ಪುಟಿನ್ (Vladimir Putin) ಯಾವುದೇ ಗಂಭೀರ ಸ್ಪರ್ಧೆ ಎದುರಿಸದೇ ಗೆಲುವು ಸಾಧಿಸಿ, ಮತ್ತೊಮ್ಮೆ ರಷ್ಯಾ (Russia) ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈಗಾಗಲೇ ಸುಮಾರು ಎರಡೂವರೆ ದಶಕಗಳ ಕಾಲ ಆಡಳಿತ ನಡೆಸಿರುವ ಅವರು, ಈ ಬಾರಿಯ ಅಧಿಕಾರ ನಡೆಸುವುದು ಅಷ್ಟೊಂದು ಸಲೀಸಾಗಿಲ್ಲ ಎಂಬ ಚರ್ಚೆಗಳು ಕೇಳಿ ಬರುತ್ತಿದೆ. ಅವರ ಅಧಿಕಾರಕ್ಕೆ ದೇಶ ವಿದೇಶಗಳಿಂದ ಅಪಸ್ವರಗಳು ಎದ್ದಿದೆ. ರಷ್ಯಾಕ್ಕೆ ಇಷ್ಟೇ ಅಲ್ಲದೇ ಹಲವಾರು ಆಂತರಿಕ ಸವಾಲುಗಳು ಸಹ ಎದುರಾಗಿವೆ. ಅವುಗಳಲ್ಲಿ ಪ್ರಮುಖವಾಗಿ ಉಕ್ರೇನ್ ಯುದ್ಧ, ವ್ಯಾಪಾರ ಸಂಬಂಧ, ನಿರಂಕುಶ ಪ್ರಭುತ್ವಕ್ಕೆ ಬೇಸತ್ತು ವಲಸೆ, ರಾಜಕೀಯ ವಿರೋಧ, ದೇಶದ ಆರ್ಥಿಕತೆ ಕುಸಿತ, ಹೀಗೆ ಹಲವಾರು ಸಮಸ್ಯೆಗಳನ್ನು ರಷ್ಯಾ ಎದುರಿಸುತ್ತಿದೆ.
ಉಕ್ರೇನ್ ಯುದ್ಧ ಇನ್ನೂ ಹೆಚ್ಚಾಗತ್ತಾ?
Advertisement
ರಷ್ಯಾ ಉಕ್ರೇನ್‌ನ ಸುಮಾರು ಐದನೇ ಒಂದು ಭಾಗವನ್ನು ನಿಯಂತ್ರಿಸುತ್ತದೆ. ಉಭಯ ದೇಶಗಳ ನಡುವಿನ ಯುದ್ಧದಲ್ಲಿ ಎರಡೂ ಕಡೆಗಳಲ್ಲೂ ಅಪಾರ ಸಾವು ನೋವುಗಳು ಉಂಟಾಗಿದ್ದು, ಎರಡೂ ದೇಶಗಳಲ್ಲೂ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ತನ್ನ ನೆರೆಹೊರೆಯ ಮೇಲೆ ನಿಯಂತ್ರಣವನ್ನು ಸ್ಥಾಪಿಸಲು ಪುಟಿನ್ 2022 ರಲ್ಲಿ ಆರಂಭಿಸಿದ ಯುದ್ಧ ಭಾರೀ ಸಿಬ್ಬಂದಿ ಸಾವಿಗೆ ಕಾರಣವಾಗಿದೆ. ಅಲ್ಲದೇ ರಷ್ಯಾದ ಸಂಪನ್ಮೂಲಗಳನ್ನು ಬರಿದು ಮಾಡುವತ್ತ ಸಾಗಿದೆ. ಸುಮಾರು 45000 ಕ್ಕೂ ಹೆಚ್ಚು ರಷ್ಯಾ ಸೈನಿಕರು ಈ ಯುದ್ಧದಲ್ಲಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಅಮೆರಿಕ ವರದಿಯಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಉಲ್ಲೇಖಿಸಿದೆ. ಈಗ ಮತ್ತೆ ಅಧಿಕಾರಕ್ಕೆ ಏರಿದ ಪುಟಿನ್ ಈ ಯುದ್ಧವನ್ನು ಕೈಬಿಡುತ್ತಾರಾ? ಮುಂದುವರಿಸುತ್ತಾರಾ ಎಂಬ ಪ್ರಶ್ನೆ ಜಗತ್ತಿನ ಮುಂದಿದೆ.
Advertisement
ಭಯೋತ್ಪಾದಕ ದಾಳಿಗೂ ಅಂಟಿದ ಶತ್ರು ರಾಷ್ಟ್ರದ ಛಾಯೆ
Advertisement
ಚುನಾವಣೆ ಮುಗಿದು ತಿಂಗಳು ಕಳೆಯುವ ಮೊದಲೇ ರಷ್ಯಾ ಘೋರ ಭಯೋತ್ಪಾದಕ ದಾಳಿಯನ್ನು ಕಂಡಿದೆ. ದಾಳಿಯಲ್ಲಿ ಸುಮಾರು 150 ಜನ ಸಾವಿಗೀಡಾಗಿದ್ದಾರೆ. ಇದರ ಹೊಣೆಯನ್ನು ಐಸಿಸ್ ಹೊತ್ತರೂ, ಇದು ಉಕ್ರೇನ್ ಕೃತ್ಯ ಎಂದು ರಷ್ಯಾ ಹೇಳಿಕೊಂಡಿದೆ. ದಾಳಿಯ ಬಗ್ಗೆ ಉಕ್ರೇನ್ ಇದು ರಷ್ಯಾದ್ದೇ ಕುತಂತ್ರ ಎಂದು ಪ್ರತ್ಯಾರೋಪ ಮಾಡಿದೆ. ಈ ಆರೋಪಕ್ಕೆ ಪ್ರಮುಖ ಕಾರಣ ಎರಡೂ ವರ್ಷಗಳಿಂದ ಈ ದೇಶಗಳ ನಡುವೆ ನಿರಂತರವಾಗಿ ನಡೆಯುತ್ತಿರುವ ಯುದ್ಧ. ಈ ಯುದ್ಧದಿಂದಾಗಿ ಎರಡೂ ದೇಶಗಳ ನಡುವೆ ಉಂಟಾಗಿರುವ ಅಪನಂಬಿಕೆಗಳು. ಇದರೊಂದಿಗೆ ದೇಶದಲ್ಲಿ ತನ್ನನ್ನು ಬೆಂಬಲಿಸುವ ಜನರನ್ನು ಉಕ್ರೇನ್ ವಿರುದ್ಧ ತಿರುಗಿಸುವುದು ಈ ಆರೋಪದ ಉದ್ದೇಶವಿರಬಹುದು.
Advertisement
ಪಾಶ್ಚಿಮಾತ್ಯ ದೇಶಗಳ ನಿರ್ಬಂಧ
ನಿರ್ಬಂಧಗಳು ಮತ್ತು ನಾರ್ಡ್ ಸ್ಟ್ರೀಮ್ ಗ್ಯಾಸ್ ಪೈಪ್‌ಲೈನ್‌ಗಳ ಸ್ಫೋಟದಿಂದಾಗಿ ರಷ್ಯಾ ತನ್ನ ಲಾಭದಾಯಕ ಯುರೋಪಿಯನ್ ಇಂಧನ ಮಾರುಕಟ್ಟೆಯನ್ನು ಕಳೆದುಕೊಂಡಿದೆ. ಟರ್ಕಿಯ ಹೊಸ ʻಗ್ಯಾಸ್ ಹಬ್ʼಮೂಲಕ ರಷ್ಯಾ ತನ್ನ ಅನಿಲ ರಫ್ತುನ್ನು ಮರುಹೊಂದಿಸಿಕೊಳ್ಳುತ್ತಿದ್ದು, ಇದು ಆರ್ಥಿಕವಾಗಿ ಹೊಡೆತ ಕೊಡುತ್ತಿದೆ.
ಪರಮಾಣು ಶಸ್ತ್ರಾಸ್ತ್ರಗಳು – ಅಮೆರಿಕದೊಂದಿಗೆ ಶಸ್ತ್ರಾಸ್ತ್ರ ಸ್ಪರ್ಧೆ
ರಷ್ಯಾ ಮತ್ತು ಅಮೆರಿಕ ಪರಮಾಣು ಸಿಡಿತಲೆಗಳ ಸಂಖ್ಯೆಯನ್ನು ಮಿತಿಗೊಳಿಸುವ ಹೊಸ START ಒಪ್ಪಂದವು ಫೆಬ್ರವರಿ 2026 ರಲ್ಲಿ ಮುಕ್ತಾಯಗೊಳ್ಳಲಿದೆ. ಈ ಒಪ್ಪಂದ, ಎರಡೂ ಕಡೆಯವರು ಮಿತಿಯಿಲ್ಲದೆ ತಮ್ಮ ಶಸ್ತ್ರಾಸ್ತ್ರಗಳನ್ನು ವಿಸ್ತರಿಸಬಹುದು. ಶೀತಲ ಸಮರದ ಸಮಯದಲ್ಲಿ ಸೋವಿಯತ್ ಒಕ್ಕೂಟವನ್ನು ದುರ್ಬಲಗೊಳಿಸಿದ ಶಸ್ತ್ರಾಸ್ತ್ರ ಸ್ಪರ್ಧೆಯಲ್ಲಿ ಅಮೆರಿಕವನ್ನು ಸೋಲಿಸಲು ರಷ್ಯಾ ರಕ್ಷಣಾ ವೆಚ್ಚದ ಮೇಲಿನ ಹೂಡಿಕೆ ಹೆಚ್ಚಿಸಬೇಕು ಎಂದು ಪುಟಿನ್ ಹೇಳಿಕೊಂಡಿದ್ದಾರೆ.
ಬಾಹ್ಯಾಕಾಶದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸಲು ಯೋಜಿಸುತ್ತಿದೆ ಎಂಬ ಅಮೆರಿಕ ಸಮರ್ಥನೆಗಳನ್ನು ನಿರಾಕರಿಸುವ ರಷ್ಯಾ ಹಲವಾರು ಹೊಸ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರೆಸುತ್ತಿದೆ. ಇದರಿಂದ ಉಕ್ರೇನ್ ಸೇರಿದಂತೆ ಹಲವು ದೇಶಗಳಿಗೆ ಭದ್ರತೆಯ ಆತಂಕವನ್ನು ಹೆಚ್ಚಿಸಿದೆ.
ಹಣದುಬ್ಬರ
ರಷ್ಯಾದಲ್ಲಿ ವಿಶೇಷವಾಗಿ ರಕ್ಷಣಾ ಕೈಗಾರಿಕೆಗಳು ಕೇಂದ್ರೀಕೃತವಾಗಿರುವ ಪ್ರದೇಶಗಳಲ್ಲಿ ವೇತನಗಳು ಹೆಚ್ಚುತ್ತಿವೆ. ಜೀವನಮಟ್ಟದಲ್ಲಿ ನಿರ್ಣಾಯಕ ಪ್ರಗತಿ ಸಾಧಿಸಲು 2018ರ ಭರವಸೆಯನ್ನು ನೀಡಲು ಪುಟಿನ್ ವಿಫಲರಾಗಿದ್ದಾರೆ ಮತ್ತು ಒಟ್ಟಾರೆಯಾಗಿ ನೈಜ ಆದಾಯವು ಕಳೆದ ದಶಕದಿಂದ ಸ್ಥಗಿತಗೊಂಡಿದೆ. 7.6% ರಷ್ಟಿರುವ ಹಣದುಬ್ಬರವನ್ನು ಕಡಿತಗೊಳಿಸುವುದು ಮತ್ತು ಬಜೆಟ್ ಒತ್ತಡಗಳನ್ನು ಕಡಿಮೆ ಮಾಡುವುದು ಈಗಿನ ಆದ್ಯತೆಗಳಾಗಿವೆ. ಈಗ ರಷ್ಯಾ ಶ್ರೀಮಂತ ವ್ಯಕ್ತಿಗಳಿಗೆ ಹೆಚ್ಚಿನ ತೆರಿಗೆಗಳನ್ನು ವಿಧಿಸಲು ಮುಂದಾಗಿದೆ.
ಪುಟಿನ್‌ಗೆ ಪ್ರಬಲ ವಿರೋಧ
ಪುಟಿನ್ ಅವರಿಗೆ ರಷ್ಯಾದಲ್ಲಿ ಪ್ರಬಲ ರಾಜಕೀಯ ವಿರೋಧವಿದೆ. ಈಗ ನಡೆದ ಚುನಾವಣೆಯಲ್ಲಿ ಪುಟಿನ್ ಅಕ್ರಮವಾಗಿ ಗೆದ್ದಿದ್ದಾರೆ ಎಂಬ ಕೂಗುಗಳು ಸಹ ದೇಶದಲ್ಲಿ ಕೇಳಿಬಂದಿತ್ತು. ಅಮೆರಿಕ ಸಹ ರಷ್ಯಾ ಚುನಾವಣೆ ಅಕ್ರಮ ಎಂದು ಆರೋಪಿಸಿದೆ. ಇನ್ನೂ ದೇಶದಲ್ಲಿ ಮಾಧ್ಯಮಗಳ ಮೇಲೆ ಪುಟಿನ್ ನಿರ್ಬಂಧ ವಿಧಿಸಿದ್ದಾರೆ ಎಂಬ ಆರೋಪವಿದೆ.
ಇತ್ತೀಚೆಗೆ ಪುಟಿನ್ ಎದುರಾಳಿ ಅಲೆಕ್ಸಿ ನವಲ್ನಿ ಅವರ ನಿಗೂಢ ಸಾವು ಪುಟಿನ್ ಅವರ ನಿರಂಕುಶ ಪ್ರಭುತ್ವಕ್ಕೆ ಹಿಡಿದ ಕನ್ನಡಿ ಎಂದು ಟೀಕೆ ವ್ಯಕ್ತವಾಗಿದೆ. ಪುಟಿನ್‌ಗೆ ಸವಾಲಾಗಿದ್ದ ಇತರ ರಾಜಕಾರಣಿ ಬೋರಿಸ್ ನೆಮ್ಟ್ಸೊವ್ ಅವರನ್ನು 2015 ರಲ್ಲಿ ಮಾಸ್ಕೋ ಬೀದಿಯಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಇತರ ಭಿನ್ನಮತೀಯರು ಮತ್ತು ಸಂಭಾವ್ಯ ರಾಜಕೀಯ ಸವಾಲುಗಾರರು ಕೂಡ ರಷ್ಯಾದಲ್ಲಿ ಅಥವಾ ಬೇರೆಡೆ ತಮ್ಮ ಅಕಾಲಿಕವಾಗಿ ಸಾವಿಗೀಡಾಗಿದ್ದಾರೆ.