ಕೆಜಿಎಫ್ 2 : ನಾಲ್ಕೇ ದಿನಕ್ಕೆ 550 ಕೋಟಿ ಬಾಚಿದ ರಾಕಿಭಾಯ್

Public TV
2 Min Read
KGF 2 Yash (4)
ಸಾಂದರ್ಭಿಕ ಚಿತ್ರ

ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್ ನ ಕೆಜಿಎಫ್ 2 ಗಳಿಕೆ ರಾಕೆಟ್ ಸ್ಪೀಡ್ ನಲ್ಲಿ ಮುನ್ನುಗ್ಗುತ್ತಿದೆ. ಬಿಡುಗಡೆಯಾದ ಅಷ್ಟೂ ಭಾಷೆಗಳಲ್ಲೂ ಕೋಟಿ ಕೋಟಿ ಸಂಪಾದನೆ ಮಾಡುತ್ತಿದೆ. ಈವರೆಗೂ ಎಲ್ಲಾ ರೆಕಾರ್ಡ್ ಗಳನ್ನು ಮುರಿದಿರುವ ಕೆಜಿಎಫ್ 2, ಮುಂದೆ ಯಾರೂ ಮುರಿಯದಂತಹ ದಾಖಲೆಯನ್ನೂ ಮಾಡುತ್ತಿದೆ. ಇದನ್ನೂ ಓದಿ : ಕ್ಷಮಿಸಿ ಬಿಡು ಬಸವಣ್ಣ : ವಿಡಿಯೋ ರಿಲೀಸ್ ಮಾಡಿದ ಹಂಸಲೇಖ

KGF 2 Prakash raj 2

ಏ.14ರ ಗುರುವಾರ ಬಿಡುಗಡೆಯಾದ ಕೆಜಿಎಫ್ 2 ದಿನದಿಂದ ದಿನಕ್ಕೆ ಬಾಕ್ಸ್ ಆಫೀಸಿನ ಕ್ರೇಜ್ ಏರಿಸುತ್ತಲೇ ಇದೆ. ನಾಲ್ಕು ದಿನಗಳ ಕಾಲ ರಜೆ ಸಿಕ್ಕ ಕಾರಣಕ್ಕಾಗಿ ರಾಕಿಭಾಯ್ ಮತ್ತಷ್ಟು ಜೇಬು ತುಂಬಿಸಿಕೊಳ್ಳುತ್ತಿದ್ದಾನೆ. ಕನ್ನಡ ಸಿನಿಮಾವೊಂದು ವಿಶ್ವಮಟ್ಟದಲ್ಲಿ ಈ ರೀತಿ ದುಡ್ಡು ಮಾಡುತ್ತಿರುವುದು ಅನೇಕ ಸಿನಿಮಾ ರಂಗದ ನಿರ್ಮಾಪಕರಿಗೆ ಹೊಸದೊಂದು ಮಾರ್ಗ ಕಾಣಿಸಿದಂತಾಗಿದೆ. ಇದನ್ನೂ ಓದಿ: ಬಾಲಿವುಡ್‌ 3ನೇ ದಿನದ ಕಲೆಕ್ಷನ್‌ನಲ್ಲೂ ಹವಾ ಕ್ರಿಯೇಟ್‌ ಮಾಡಿದ ʻಕೆಜಿಎಫ್‌ 2ʼ

KGF2 4

ಕೆಜಿಎಫ್ 2 ಮೂರು ದಿನಗಳ ಗಳಿಕೆ ಅಂದಾಜು 400 ಕೋಟಿ ಎನ್ನಲಾಗಿತ್ತು. ನಾಲ್ಕನೇ ದಿನದ ಗಳಿಕೆ ಒಟ್ಟು ಅಂದಾಜು 550 ಕೋಟಿ ಎನ್ನಲಾಗುತ್ತಿದೆ. ಈ ಮೂಲಕ ಆರ್.ಆರ್.ಆರ್, ಬಾಹುಬಲಿ, ಕೆಜಿಎಫ್ ಚಾಪ್ಟರ್ 1 ಹೀಗೆ ದಾಖಲಾಗಿದ್ದ ಎಲ್ಲ ರೇಕಾರ್ಡ್ ಉಢೀಸ್ ಆಗಿವೆ. ಅಲ್ಲದೇ ವಿದೇಶದಿಂದಲೇ ಅಂದಾಜು ಮೂರು ದಿನಗಳಲ್ಲಿ 80 ಕೋಟಿಗೂ ಅಧಿಕ ಹಣ ಹರಿದು ಬಂದಿದೆ ಎನ್ನುತ್ತಾರೆ ವಿತರಕರು.  ಇದನ್ನೂ ಓದಿ: `ಚಂದ್ರಲೇಖ ರಿಟರ್ನ್ಸ್’ ಅಂತಿದ್ದಾರೆ ನಿರ್ದೇಶಕ ಓಂಪ್ರಕಾಶ್ ರಾವ್

ಯಾವ ದಿನ, ಎಷ್ಟು ಲೆಕ್ಕ ?

ಮೊದಲ ದಿನದ ಗಳಿಕೆ : 165.37 ಕೋಟಿ

ಎರಡನೇ ದಿನದ ಗಳಿಕೆ : 139.25 ಕೋಟಿ

ಮೂರನೇ ದಿನದ ಗಳಿಕೆ : 115.08 ಕೋಟಿ

ನಾಲ್ಕನೇ ದಿನದ ಗಳಿಕೆ 132.12 ಕೋಟಿ

KGF2 1

ಒಟ್ಟು : 551. 83 ಕೋಟಿ ಎಷ್ಟು ಕೆಜಿಎಫ್ 2 ಈವರೆಗೂ ಬಾಕ್ಸ್ ಆಫೀಸ್ ಅನ್ನು ತುಂಬಿಸಿದೆ ಎಂದು ಕಾಮ್ ಸ್ಕೋರ್ ವರದಿ ಮಾಡಿದೆ. ಕನ್ನಡಕ್ಕಿಂತಲೂ ಹಿಂದಿ ಸಿನಿಮಾ ರಂಗದಿಂದಲೇ ನಿರ್ಮಾಪಕರಿಗೆ ಹೆಚ್ಚು ಹಣ ಸಂದಾಯವಾಗಿದೆ. ಮೊದಲ ದಿನ 53 ಕೋಟಿ, ಎರಡನೇ ದಿನ 45.7 ಕೋಟಿ, ಮೂರನೇ ದಿನ 42.50 ಕೋಟಿ, ನಾಲ್ಕನೇ ದಿನವೂ ಅಂದಾಜು 50 ಕೋಟಿ ಹಣ ಬಂದಿದೆ ಎನ್ನಲಾಗುತ್ತಿದೆ. ಐದೇ ದಿನದಲ್ಲಿ ಬಹುಶಃ ಹಿಂದಿಯಲ್ಲಿ 200 ಕೋಟಿ ಕ್ಲಬ್ ಗೆ ಕೆಜಿಎಫ್ 2 ಸೇರಲಿದೆ.

Share This Article