ನೀವು ಕೆಎಫ್‌ಸಿಯಲ್ಲಿ ಪಾಪ್‌ಕಾರ್ನ್ ಚಿಕನ್ (Popcorn Chicken) ಅನ್ನು ಸವಿದಿರುತ್ತೀರಿ. ನೀವು ಪಾಪ್‌ಕಾರ್ನ್ ಚಿಕನ್‌ನ ಅಭಿಮಾನಿಯಾಗಿದ್ದರೂ ಅದನ್ನು ಮನೆಯಲ್ಲಿ ಮಾಡಲು ಎಂದಿಗೂ ಪ್ರಯತ್ನಿಸಿಲ್ಲವೆಂದಾದರೆ ಇಂದು ನಾವು ಹೇಳಿಕೊಡುತ್ತಿದ್ದೇವೆ. ಕ್ರಿಸ್ಪಿ, ಜ್ಯೂಸಿ ಅಷ್ಟೇ ಟೇಸ್ಟಿಯಾದ ಪಾಪ್‌ಕಾರ್ನ್ ಚಿಕನ್ ಅನ್ನು ಒಮ್ಮೆ ನೀವೂ ಮಾಡಿ ಸವಿಯಿರಿ.
Advertisement
ಬೇಕಾಗುವ ಪದಾರ್ಥಗಳು:
ಚಿಕನ್ ಬ್ರೆಸ್ಟ್- 1 ಕೆಜಿ
ಮೈದಾ- 5 ಟೀಸ್ಪೂನ್
ಉಪ್ಪು- ಅರ್ಧ ಟೀಸ್ಪೂನ್
ಬೆಳ್ಳುಳ್ಳಿ ಪುಡಿ- 1 ಟೀಸ್ಪೂನ್
ಮೊಸರು- 1 ಕಪ್
ಕಾರ್ನ್‌ಫ್ಲೇಕ್ಸ್- 2 ಕಪ್
ಎಣ್ಣೆ- ಡೀಪ್ ಫ್ರೈಗೆ ಇದನ್ನೂ ಓದಿ: ಮೊಟ್ಟೆ ಮತ್ತು ಆಲೂಗಡ್ಡೆ ಕಟ್ಲೆಟ್ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಚಿಕನ್ ಬ್ರೆಸ್ಟ್ ಅನ್ನು ಒಂದೊಂದು ಇಂಚಿನಷ್ಟು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಇಡಿ.
* ಒಂದು ಮಧ್ಯಮ ಬಟ್ಟಲಿನಲ್ಲಿ ಮೈದಾ ಹಿಟ್ಟು, ಉಪ್ಪು ಮತ್ತು ಬೆಳ್ಳುಳ್ಳಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ.
* ಇನ್ನೊಂದು ಬಟ್ಟಲಿನಲ್ಲಿ ಮೊಸರನ್ನು ಹಾಕಿ ಬದಿಗಿಡಿ.
* ಮತ್ತೊಂದು ತಟ್ಟೆಯಲ್ಲಿ ಕಾರ್ನ್‌ಫ್ಲೇಕ್ಸ್ ಅನ್ನು ಪುಡಿ ಮಾಡಿ ಇಟ್ಟಿರಿ.
* ಈಗ ಚಿಕನ್ ತುಂಡುಗಳನ್ನು ಮೈದಾ ಹಿಟ್ಟಿನ ಮಿಶ್ರಣಕ್ಕೆ ಹಾಕಿ ಪೂರ್ತಿಯಾಗಿ ಕೋಟ್ ಮಾಡಿ.
* ಈಗ ಒಂದೊಂದೇ ಚಿಕನ್ ತುಂಡುಗಳನ್ನು ಮೊಸರಿನಲ್ಲಿ ಅದ್ದಿ, ತೆಗೆಯಿರಿ.
* ಹೆಚ್ಚುವರಿ ಮೊಸರು ಚಿಕನ್ ತುಂಡಿನಿಂದ ಇಳಿದು ಹೋಗುವಂತೆ ಬಿಡಿ.
* ಈಗ ಕಾರ್ನ್‌ಫ್ಲೇಕ್ಸ್ ಪುಡಿಯಲ್ಲಿ ಚಿಕನ್‌ನ ಒಂದೊಂದೇ ತುಂಡನ್ನು ಹಾಕಿ ಉರುಳಿಸಿ ಕೋಟ್ ಮಾಡಿ.
* ಈಗ ಚಿಕನ್ ತುಂಡುಗಳನ್ನು ಬ್ಯಾಚ್‌ಗಳಲ್ಲಿ ಬಿಸಿ ಎಣ್ಣೆಯಲ್ಲಿ ಬಿಟ್ಟು ಡೀಪ್ ಫ್ರೈ ಮಾಡಿ.
* ಚಿಕನ್ ಚೆನ್ನಾಗಿ ಬೆಂದು, ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
* ಈಗ ರುಚಿಕರ ಪಾಪ್‌ಕಾರ್ನ್ ಚಿಕನ್ ತಯಾರಾಗಿದ್ದು, ನಿಮ್ಮ ಇಷ್ಟದ ಸಾಸ್‌ನೊಂದಿಗೆ ಆನಂದಿಸಿ. ಇದನ್ನೂ ಓದಿ: ‘ಶೆಚುವಾನ್ ಚಿಕನ್’ ಮಾಡುವ ಸಿಂಪಲ್ ವಿಧಾನ