ನವದೆಹಲಿ: ರಾಮನಗರದ ಬಿಡದಿಯ ಕೇತಗಾನಹಳ್ಳಿ ಬಳಿ ಸರ್ಕಾರಿ ಜಮೀನು ಒತ್ತುವರಿ ಪ್ರಕರಣದಲ್ಲಿ (Kethaganahalli Land Encroachment) ದಾಖಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿ ವಜಾ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಇತ್ಯರ್ಥಪಡಿಸಿದೆ. ವಿಚಾರಣೆ ಬಾಕಿ ಇರುವ ಹಿನ್ನೆಲೆ ಹೈಕೋರ್ಟ್ ಮುಂದೆಯೇ ಈ ಅಂಶವನ್ನು ಪ್ರಾಸ್ತಪಿಸುವಂತೆ ನ್ಯಾಯಾಲಯ ಹೇಳಿದೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಪಂಕಜ್ ಮಿಥಲ್ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠ ವಿಚಾರಣೆ ನಡೆಸಿತು. ಹಿರಿಯ ವಕೀಲ ಮುಕುಲ್ ರೋಹಟ್ಗಿ ಮತ್ತು ವಕೀಲರಾದ ಬಾಲಾಜಿ ಶ್ರೀನಿವಾಸನ್ ಮತ್ತು ನಿಶಾಂತ್ ಎವಿ ವಾದ ಮಂಡಿಸಿದರು. ಇದನ್ನೂ ಓದಿ: ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿಯ ಕಪಿಮುಷ್ಟಿಯಲ್ಲಿದೆ: ಹೆಚ್‌ಡಿಕೆ
ಹೆಚ್.ಡಿ.ಕುಮಾರಸ್ವಾಮಿ ಪರ ವಾದಿಸಿದ ವಕೀಲರು, ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ನಾವು ಪಕ್ಷಕಾರರಲ್ಲ ಅದಾಗ್ಯೂ ನೋಟಿಸ್ ನೀಡಲಾಗುತ್ತಿದೆ ಎಂದು ವಾದಿಸಿದರು. ಸರ್ಕಾರೇತರ ಸಂಸ್ಥೆ ಸಮಾಜ ಪರಿವರ್ತನ ಸಮುದಾಯದ ಪರವಾಗಿ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಅರ್ಜಿದಾರರು ತೆರವು ಪ್ರಕ್ರಿಯೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಈಗಾಗಲೇ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಮಧ್ಯಪ್ರವೇಶ ಮಾಡಿದ ಪೀಠ, ಅರ್ಜಿದಾರರು ಎದುರಿಸುತ್ತಿರುವ ಸಂಕಷ್ಟವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಇದು ರಾಜಕೀಯ ಕಾರಣಗಳಿಗೂ ಇರಬಹುದು. ನಾವು ನಿಮಗೆ ಹೈಕೋರ್ಟ್‌ಗೆ ಹೋಗಲು ಸ್ವಾತಂತ್ರ್ಯ ನೀಡಬಹುದು. ಯಾವುದೇ ಪಕ್ಷಗಳು ಇಲ್ಲಿ ಪೂರ್ವಾಗ್ರಹಕ್ಕೆ ಒಳಗಾಗಬಾರದು ಎಂದು ನಾವು ಬಯಸುತ್ತೇವೆ ಎಂದು ಹೇಳಿ ಅರ್ಜಿಯನ್ನು ಇತ್ಯರ್ಥ ಪಡಿಸಿತು. ಇದನ್ನೂ ಓದಿ: ಹೈಕೋರ್ಟ್ ಆದೇಶದ ಬೆನ್ನಲ್ಲೇ ಹೆಚ್‍ಡಿಕೆ ಕೇತಗಾನಹಳ್ಳಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ
2014 ರಲ್ಲಿ ಎಂಟು ಸರ್ವೆ ನಂಬರ್‌ಗಳ ಒತ್ತುವರಿ ಮಾಡಿದೆ ಎನ್ನಲಾಗಿತ್ತು. ಈ ಒತ್ತುವರಿ ತೆರಿವಿಗೆ ಲೋಕಾಯುಕ್ತ ಸೂಚಿಸಿತ್ತು. ಲೋಕಾಯುಕ್ತದ ಸೂಚನೆ ಬಳಿಕವೂ ಅಧಿಕಾರಿಗಳು ತೆರವು ಮಾಡಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಮಾಜ ಪರಿವರ್ತನ ಸಮಾಜ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು.
ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮೂರು ತಿಂಗಳಲ್ಲಿ ತೆರವು ಮಾಡಲು ಸೂಚನೆ ನೀಡಿತ್ತು. ಹೈಕೋರ್ಟ್ ಸೂಚನೆ ಬಳಿಕವೂ ತೆರವು ಮಾಡದ ಅಧಿಕಾರಿಗಳು ಈ ಹಿನ್ನೆಲೆ ಸಮಾಜ ಪರಿವರ್ತನಾ ಸಮಾಜ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಈ ನ್ಯಾಯಾಂಗ ನಿಂದನೆ ಅರ್ಜಿ ವಜಾ ಮಾಡಲು ಹೆಚ್‌ಡಿ ಕುಮಾರಸ್ವಾಮಿ ಸುಪ್ರೀಂ ಕೋರ್ಟ್‌ಗೆ ಕೋರಿದ್ದರು. ಇದನ್ನೂ ಓದಿ: ನನ್ನನ್ನ ಟಾರ್ಗೆಟ್ ಮಾಡೋದಕ್ಕೆ ಕೇತಗಾನಹಳ್ಳಿ ಜಮೀನು ಸರ್ವೆ – ಕುಮಾರಸ್ವಾಮಿ ಕಿಡಿ