ಬೆಂಗಳೂರು: ನಟಿ ಶೃತಿ ಹರಿಹರನ್ ಅವರಿಗೆ ಯಾವುದೇ ಅನ್ಯಾಯವಾಗಿದ್ದರೆ ನಾವು ಬೆಂಬಲಿಸುತ್ತೇವೆ. ಆದರೆ ಅದಕ್ಕೆ ಒಂದು ರೀತಿ ನೀತಿ ಎನ್ನುವುದು ಇದೆ. ಅದನ್ನು ಬಿಟ್ಟು ಪ್ರಶ್ನೆ ಮಾಡಲು ನಟ ಚೇತನ್ ಯಾರು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಪ್ರಶ್ನೆ ಮಾಡಿದ್ದಾರೆ.
ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಕೇಳಿ ಬಂದಿರುವ ಮೀಟೂ ಆರೋಪದ ಕುರಿತು ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಲಾಯಿತು. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಾ ಗೋವಿಂದು ಅವರು, ಚಿತ್ರರಂಗದಲ್ಲಿ ಶೂಟಿಂಗ್ ಮುನ್ನ ರಿಹರ್ಸಲ್ ಮಾಡುವುದು ನಿನ್ನೆ ಮೊನ್ನೆಯಾದಲ್ಲ. ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಡಾ. ರಾಜ್ ಕುಮಾರ್ ಅವರೂ ಕೂಡ ಹದಿಮೂರು ಟೇಕ್ ಮಾಡಿರುವ ಉದಾಹರಣೆ ಇದೆ. ಅದಕ್ಕೂ ಮುನ್ನ ರಿಹರ್ಸಲ್ ಮಾಡಿರುವ ಉದಾಹರಣೆಗಳು ಸಾಕಷ್ಟಿದೆ. ಇದೆಲ್ಲವೂ ಸಿನಿಮಾಗಾಗಿ ಅಷ್ಟೇ. ಆದರೆ ನಟಿ ಶೃತಿ ಹರಿಹರನ್ ಅವರಿಗೆ ಯಾವುದೇ ಅನ್ಯಾಯವಾಗಿದ್ದರೆ ನಾವು ಬೆಂಬಲಿಸುತ್ತೇವೆ. ಆದರೆ ಅದಕ್ಕೆ ಒಂದು ರೀತಿ ನೀತಿ ಎಂಬುವುದು ಇದೆ. ಅದನ್ನು ಹಗುರವಾಗಿ ಮಾತನಾಡುವುದು ಒಳ್ಳೆಯ ಲಕ್ಷಣ ಅಲ್ಲ ಎಂದು ಗರಂ ಆದರು.
Advertisement
Advertisement
70 ವರ್ಷ ಮಾತ್ರವಲ್ಲದೇ ಇಡೀ ಕನ್ನಡ ಚಿತ್ರರಂಗದಲ್ಲಿ ಹಲವು ನಟಿಯರು ಉದ್ಯಮವನ್ನು ಬೆಳೆಸಿದ್ದಾರೆ. ಹಾಗಾದರೆ ಅವರಿಗೆಲ್ಲ ನಾವು ಅವಮಾನ ಮಾಡಿದಂತೆ. ಅದ್ದರಿಂದ ಚೇತನ್ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಅವರ ಹೇಳಿಕೆಯನ್ನು ಬಹಿರಂಗವಾಗಿ ವಾಪಸ್ ತೆಗೆದುಕೊಳ್ಳಬೇಕು. ಸಮಾನತೆ ಎಂದರೆ ಏನು ಎನ್ನುದನ್ನು ನಾವು ಡಾ. ರಾಜ್ ಕುಮಾರ್ ಅವರಿಂದ ಕಲಿತು ಬಂದಿದ್ದೇವೆ. ಯಾರು ಸಮಸ್ಯೆ ಎದುರಿಸಿದರೂ ನಾವು ಪರಿಹಾರ ನೀಡುತ್ತೇವೆ. ನಾವು ಕೂಡ ಹೆಣ್ಣು ಮಕ್ಕಳ ಜೊತೆ ಬೆಳೆದಿದ್ದೇವೆ. ಮೂವತ್ತು ವರ್ಷ ನಾವು ರಾಜ್ ಕುಮಾರ್ ಅವರ ಜೊತೆ ಇದ್ದೇವೆ ಎಂದರು. ಇದನ್ನು ಓದಿ: ನನ್ನ ಜೊತೆ ಅರ್ಜುನ್ ಸರ್ಜಾ ಕೆಟ್ಟದಾಗಿ ನಡೆದುಕೊಂಡಿಲ್ಲ: ನಟಿ ತಾರಾ
Advertisement
ಯಾವುದೇ ನಟಿಯಾದರು ನನ್ನನ್ನು ರೆಸಾರ್ಟ್, ಡಿನ್ನರ್ ಗೆ ಕರೆದಿದ್ದಾರೆ ಎಂದು ಹೇಳುವಾಗ ದಾಖಲೆ ಇರಬೇಕು ಅಥವಾ ಆ ಕೂಡಲೇ ಸಿನಿಮಾದಿಂದ ಹೊರ ಬರಬೇಕಾಗಿತ್ತು. ಆಗ ನೀವು ಒಬ್ಬ ಉತ್ತಮ ನಟಿ ಎಂದು ಯಾರು ಕೂಡ ಪ್ರಶ್ನೆ ಮಾಡುವಂತಹ ಸಂದರ್ಭವೇ ಬರುತ್ತಿರಲಿಲ್ಲ. ಅರ್ಜುನ್ ಸರ್ಜಾ ಅವರನ್ನು ಚಿಕ್ಕಂದಿನಿಂದ ನಾವು ನೋಡಿದ್ದೇವೆ. ಸಾಕಷ್ಟು ನಟಿಯರ ಜೊತೆ ಕೆಲಸ ಮಾಡಿದ್ದಾರೆ. ಅಲ್ಲದೇ ತಮಿಳು, ತೆಲುಗು ರಂಗದಲ್ಲಿ 150 ಕ್ಕೂ ಸಿನಿಮಾ ಮಾಡುವ ಅವಕಾಶ ಕನ್ನಡಿಗನಿಗೆ ಸುಮ್ಮನೆ ಬರಲ್ಲ. ಶೃತಿ ಅವರ ಆರೋಪಕ್ಕೆ ಒಂದು ಸಮಿತಿ ನೇಮಿಸಿ ಸಮಸ್ಯೆ ಬರೆಹರಿಸುವ ಕಾರ್ಯ ಮಾಡುತ್ತೇವೆ. ಆದರೆ ಅವರು ಕೋರ್ಟ್ ಗೆ ಹೋಗುವುದಾಗಿ ತಿಳಿಸಿದ್ದಾರೆ. ಒಂದೊಮ್ಮೆ ಕೋರ್ಟ್ ಹೋಗುವ ನಿರ್ಧರವಿದ್ದರೆ ಸುಮ್ಮನೆ ಮಾಧ್ಯಮಗಳನ್ನು ಕರೆದು ಸುದ್ದಿಗೋಷ್ಠಿ ನಡೆಸುವ ಅವಕಶ್ಯಕತೆ ಏನಿದೆ ಎಂದು ಪ್ರಶ್ನೆ ಮಾಡಿದರು. ಇದನ್ನು ಓದಿ: ಸರ್ಜಾ ವಿರುದ್ಧ ಸೇಡಿಗಾಗಿ ಶೃತಿ ಹರಿಹರನ್ ಪರ ನಿಂತ್ರಾ ನಟ ಚೇತನ್?
Advertisement
ಈ ಹಿಂದೆಯೂ ಸಿನಿಮಾ ಕುರಿತು ಸಮಸ್ಯೆಗಳನ್ನು ನಮ್ಮಲ್ಲಿ ಚರ್ಚೆ ನಡೆಸಿ ಪರಿಹಾರ ನೀಡಿದ್ದೇವೆ. ಈ ಸಮಸ್ಯೆಯೂ ಕೂಡ ಚರ್ಚೆ ನಡೆಸಿ ಬರೆಹರಿಸುತ್ತೇವೆ. ಸಮಸ್ಯೆಯನ್ನು ಬಹಿರಂಗವಾಗಿ ಚರ್ಚೆ ಮಾಡುವುದು ಬೇಡ. ಯಾರು ಸಮಸ್ಯೆ ಎದರುಸಿದ್ದರೂ ನೇರ ಇಲ್ಲಿಗೆ ಬನ್ನಿ. ಸಮಸ್ಯೆ ಬಗ್ಗೆ ಚರ್ಚೆ ಮಾಡೋಣ. ಆದರೆ ಕೋರ್ಟ್ ನಲ್ಲಿ ದೂರು ದಾಖಲಿಸುವುದಾದರೆ ನಮಗೆ ತೊಂದರೆ ಇಲ್ಲ. ಆದರೆ ಸದ್ಯ ಅರ್ಜುನ್ ಸರ್ಜಾ ಅವರಿಂದ ದೂರು ಬಂದಿರುವುರಿಂದ ಇಲ್ಲಿ ಚರ್ಚೆ ನಡೆಸಿದ್ದೇವೆ ಎಂದರು. ಇದನ್ನು ಓದಿ: ಶೃತಿ ಹರಿಹರನ್ #MeToo ಹಿಂದಿನ ಅಸಲಿ ಕಹಾನಿ ಬಿಚ್ಚಿಟ್ಟ ಭಾಮಾ ಹರೀಶ್
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv