ಮಂತ್ರಿಯೊಂದಿಗೆ ನನ್ನ ಪತ್ನಿಗೆ ಅಫೇರ್ ಇತ್ತು- ಶಾಕಿಂಗ್ ಹೇಳಿಕೆ ಕೊಟ್ಟ ಸಂಜಯ್ ದತ್

Public TV
2 Min Read
sanjay dutt

ಬಾಲಿವುಡ್ (Bollywood) ನಟ ಸಂಜಯ್ ದತ್ (Sanjay Dutt) ಸಾಕಷ್ಟು ತಪ್ಪುಗಳನ್ನ ಮಾಡಿ, ಅದನ್ನ ತಿದ್ದಿಕೊಂಡು ಒಳ್ಳೆಯ ದಾರಿ ಹಿಡಿದಿದ್ದಾರೆ. ಬಳಿಕ ಅವರ ನಿಜ ಬದುಕು ಸಿನಿಮಾ ರೂಪದಲ್ಲಿ ತೆರೆ ಕಂಡಿತ್ತು. ಇದೀಗ ಕರಣ್ ಜೋಹರ್ ನಿರೂಪಣೆಯ ‘ಕಾಫಿ ವಿತ್ ಕರಣ್’ (Koffee With Karan) ಶೋನಲ್ಲಿ ಸಂಜಯ್ ಶಾಕಿಂಗ್ ಹೇಳಿಕೆಯೊಂದನ್ನ ಬಿಚ್ಚಿಟ್ಟಿದ್ದಾರೆ. ಮಂತ್ರಿಯೊಂದಿಗೆ ನನ್ನ ಪತ್ನಿಗೆ ಅಫೇರ್ ಇತ್ತು, ಅದಕ್ಕೆ ಆಕೆಯನ್ನ ಕೊಂದೆ ಎಂದು ಸಂಜಯ್ ದತ್ ಮಾತನಾಡಿದ್ದಾರೆ.

Sanjay Dutt 2

ಇತ್ತೀಚೆಗೆ ಸಂಜಯ್ ದತ್, ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಶೋನಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಕರಣ್ ಜೊತೆ ಮಾತಾಡುವಾಗ ಸಂಜಯ್ ದತ್ ಕೆಲವು ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದರು. ಸಂಜಯ್ ಶೋನಲ್ಲಿ ನನ್ನ ಪತ್ನಿ ಮಂತ್ರಿಯೊಂದಿಗೆ ಅಫೇರ್ ಇಟ್ಟುಕೊಂಡಿದ್ದಳು. ಅವಳನ್ನು ಕೊಂದು ಬಿಟ್ಟೆ. ಅದೇ ಕರ್ಮ ಇಂದು ನನ್ನನ್ನು ಕಾಡುತ್ತಿದೆ ಎಂದು ಹೇಳಿದರು. ಆದರೆ ಅದು ಈ ಜನ್ಮದಲ್ಲಿ ಅಲ್ಲ. ತಮ್ಮ ಕಳೆದ ಜನುಮದಲ್ಲಿ ನಡೆದ ವಿಷಯ ಎಂದು ಹೇಳಿದ್ದಾರೆ. ಇದನ್ನೂ ಓದಿ:ಟ್ರೈಲರ್ ಮೂಲಕ ಕಿಚ್ಚು ಹಚ್ಚಿದ `ಇನಾಮ್ದಾರ್’ ಸಿನಿಮಾ

Sanjay Dutt 4

ಅಶೋಕ ಸಾಮ್ರಾಜ್ಯವಿದ್ದ ಕಾಲದಲ್ಲಿ ನಾನು ರಾಜನಾಗಿದ್ದೆ. ನನ್ನ ಮಂತ್ರಿಯೊಂದಿಗೆ ನನ್ನ ಪತ್ನಿ ಅಫೇರ್ ಇಟ್ಟುಕೊಂಡಿದ್ದಳು. ನಾನು ಸಾಯಲಿ ಅಂತಾನೇ ಯುದ್ದಕ್ಕೆ ಕಳುಹಿಸಿದ್ದಳು. ಆದರೆ, ನಾನು ಸಾಕಷ್ಟು ಯೋಧರನ್ನು ಯುದ್ಧದಲ್ಲಿ ಸಾಯಿಸಿದೆ. ಯುದ್ದದ ನಂತರ ಇಬ್ಬರ ಮದ್ಯೆ ಇದ್ದ ಅಫೇರ್ ಬಗ್ಗೆ ಗೊತ್ತಾಗಿ, ನಾನು ನನ್ನ ಪತ್ನಿ ಹಾಗೂ ಮಂತ್ರಿ ಸಾಯಿಸಿ ಬಿಟ್ಟೆ ಎಂದು ಸಂಜಯ್ ದತ್ ಹೇಳಿದ್ದಾರೆ.

sanjay dutt

ಕಳೆದ ಜನ್ಮದಲ್ಲಿ ಮಾಡಿದ್ದ ತಪ್ಪಿಗೆ ಈ ಜನ್ಮದಲ್ಲಿ ಅದರ ಕರ್ಮವನ್ನು ಅನುಭವಿಸಬೇಕಾಗಿದೆ. ಹಿಂದಿನ ಜನ್ಮದಿಂದಲೇ ನಾನು ಒಳ್ಳೆಯ ಕುಟುಂಬದಲ್ಲಿ ಹುಟ್ಟಿದೆ. ಹಾಗಾಗಿಯೇ ನಾನು ಈಗ ಬದುಕಿದ್ದೇನೆ. ಆ ಕಾರಣಕ್ಕೆ ನಾನು ಈ ವೃತ್ತಿಯಲ್ಲಿದ್ದೇನೆ ಎಂದು ಸಂಜಯ್ ಹೇಳಿದ್ದರು. ಅಲ್ಲದೆ, ತಾಯಿ ನರ್ಗೀಸ್ ದತ್, ಮೊದಲ ಪತ್ನಿ ರಿಚಾ ಶರ್ಮಾ ಕಳೆದುಕೊಂಡಿದ್ದು, ಜೈಲುವಾಸ ಇದೆಲ್ಲವೂ ಹೋದ ಜನ್ಮದ ಕರ್ಮದ ಫಲ ಎಂದು ಸಂಜಯ್ ದತ್ ಹೇಳಿಕೊಂಡಿದ್ದಾರೆ.

ಸಂಜಯ್ ದತ್ (Sanjay Dutt) ನಿಜ ಬದುಕಿನಲ್ಲಿ ಮೂರು ಮದುವೆ ಆಗಿದ್ದಾರೆ. ಮೊದಲು ರೀಚಾ ಶರ್ಮಾ ಅವರನ್ನು 1987ರಲ್ಲಿ ಮದುವೆಯಾದರು. ರೀಚಾ ಮದುವೆಯ ಎರಡು ವರ್ಷಗಳ ಬಳಿಕ ಬ್ರೇನ್ ಟ್ಯೂಮರ್‌ನಿಂದ ಮರಣ ಹೊಂದಿದರು. ನಂತರ 1988ರಲ್ಲಿ ರಿಯಾ ಪಿಳ್ಳಯ್ ಅವರನ್ನು ಮದುವೆಯಾದರು. ಆದರೆ ಕಾರಣಾಂತರಗಳಿಂದ 2008ರಲ್ಲಿ ಇಬ್ಬರು ವಿಚ್ಛೇದನ ಪಡೆದುಕೊಂಡರು. ಮತ್ತೆ ಸಂಜಯ್ 2008ರಲ್ಲಿ ಮಾನ್ಯತಾ ಅವರನ್ನು ವಿವಾಹವಾದರು.

Share This Article