ಸ್ವಾಸ್ಥ್ಯ ಭಾರತ್, ಸಮೃದ್ಧ ಭಾರತ್ – ಕೃಷಿ, ಶಿಕ್ಷಣ, ಆರೋಗ್ಯಕ್ಕೆ ಒತ್ತು: ಬಜೆಟ್ ಹೈಲೈಟ್ಸ್ ಇಲ್ಲಿದೆ

Public TV
8 Min Read
UNION BUDGET 2018

ನವದೆಹಲಿ: ಕೇಂದ್ರದ ಮೋದಿ ನೇತೃತ್ವದ ಕೊನೆ ಪೂರ್ಣ ಪ್ರಮಾಣದ ಬಜೆಟ್‍ನಲ್ಲಿ ಭರ್ಜರಿ ಸುಧಾರಣಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ರೈತಸ್ನೇಹಿ, ಜನಸ್ನೇಹಿ, ಉದ್ಯಮ ಸ್ನೇಹಿ ಬಜೆಟ್ ಮಂಡಿಸಿರೋದಾಗಿ ಸರ್ಕಾರ ಹೇಳಿದೆ. ಸಚಿವ ಸಂಪುಟ ಸಭೆಯಲ್ಲಿ ಬಜೆಟ್‍ಗೆ ಅನುಮೋದನೆ ಪಡೆದ ಅರುಣ್ ಜೇಟ್ಲಿ, ಐದನೇ ಬಾರಿಗೆ ಬಜೆಟ್ ಮಂಡಿಸಿದರು.

ಸುಮಾರು 11 ಗಂಟೆ 3 ನಿಮಿಷಕ್ಕೆ ಆರಂಭಿಸಿ 1 ಗಂಟೆವರೆಗೆ ಸುಮಾರು 3 ಗಂಟೆಗಳ ಕಾಲ ಬರೋಬ್ಬರಿ 24 ಲಕ್ಷದ 42 ಸಾವಿರದ 213 ಕೋಟಿ ರೂಪಾಯಿಗಳ ಆಯವ್ಯಯವನ್ನ ಪ್ರಸ್ತುತ ಪಡಿಸಿದ್ರು. ಕಳೆದ ಬಾರಿ 15.16 ಲಕ್ಷ ಕೋಟಿಗಳ ಬಜೆಟ್ ಮಂಡಿಸಿದ್ದರು.

ದೇಶದ ಜನರಿಗೆ ನೀಡಿದ್ದ ಭರವಸೆ ಈಡೇರಿಸಲು ಸಾಕಷ್ಟು ಶ್ರಮ ಪಟ್ಟಿದ್ದೇವೆ. 2014ರ ನಂತರ ಭಾರತದ ಆರ್ಥಿಕತೆ ಉತ್ತಮವಾಗುತ್ತಾ ಸಾಗಿದೆ. ನಾಲ್ಕು ವರ್ಷಗಳಿಂದ ಸ್ವಚ್ಛ ಆಡಳಿತ, ಬಡತನ ನಿರ್ಮೂಲನೆಗೆ ಗಮನ ಹರಿಸಿದ್ದೇವೆ. ನೀತಿ ಆಯೋಗಕ್ಕೆ ನವಭಾರತ ನಿರ್ಮಾಣದ ಹೊಣೆ ನೀಡಲಾಗಿದೆ ಎಂದರು. ಇದೇ ಮೊದಲ ಬಾರಿಗೆ ಹಿಂದಿಯಲ್ಲಿ ಬಜೆಟ್ ಭಾಷಣ ಮಾಡಿದ್ದು ವಿಶೇಷವಾಗಿತ್ತು.

ಬಜೆಟ್ ಹೈಲೈಟ್ಸ್ ಏನು?
1. ಒಟ್ಟು ಆದಾಯ 24,42,213 ಕೋಟಿ ರೂ,. ವಿತ್ತೀಯ ಕೊರತೆ 4,16,034 ಕೋಟಿ ರೂಪಾಯಿ
2. ತೆರಿಗೆ ಪಾವತಿಸುದಾರರ ಸಂಖ್ಯೆ 6.47 ಕೋಟಿಯಿಂದ 8.27 ಕೋಟಿಗೆ ಹೆಚ್ಚಳ
3. ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ
4. 10 ಕೋಟಿ ಬಡ ಕುಟುಂಬಗಳಿಗೆ ಆರೋಗ್ಯ ಸುರಕ್ಷಾ ಯೋಜನೆ (ವಿಶ್ವದಲ್ಲೇ ಅತೀ ದೊಡ್ಡ ಸರ್ಕಾರಿ ಅನುದಾನದ ಯೋಜನೆ )
5. ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಒತ್ತು
6. ದೇಶಾದ್ಯಂತ ಡಿಜಿಟಲೈಸೇಷನ್ ಮೂಲಕ ಪಾರದರ್ಶಕ ತೆರಿಗೆ ವ್ಯವಸ್ಥೆ
7. ದುಬಾರಿ ಮೊಬೈಲ್‍ಗಳ ಮೇಲೆ ಶೇ.20ರಷ್ಟು ಕಸ್ಟಮ್ ಸುಂಕ
8. 250 ಕೋಟಿ ವಾರ್ಷಿಕ ಆದಾಯ ಹೊಂದಿರುವ ಕಂಪನಿಗಳಿಗೆ ಶೇ.25ರಷ್ಟು ತೆರಿಗೆ ಕಡಿತ
9. 2019ಕ್ಕೆ ಎಲ್ಲಾ ಮಹಿಳಾ ಸಂಘಗಳಿಗೆ 75 ಸಾವಿರ ಕೋಟಿ ಸಾಲ
10. 2018-19ನೇ ಸಾಲಿನಲ್ಲಿ ಶೇ.3.3ರ ವಿತ್ತೀಯ ಕೊರತೆ ಪ್ರಮಾಣ ನಿಗದಿ

ಯಾವುದು ಏರಿಕೆ?
ಸಿಗರೇಟ್, ಗುಟ್ಕಾ, ಲೈಟರ್, ಆಮದುಗೊಂಡ ಎಲ್‍ಸಿಡಿ, ಎಇಡಿ ಟಿವಿ, ಮೊಬೈಲ್, ಎಲೆಕ್ಟ್ರಾನಿಕ್ ಉತ್ಪನ್ನಗಳು, ವಾಹನ, ವಾಹನಗಳ ಬಿಡಿಭಾಗ, ಬಂಗಾರ, ಬೆಳ್ಳಿ, ವಜ್ರ, ಉಮಾ ಗೋಲ್ಡ್, ತರಕಾರಿ, ಫ್ರೂಟ್ ಜ್ಯೂಸ್ ಚಪ್ಪಲಿ, ಅಡುಗೆ ಎಣ್ಣೆ, ಪಾದರಕ್ಷೆ, ರೇಷ್ಮೆ ಬಟ್ಟೆ, ಸನ್ ಗ್ಲಾಸ್, ಸುಗಂಧದ್ರವ್ಯ, ಸೌಂದರ್ಯವರ್ಧಕ, ಶೇವಿಂಗ್ ಕ್ರೀಮ್, ಹಲ್ಲುಜ್ಜುವ ಬ್ರಶ್, ಪೇಸ್ಟ್, ಟಾಯ್ಲೆಟ್ ಸ್ಪ್ರೇ, ಗಾಳಿಪಟ, ಟಯರ್, ಎಲ್‍ಇಡಿ ಲ್ಯಾಂಪ್, ವಾಚ್‍ಗಳು, ಅಲ್ಯುಮಿನಿಯಮ್ ಅದಿರು, ಮೇಣದ ಬತ್ತಿ, ಬೊಂಬೆ, ಆಟಿಕೆ, ವೀಡಿಯೋ ಗೇಮ್, ಕ್ರೀಡಾ ಉಡುಪು, ಪೀಠೋಪಕರಣ, ಮೊಬೈಲ್ ಮದರ್ ಬೋರ್ಡ್.

ಯಾವುದು ಇಳಿಕೆ?
ಗೋಡಂಬಿ, ಆನ್‍ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್ , ಸೋಲಾರ್ ಟೆಂಪರ್ಡ್ ಗ್ಲಾಸ್, ಸೋಲಾರ್ ಪ್ಯಾನಲ್, ಇಂಧನ ಆಧಾರಿತ ವಿದ್ಯುತ್ ಉತ್ಪಾದನಾ ವ್ಯವಸ್ಥೆ ಚರ್ಮ ಉತ್ಪನ್ನ, ಪಿಓಎಸ್ ಮಶಿನ್ ಕಾರ್ಡ್, ರಕ್ಷಣಾ ಸೇವೆಗಳ ಗುಂಪು ವಿಮೆ, ಗೃಹ ಬಳಕೆಯ ವಸ್ತುಗಳು.

ತೆರಿಗೆ ಪಾವತಿದಾರರ ಸಂಖ್ಯೆ ಏರಿಕೆ
ಜಿಎಸ್‍ಟಿ ಜಾರಿ ಬಳಿಕ ದೇಶದಲ್ಲಿ ತೆರಿಗೆ ಪಾವತಿಸುವವರ ಸಂಖ್ಯೆ 6.47 ಕೋಟಿಯಿಂದ 8.27 ಕೋಟಿಗೆ ಹೆಚ್ಚಳವಾಗಿದೆ. ಹಿರಿಯ ನಾಗರಿಕರಿಗೆ ಬಂಪರ್ ಕೊಡುಗೆ ಸಿಕ್ಕಿದೆ.
* ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ
* 2.50 ಲಕ್ಷ ರೂ.ವರೆಗೂ ಮಾತ್ರ ತೆರಿಗೆ ವಿನಾಯಿತಿ
* ಹಿರಿಯ ನಾಗರಿಕರ ಬ್ಯಾಂಕ್ ಠೇವಣಿ ಮೇಲಿನ 50 ಸಾವಿರದವರೆಗಿನ ಬಡ್ಡಿಗೆ ತೆರಿಗೆ ಇಲ್ಲ
* ಎಫ್‍ಡಿ, ಪೋಸ್ಟ್ ಆಫೀಸ್ ಠೇವಣಿ ಮೇಲೆ ಟಿಡಿಎಸ್ ಇಲ್ಲ
* ಹಿರಿಯ ನಾಗರಿಕರ ವೈದ್ಯಕೀಯ ಖರ್ಚಿಗಾಗಿ ಹೆಚ್ಚುವರಿ ರಿಯಾಯಿತಿ 60 ಸಾವಿರದಿಂದ 1 ಲಕ್ಷ ರೂ.ಗೆ ಹೆಚ್ಚಳ
* ವೈದ್ಯಕೀಯ ಖರ್ಚಿಗಾಗಿ ಉದ್ಯೋಗಿಗಳಿಗೆ 40 ಸಾವಿರ ರೂ.ವರೆಗೂ ತೆರಿಗೆ ವಿನಾಯಿತಿ
* 250 ಕೋಟಿ ರೂ. ವಾರ್ಷಿಕ ವ್ಯವಹಾರದ ಕಂಪನಿಗಳಿಗೆ ಶೇ.25ರಷ್ಟು ಕಾರ್ಪೋರೇಟ್ ತೆರಿಗೆ ಕಡಿತ
* ಜನ್‍ಧನ ಯೋಜನೆ ವ್ಯಾಪ್ತಿಗೆ 60 ಕೋಟಿ ಖಾತೆಗಳು

1 ರೂ. ಬಂದಿದ್ದು ಹೇಗೆ?
* ಜಿಎಸ್‍ಟಿ, ಇತರೆ ತೆರಿಗೆ – 23 ಪೈಸೆ
* ಸಾಲ – 19 ಪೈಸೆ
* ಕಾರ್ಪೋರೇಟ್ ತೆರಿಗೆ – 19 ಪೈಸೆ
* ಆದಾಯ ತೆರಿಗೆ – 16 ಪೈಸೆ
* ಕೇಂದ್ರ ಅಬಕಾರಿ ಸುಂಕ – 8 ಪೈಸೆ
* ತೆರಿಗೆಯೇತರ ಆದಾಯ – 8 ಪೈಸೆ
* ಸುಂಕ – 4 ಪೈಸೆ
* ಸಾಲಯೇತರ ಮೂಲಧನ ವಸೂಲಿ – 3 ಪೈಸೆ

GFXs tax 2
1 ರೂ. ಹೋಗಿದ್ದು ಹೇಗೆ?
* ತೆರಿಗೆ, ಸುಂಕದಲ್ಲಿ ರಾಜ್ಯಗಳ ಪಾಲು – 24 ಪೈಸೆ
* ಬಡ್ಡಿ ಪಾವತಿ – 18 ಪೈಸೆ
* ಕೇಂದ್ರದ ವಲಯ ಯೋಜನೆ – 10 ಪೈಸೆ
* ಕೇಂದ್ರದ ಪ್ರಾಯೋಜಿತ ಯೋಜನೆ – 9 ಪೈಸೆ
* ಯೋಜನೇತರ ವೆಚ್ಚ – 8 ಪೈಸೆ
* ರಕ್ಷಣಾ ವಲಯ – 9 ಪೈಸೆ
* ಸಹಾಯಧನ – 9 ಪೈಸೆ
* ಫೈನಾನ್ಸ್ ಕಮೀಷನ್ & ಟ್ರಾನ್ಸ್ ಫರ್ – 8 ಪೈಸೆ
* ಪಿಂಚಣಿ – 5 ಪೈಸೆ ಪೈಸೆ

GFXs tax 1

ರಕ್ಷಣೆಗೆ ಸಿಕ್ಕಿದ್ದೇನು..?
* ಕಳೆದ ಬಾರಿಗೆ ಹೋಲಿಸಿದರೆ ಶೇ.7.81 ರಷ್ಟು ಏರಿಕೆ
* ರಕ್ಷಣೆಗೆ 2,95,511 ಕೋಟಿ ಮೀಸಲು (ಕಳೆದ ಬಾರಿ 2,74, 144 ಕೋಟಿ ಇತ್ತು)
* ಸೇನೆಯ ಆಧುನೀಕರಣಕ್ಕೆ ವಿಶೇಷ ಒತ್ತು
* ಎಫ್‍ಡಿಐ ಸೇರಿದಂತೆ ರಕ್ಷಣಾ ವಲಯದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ
* 2 ರಕ್ಷಣಾ ಕೈಗಾರಿಕಾ ಉತ್ಪಾದನಾ ಕಾರಿಡಾರ್ ಸ್ಥಾಪನೆ (ಜಮ್ಮು ಕಾಶ್ಮೀರ & ಈಶಾನ್ಯ ರಾಜ್ಯಗಳಲ್ಲಿ ಕಾರಿಡಾರ್)
* ರಕ್ಷಣಾ ಉತ್ಪನ್ನಗಳನ್ನು ದೇಶೀಯವಾಗಿ ಉತ್ಪಾದಿಸಲು ಪ್ರೋತ್ಸಾಹ

ರೈಲ್ವೆಗೆ ಸಿಕ್ಕಿದ್ದು ಏನು?
* ರೈಲ್ವೆ ಗೆ 1,48,528 ಕೋಟಿ ರೂ. ಮೀಸಲು
* ರೈಲ್ವೆ ಸುರಕ್ಷತೆಗೆ ಆದ್ಯತೆ, ತಂತ್ರಜ್ಞಾನ ಬಳಕೆ ಹೆಚ್ಚಳ
* ಎಲ್ಲಾ ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾ, ವೈಫೈ ಅಳವಡಿಕೆ
* 25 ಸಾವಿರ ಪ್ರಯಾಣಿಕರನ್ನು ಹೊಂದಿರುವ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಎಸ್ಕಲೇಟರ್
* 600 ರೈಲ್ವೆ ನಿಲ್ದಾಣಗಳ ಪುನಶ್ಚೇತನ
* ವಡೋದರಾದಲ್ಲಿ ವಿಶೇಷ ರೈಲ್ವೆ ವಿಶ್ವ ವಿದ್ಯಾಲಯ
(ಪ್ರಸ್ತುತ 124 ವಿಮಾನ ನಿಲ್ದಾಣಗಳ ಇದ್ದು, ಇವುಗಳನ್ನ ಐದು ಪಟ್ಟು ಹೆಚ್ಚಿಸುವ ಗುರಿ)

ಕೃಷಿ ನೀರಾವರಿ:
ದೇಶದ ಬೆನ್ನೆಲುಬು ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 2022ರ ವೇಳೆಗೆ ಕೃಷಿಕರ ಆದಾಯ ದ್ವಿಗುಣಗೊಳಿಸಲು ಯೋಜನೆ ರೂಪಿಸಿದ್ದೇವೆ. 2017-18ನೇ ಸಾಲಿನಲ್ಲಿ ದಾಖಲೆ ಪ್ರಮಾಣದ ಆಹಾರೋತ್ಪಾದನೆ ಮಾಡಲಾಗಿದೆ. ಕೃಷಿ, ಆರ್ಥಿಕ ಬೆಳವಣಿಗೆಗೆ ಹೆಚ್ಚು ಒತ್ತು ನೀಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ದೇಶವು ಶೇ. 7.5ರ ಸರಾಸರಿ ಆರ್ಥಿಕ ಬೆಳವಣಿಗೆ ದಾಖಲಿಸಿದ್ದೇವೆ ಅಂತ ಜೇಟ್ಲಿ ಹೇಳಿದ್ರು.

* ಕೃಷಿ ಸಾಲಕ್ಕಾಗಿ ಬರೋಬ್ಬರಿ 11 ಲಕ್ಷ ಕೋಟಿ (ಕೃಷಿ ಮಾರುಕಟ್ಟೆ ಅಭಿವೃದ್ಧಿಗೆ ಕೃಷಿ ಮಾರುಕಟ್ಟೆ ನಿಧಿ – 2,000 ಕೋಟಿ)
* `ಆಪರೇಷನ್ ಗ್ರೀನ್’ ಯೋಜನೆಯಡಿ ಆಲೂಗಡ್ಡೆ, ಈರುಳ್ಳಿ, ಟೊಮ್ಯಾಟೋ ಬೆಲೆ ಸ್ಥಿರತೆಗಾಗಿ 500 ಕೋಟಿ
* ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ (ಕನಿಷ್ಠ ಒಂದೂವರೆ ಪಟ್ಟು ಹೆಚ್ಚಳ)
* ಕೃಷಿ ಉತ್ಪನ್ನ ಕಂಪೆನಿಗಳಿಗೆ ಶೇ.100ರ ತೆರಿಗೆ ವಿನಾಯಿತಿ

* 22 ಸಾವಿರ ಗ್ರಾಮೀಣ ಮಾರುಕಟ್ಟೆಗಳು ಎಪಿಎಂಸಿಗಳಾಗಿ ಪರಿವರ್ತನೆ
* ಆಹಾರ ಸಂಸ್ಕರಣೆಗೆ 1400 ಕೋಟಿ ರೂ, 42 ಫುಡ್ ಪಾರ್ಕ್‍ಗಳ ಸ್ಥಾಪನೆ
* 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೈವಿಕ ಕೃಷಿ – 200 ಕೋಟಿ ಮೀಸಲು
* ಸೋಲಾರ್ ಅಳವಡಿಕೆಗೆ ಉತ್ತೇಜನ, ಸೂಕ್ತ ಬೆಲೆಯೊಂದಿಗೆ ರೈತರಿಂದ ಸೋಲಾರ್ ಖರೀದಿ
* ಮೀನುಗಾರಿಕೆ, ಪಶುಸಂಗೋಪನೆಗೆ 10,000 ಕೋಟಿ ಅನುದಾನ ( ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ)
(ಪ್ರಧಾನಮಂತ್ರಿ ಹನಿ ನೀರಾವರಿ ಯೋಜನೆಯಡಿ 2,600 ಕೋಟಿ ರೂ.. `ಹಸಿರು ಬಂಗಾರ’ – ರಾಷ್ಟ್ರೀಯ ಬಿದಿರು ಯೋಜನೆಗಾಗಿ 1,290 ಕೋಟಿ ಮೊತ್ತದ ನಿಧಿ)

ಕೈಗಾರಿಕೆಗೆ ಸಿಕ್ಕಿದ್ದು ಏನು?
* ಉದ್ಯಮಿಗಳಿಗೆ ಆಧಾರ್ ರೀತಿಯ ಹೊಸ ಕಾರ್ಡ್ ಜಾರಿ
* ಆನ್‍ಲೈನ್ ಮೂಲಕ ಕೈಗಾರಿಕೋದ್ಯಮಿಗಳಿಗೆ ಸಾಲ ನೀಡಿಕೆ
* ಉದ್ಯೋಗ ಖಾತ್ರಿ ಯೋಜನೆಗೆ 5,750 ಕೋಟಿ ರೂಪಾಯಿ
* ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ 3,794 ಕೋಟಿ. ರೂಪಾಯಿ
* ಮುದ್ರಾ ಯೋಜನೆಗೆ 3 ಲಕ್ಷ ಕೋಟಿ ಮೀಸಲು
* ಚರ್ಮೋದ್ಯಮಕ್ಕಾಗಿ 1,290 ಕೋಟಿ ರೂಪಾಯಿ
* ಜವಳಿ, ನೇಕಾರ ವಲಯಕ್ಕೆ 7,500 ಕೋಟಿ ರೂಪಾಯಿ
* ಎಲ್ಲಾ ವಲಯದ ಹೊಸ ನೌಕರರ ಪಿಎಫ್‍ಗೆ ಶೇ.12ರಷ್ಟು ಸರ್ಕಾರದ ಕೊಡುಗೆ
( 250 ಕೋಟಿ ವಾರ್ಷಿಕ ಆದಾಯ ಹೊಂದಿರುವ ಕಂಪನಿಗಳಿಗೆ ಶೇ.25ರಷ್ಟು ತೆರಿಗೆ ಕಡಿತ)

ಮೂಲಸೌಕರ್ಯ ಹೇಗಿದೆ?
* ಗ್ರಾಮೀಣ ಭಾಗದ ಮೂಲಸೌಕರ್ಯ ಅಭಿವೃದ್ಧಿಗಾಗಿ 14.3 ಲಕ್ಷ ಕೋಟಿ ರೂ. ಅನುದಾನ
* 2022ರ ವೇಳೆಗೆ ಪ್ರತಿಯೊಬ್ಬ ಭಾರತೀಯನಿಗೂ ಸೂರು (33 ಲಕ್ಷ ಮನೆ ನಿರ್ಮಾಣದ ಗುರಿ)
* 8 ಕೋಟಿ ಬಡ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ
* ಉಜ್ವಲ ಯೋಜನೆಯಡಿ 4 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ (ಗ್ರಾಮೀಣ ವಿದ್ಯುದೀಕರಣಕ್ಕೆ 16 ಕೋಟಿ ರೂ. ನಿಧಿ ಸ್ಥಾಪನೆ)
* 1 ಲಕ್ಷ ಗ್ರಾಮ ಪಂಚಾಯತ್‍ಗಳಿಗೆ ಹೈಸ್ಪೀಡ್ ಇಂಟರ್ ನೆಟ್ ಸೌಲಭ್ಯ ( 5 ಲಕ್ಷ ವೈಫೈ ಸ್ಟಾಟ್‍ಗಳ ನಿರ್ಮಾಣ)
* 500 ನಗರಗಳ ಮನೆಗಳಿಗೆ ನೀರು ವಿತರಣೆಗಾಗಿ `ಅಮೃತ್’ ಯೋಜನೆ
* ಸ್ವಚ್ಛ ಭಾರತ ಯೋಜನೆ ಅಡಿ ಇನ್ನೂ 2 ಕೋಟಿ ಶೌಚಾಲಯಗಳ ನಿರ್ಮಾಣದ ಗುರಿ ( ಈವರೆಗೆ 6 ಕೋಟಿ ಶೌಚಾಲಯಗಳ ನಿರ್ಮಾಣ)
* 99 ಸ್ಮಾರ್ಟ್ ಸಿಟಿಗಳಿಗೆ 2.04 ಲಕ್ಷ ಕೋಟಿ ಅನುದಾನ
* ಭಾರತ್ ಮಾಲಾ ಯೋಜನೆಯಡಿ 35 ಸಾವಿರ ಕಿ.ಮೀ. ರಸ್ತೆ ನಿರ್ಮಾಣ

ಆರೋಗ್ಯ.. ಶಿಕ್ಷಣಕ್ಕೆ ಸಿಕ್ಕಿದ್ದೇನು?
* 10 ಕೋಟಿ ಬಡ ಕುಟುಂಬಗಳ ಆರೋಗ್ಯ ಸುರಕ್ಷತಾ ವಿಮೆ (`ಆಯುಷ್ಮಾನ್ ಭಾರತ್’ ಯೋಜನೆ – 600 ಕೋಟಿ ಅನುದಾನ. ವಿಶ್ವದಲ್ಲೇ ಅತೀ ದೊಡ್ಡ ಸರ್ಕಾರಿ ಅನುದಾನದ ಯೋಜನೆ )
* 300 ಪ್ರೀಮಿಯಂ ಹಣ ಪಾವತಿಸಿದರೆ 5 ಲಕ್ಷ ರೂ.ವರೆಗೂ ಉಚಿತ ಆರೋಗ್ಯ ಸೇವೆ
* ವೈದ್ಯಕೀಯ ವೆಚ್ಚದ ತೆರಿಗೆ ವಿನಾಯಿತಿ, 40,000ಕ್ಕೆ ಹೆಚ್ಚಳ
* ಆರೋಗ್ಯ ಕ್ಷೇಮ ಕೇಂದ್ರಗಳಿಗಾಗಿ 12,000 ಕೋಟಿ ಅನುದಾನ
* ಜಿಲ್ಲಾಸ್ಪತ್ರೆ ಮೇಲ್ದರ್ಜೆ ಜೊತೆಗೆ 24 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪನೆ
* ಗುಣಮಟ್ಟದ ಶಿಕ್ಷಣಕ್ಕಾಗಿ ಡಿಜಿಟಲ್ ಸೌಲಭ್ಯ ಹೆಚ್ಚಿಸಲು ಆದ್ಯತೆ
* ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ನವೋದಯ ಮಾದರಿಯಲ್ಲಿ ಏಕಲವ್ಯ ವಸತಿ ಶಾಲೆ

ಬೇರೆ ಹೈಲೈಟ್ಸ್
ರಾಷ್ಟ್ರಪತಿ ವೇತನ ತಿಂಗಳಿಗೆ 5 ಲಕ್ಷ (1.50 ಇತ್ತು), ಉಪರಾಷ್ಟ್ರಪತಿ ವೇತನ 4 ಲಕ್ಷ (1.30 ಇತ್ತು), ರಾಜ್ಯಪಾಲ 3.50 ಲಕ್ಷ (1.10 ಲಕ್ಷ ಇತ್ತು) – ಜನವರಿ 2018ರಿಂದಲೇ ವೇತನ ಹೆಚ್ಚಳ ಜಾರಿ
* ಹಣದುಬ್ಬರ ಆಧರಿಸಿ ಸಂಸದರ ವೇತನ ಪ್ರತಿ 5 ವರ್ಷಗಳಿಗೊಮ್ಮೆ ಪರಿಷ್ಕರಿಸಲು ಕಾನೂನು
* ದೆಹಲಿ ವಾಯು ಮಾಲಿನ್ಯ ನಿರ್ವಹಣೆಗೆ ಹರ್ಯಾಣ, ಪಂಜಾಬ್, ದೆಹಲಿ ಸರ್ಕಾರಕ್ಕೆ ವಿಶೇಷ ಯೋಜನೆ
* ಪರಿಶಿಷ್ಟ ಜಾತಿ ಕಲ್ಯಾಣಕ್ಕೆ 56,619 ಕೋಟಿ, ಪರಿಶಿಷ್ಟ ಪಂಗಡ ಅಭಿವೃದ್ಧಿಗೆ 39,135 ಕೋಟಿ
* ಭಾರೀ ಚರ್ಚೆಯಲ್ಲಿರೋ ಬಿಟ್‍ಕಾಯಿನ್‍ಗೆ ಮಾನ್ಯತೆ ಇಲ್ಲ

BUDGET PIB 10

BUDGET PIB 9

Budegt PIB gfx 6

Budegt PIB gfx 7

Budegt PIB gfx 2

Budegt PIB gfx 5

BUDGET PIB 8

BUDGET PIB 7

Budegt PIB gfx 8

BUDGET PIB 6

BUDGET PIB 5

BUDGET PIB 4

Budegt PIB gfx 9

BUDGET PIB 3

BUDGET PIB 2

Budegt PIB gfx 1

Budegt PIB gfx 4

Budegt PIB gfx 3

Share This Article
Leave a Comment

Leave a Reply

Your email address will not be published. Required fields are marked *