ಸೂಪರ್ ಸಕ್ಸಸ್ ನಂತರ ಯಶ್ ಸೈಲೆಂಟ್ ಆಗಿದ್ದಾರೆ. ಸದ್ದಿಲ್ಲದೇ ಹೊಸ ಸಿನಿಮಾಗೆ ತಾಲೀಮು ನಡೆಸುತ್ತಿದ್ದಾರೆ. ಯಶ್ ಏನೇ ಮಾಡಿದ್ರು ಅದು ಸುದ್ದಿಯಾಗುತ್ತಿದೆ. ಹೀಗಿರುವಾಗ ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ಸುಳಿವು ನೀಡದೇ ಸೈಲೆಂಟ್ ಆಗಿ ಕೆಲಸ ಮಾಡ್ತಿದ್ದಾರೆ. ಯಶ್- ರಾಧಿಕಾ ಕುಟುಂಬ ಪ್ರವಾಸದಲ್ಲಿದ್ದಾರೆ. ತಮ್ಮ ಮಕ್ಕಳಿಗೆ ಪ್ರಕೃತಿಯನ್ನು ಹತ್ತಿರದಿಂದ ತೋರಿಸುತ್ತಿದ್ದಾರೆ.
ಯಶ್ ದಂಪತಿಯ ಮುದ್ದಾದ ಮಕ್ಕಳು ಐರಾ, ಯಥರ್ವ್ ತಮ್ಮ ಬಾಲ್ಯವನ್ನು ಪ್ರಕೃತಿಯ ನಡುವೆ ಎಂಜಾಯ್ ಮಾಡ್ತಿದ್ದಾರೆ. ಯಶ್-ರಾಧಿಕಾ, ಹಳ್ಳಿಯ ಫಾರ್ಮ್ ಹೌಸ್‌ನಲ್ಲಿ ಸುತ್ತಾಡುತ್ತಿದ್ದಾರೆ. ಐರಾ- ಯಥರ್ವ್ ಇಬ್ಬರು ಹುಲ್ಲುಮಿಡತೆ ನೋಡುತ್ತಿರುವ ಫೋಟೋ ಸೇರಿದಂತೆ ಹಲವು ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ.
ಇನ್ನೂ ಯಶ್ (Yash 19)ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಕೌತುಕ ನಿರ್ಮಾಣವಾಗಿದೆ. ಹಾಗೆಯೇ ರಾಧಿಕಾ ಪಂಡಿತ್ (Radhika Pandit) ಕಂಬ್ಯಾಕ್ ಬಗ್ಗೆ ಕೂಡ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಅದರಲ್ಲೂ ಯಶ್- ರಾಧಿಕಾ ಒಟ್ಟಿಗೆ ನಟಿಸಿದ್ರೆ ಎಷ್ಟು ಚೆನ್ನಾಗಿರುತ್ತೆ ಅಭಿಮಾನಿಗಳು ಲೆಕ್ಕಚಾರ ಹಾಕ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯಶ್ ಜೋಡಿಗೆ ಮನವಿ ಮಾಡ್ತಿದ್ದಾರೆ.
ಸಿನಿಮಾ ಕೆಲಸಗಳ ಮಧ್ಯೆಯೇ ಬಿಡುವು ಮಾಡಿಕೊಂಡು ಫ್ಯಾಮಿಲಿಗೆ ಟೈಮ್ ಕೊಟ್ಟಿದ್ದಾರೆ ಯಶ್. ಕಳೆದ ವಾರ ಯಶ್ ಅವರು ಮೈಸೂರು ಭಾಗದಲ್ಲಿ ಪ್ರವಾಸದಲ್ಲಿದ್ದರು. ನಾಗರ ಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿ ನಡುವೆ ಶ್ರೀಕಂಠೇಶ್ವರ ದೇವರಿಗೆ ಪೂಜೆ ನೆರವೇರಿಸಿದ್ದಾರೆ. ಮೈಸೂರು ಯಶ್ ಅವರ ಹುಟ್ಟೂರು. ಅಲ್ಲದೇ, ಮೈಸೂರಿಗೆ ಹೋದಾಗೆಲ್ಲ ಯಶ್ ಹೀಗೆ ಪ್ರವಾಸ ಮಾಡುತ್ತಲೇ ಇರುತ್ತಾರೆ. ಇಷ್ಟದ ಸ್ಥಳಗಳಿಗೆ ಈ ಬಾರಿ ಹೆಂಡತಿ ಮತ್ತು ಹೆಂಡತಿ ಕುಟುಂಬವನ್ನು ಅವರು ಕರೆದುಕೊಂಡು ಹೋಗಿದ್ದಾರೆ. ಈ ಬಾರಿ ಮಕ್ಕಳಿಗೂ ತಮ್ಮ ಹುಟ್ಟೂರು ತೋರಿಸಿದ್ದಾರೆ ರಾಕಿಂಗ್ ಸ್ಟಾರ್.