ಮಡಿಕೇರಿ: ಗನ್ ಹಿಡಿಯೋದು ನಮ್ಮ ಜನ್ಮಸಿದ್ಧ ಹಕ್ಕು, ಅದನ್ನ ಕೇಳೋಕೆ ಇವನ್ಯಾರು ಎಂದು ಏಕವಚನದಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ತಿರುಗೇಟು ಕೊಟ್ಟರು.
ಕೊಡಗಿನ ಪೊನ್ನಂಪೇಟೆಯ ಸಾಯಿ ಶಂಕರ ಶಾಲೆಯಲ್ಲಿ ಸಂಘ ಪರಿವಾರದ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ ಕೊಡಗಿನ ಶಾಸಕರು ಸಂಘ ಪರಿವಾರದವರ ಮೇಲೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ. ಈ ನಿಟ್ಟಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಶಾಸಕರು, ಶಿಬಿರದಲ್ಲಿ ಭಾಗವಹಿಸುವವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂಬ ಹೇಳಿಕೆ ನೀಡಿದ್ದರು. ಈ ಕುರಿತು ಕೆ.ಜಿ.ಬೋಪಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಭಜರಂಗದಳ ಶಿಬಿರದಲ್ಲಿ ಶಾಸಕರು ಭಾಗವಹಿಸಬಾರದು ಅಂತ ಕಾನೂನಿದ್ಯಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಭೂ ವಿವಾದದ ತೀರ್ಪು 108 ವರ್ಷದ ಬಳಿಕ ಪ್ರಕಟ
Advertisement
Advertisement
ನಮ್ಮ ಪರಿವಾರದ ಕಾರ್ಯಕ್ರಮ ನಡೆಯುವಾಗ ಭೇಟಿ ಕೊಡೋದು ನನ್ನ ಕರ್ತವ್ಯ. ಗನ್ ಹಿಡಿಯೋದು ನಮ್ಮ ಜನ್ಮಸಿದ್ಧ ಹಕ್ಕು, ಅದನ್ನ ಕೇಳೋಕೆ ಇವನ್ಯಾರು ಸಿದ್ದರಾಮಯ್ಯ? ಎಂದು ಏಕವಚನದಲ್ಲೇ ಮಾತನಾಡಿದರು. ವಿಶ್ವ ಹಿಂದೂ ಪರಿಷತ್, ಭಜರಂಗದಳ ಪ್ರತೀ ವರ್ಷ ಅಭ್ಯಾಸ ವರ್ಗ ರಾಜ್ಯದ ವಿವಿಧೆಡೆಗಳಲ್ಲಿ ಮಾಡ್ತಾರೆ. ಈ ವರ್ಷ ಕೊಡಗಿನಲ್ಲಿ ಕಾರ್ಯಕ್ರಮ ಮಾಡಿದ್ದಾರೆ ಅಷ್ಟೇ ಎಂದರು.
Advertisement
ಏನಾದ್ರೂ ತ್ರಿಶೂಲ ಬ್ಯಾನ್ ಆಗಿದೆಯಾ? ಸಿದ್ದರಾಮಯ್ಯರ ಚರಿತ್ರೆ ಎಲ್ಲರಿಗೂ ಗೊತ್ತಿದೆ. ಅಲ್ಪಸಂಖ್ಯಾತರನ್ನು ಹೇಗೆ ಓಲೈಸಲಿ ಎನ್ನುವ ಮೂಲಕವೇ ಸಿದ್ದರಾಮಯ್ಯ ದಿನಚರಿ ಶುರುವಾಗುತ್ತೆ. ಸಿದ್ದರಾಮಯ್ಯ ನಮಗೆ ಸಂವಿಧಾನದ ಬದ್ಧತೆ ಬಗ್ಗೆ ಹೇಳಿ ಕೊಡುವ ಅಗತ್ಯವಿಲ್ಲ. ಈ ಹಿಂದೆ ಇವರದೇ ಶಾಸಕ ಓರ್ವ ದಲಿತನ ಮನೆಗೆ ಡಿಜೆ ಹಳ್ಳಿ-ಕೆಜೆ ಹಳ್ಳಿಯಲ್ಲಿ ಬೆಂಕಿ ಹಾಕಿದಾಗ ಸಂವಿಧಾನ ಎಲ್ಲೋಗಿತ್ತು? ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದಾಗ ಸಂವಿಧಾನ ಇರಲಿಲ್ವಾ? ಎಂದು ಆಕ್ರೋಶಗೊಂಡರು.
Advertisement
ಸಿದ್ದರಾಮಯ್ಯ ಸಂವಿಧಾನವನ್ನ ಮೊದಲು ಸರಿಯಾಗಿ ಓದಬೇಕು. ಶಿಬಿರದಲ್ಲಿ ಏರ್ ಗನ್ ಬಳಸಲು ಲೈಸನ್ಸ್ ಬೇಕಿಲ್ಲ. ಸೆಲ್ಫ್ ಡಿಫೆನ್ಸ್ ಬೇಕಲ್ವಾ? ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ ಎಂಬುದು ಹೌದು. ಆದರೆ ಅದು ಖಾಸಗಿ ಶಾಲೆ. ಸುಮ್ಮನೆ ಸಿದ್ದರಾಮಯ್ಯ ಬಾಯಿಗೆ ಬಂದಂಗೆ ಮಾತಾಡಿದ್ರೆ ಚೆನ್ನಾಗಿರಲ್ಲ. ನಮಗೂ ಮಾತಾಡೋಕೆ ಬರುತ್ತೆ. ಹಿಂದೂ ಸಮಾಜದ ರಕ್ಷಣೆಗೆ ಅಭ್ಯಾಸ ಮಾಡಿದ್ರೆ ಅದರಲ್ಲಿ ತಪ್ಪೇನಿದೆ? ಎಲ್ಲೂ ಕಾನೂನು ಉಲ್ಲಂಘನೆ ಮಾಡಿಲ್ಲ. ಈ ಅಭ್ಯಾಸ ಮಾಡಿರುವುದು ಯುವಕರು ಸ್ವಯಂ ರಕ್ಷಣೆ ಪಡೆಯುವುದಕ್ಕೆ. ಮುಂದಿನ ದಿನಗಳಲ್ಲಿ ರಕ್ಷಣೆ ಅವಶ್ಯಕತೆ ಇದೆ ಎಂದು ತಿಳಿಸಿದರು.
ಎಸ್‍ಡಿಪಿಐ ಅವರು ರಾಜ್ಯಪಾಲರಿಗೆ ದೂರು ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಸ್‍ಡಿಪಿಐ ಅವರು ಹಾದಿ-ಬೀದಿಯಲ್ಲಿ ಹೋಗೋರಿಗೆಲ್ಲ ಕೌಂಟರ್ ಕೊಡಲ್ಲ. ಎಸ್‍ಡಿಪಿಐ, ಪಿಎಫ್‍ಐ ಈ ದೇಶಕ್ಕೆ ಮಾರಕ. ಅವುಗಳನ್ನ ಬ್ಯಾನ್ ಮಾಡಬೇಕು. ಎಸ್‍ಡಿಪಿಐ ಪ್ರಕರಣ ದಾಖಲು ಮಾಡಿದ್ರೆ, ಮಾಡಲಿ. ಎದುರಿಸುವ ಶಕ್ತಿ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂಗೆ ಬೆಳ್ಳಂಬೆಳಗ್ಗೆ ಶಾಕ್ – ಮನೆ ಸೇರಿ 7 ಕಡೆ ಸಿಬಿಐ ದಾಳಿ