ಸಾಮಾನ್ಯವಾಗಿ ಬರ್ತ್‌ಡೇ, ಆ್ಯನಿವರ್ಸರಿ ಮುಂತಾದ ಕಾರ್ಯಕ್ರಮಗಳಲ್ಲಿ ಕೇಕ್ ಕಟ್ ಮಾಡುವುದು ಕಾಮನ್ ಆಗಿದೆ. ಈ ದುಬಾರಿ ಕೇಕ್‌ಗಳನ್ನು ಪ್ರತಿನಿತ್ಯ ದುಡ್ಡುಕೊಟ್ಟು ತಿನ್ನಲು ಅಸಾಧ್ಯ. ಹಾಗಾಗಿ ಇವತ್ತಿನ ನಮ್ಮ ರೆಸಿಪಿಯಲ್ಲಿ ಅತ್ಯಂತ ಸುಲಭವಾಗಿ ಮನೆಯಲ್ಲೇ ಮಾಡಬಹುದಾದ ಹಾಗೂ ಮಕ್ಕಳಿಗೂ ಇಷ್ಟವಾಗುವಂತಹ ಕೆಟೊ ಮಗ್ ಕೇಕ್ ರೆಸಿಪಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ವೆಜ್‌ಪ್ರಿಯರಿಗಾಗಿ ಎಗ್‌ಲೆಸ್ ಚಾಕ್ಲೆಟ್ ಕೇಕ್ ರೆಸಿಪಿ
Advertisement
ಬೇಕಾಗುವ ಸಾಮಗ್ರಿಗಳು:
ಮೊಟ್ಟೆ – 3
ಸ್ವೀಟ್ನರ್ – 3 ಚಮಚ
ಕೋಕೋ ಪೌಡರ್ – 6 ಚಮಚ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಗಾಜಿನ ಗ್ಲಾಸ್ ಅಥವಾ ಮಗ್‌ಗೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪ ಸವರಿಕೊಂಡು ಪಕ್ಕಕ್ಕಿಡಿ.
* ಬಳಿಕ ಒಂದು ಬೌಲ್‌ಗೆ ಮೊಟ್ಟೆ ಒಡೆದು ಹಾಕಿ. ಅದಕ್ಕೆ ಸ್ವೀಟ್ನರ್ ಹಾಗೂ ಕೋಕೋ ಪೌಡರ್ ಸೇರಿಸಿಕೊಂಡು ಗಂಟಿಲ್ಲದಂತೆ ಚನ್ನಾಗಿ ತಿರುವಿಕೊಳ್ಳಿ.
* ನಂತರ ಈ ಮಿಶ್ರಣವನ್ನು ಮಗ್‌ಗೆ ಹಾಕಿಕೊಂಡು 45 ಸೆಕೆಂಡ್‌ಗಳ ಕಾಲ ಮೈಕ್ರೋ ಓವನ್‌ನಲ್ಲಿ ಬೇಯಿಸಿಕೊಳ್ಳಿ.
* ಈಗ ಬಿಸಿಬಿಸಿಯಾದ ಕೆಟೊ ಮಗ್ ಕೇಕ್ ಸವಿಯಲು ಸಿದ್ಧ. ಇದರ ಮೇಲೆ ಅಲಂಕಾರಕ್ಕಾಗಿ ಚೋಕೋ ಚಿಪ್‌ಗಳನ್ನು ಹಾಕಿಕೊಂಡರೆ ಉತ್ತಮ ಟೇಸ್ಟ್ ನೀಡುತ್ತದೆ. ಇದರ ಬದಲು ಚಾಕ್ಲೇಟ್ ಸಿರಪ್ ಕೂಡ ಹಾಕಿಕೊಳ್ಳಬಹುದು. ಇದನ್ನೂ ಓದಿ: ಸಿಂಪಲ್ಲಾಗಿ ಮಾಡಿ ಬಾದಾಮಿ ಟಾಫಿ ಬಾರ್ಸ್
Advertisement