ಗಾಂಧಿನಗರ: ವಿಧಾನಸಭೆ ಚುನಾವಣೆ (Vidhanasabha Election) ಹಿನ್ನೆಲೆ ಬಿಜೆಪಿ (BJP) ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿ ಬಿಡುಗಡೆ ಬೆನ್ನಲ್ಲೇ ಭಿನ್ನಮತ ಶುರುವಾಗಿದೆ. ಟಿಕೆಟ್ ನಿರಾಕರಿಸಿದ ಹಿನ್ನೆಲೆ ಖೇಡಾ ಜಿಲ್ಲೆಯ ಮತರ್ ವಿಧಾನಸಭಾ ಕ್ಷೇತ್ರದ ಶಾಸಕ ಕೇಸರಿಸಿಂಗ್ (Kesari Singh Solanki) ಸೋಲಂಕಿ ಆಮ್ ಅದ್ಮಿ (AAP) ಪಕ್ಷವನ್ನು ಸೇರಿದ್ದಾರೆ.
Advertisement
ಎರಡು ಬಾರಿ ಈ ಕ್ಷೇತ್ರದಿಂದ ಶಾಸಕರಾಗಿದ್ದ ಅವರಿಗೆ ಆಡಳಿತ ವಿರೋಧಿ ಅಲೆ ಹಿನ್ನೆಲೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿತ್ತು. ಇದರಿಂದ ಆಕ್ರೋಶಗೊಂಡ ಸೋಲಂಕಿ ಆಪ್ ಸೇರಿದ್ದು, ಇದನ್ನು ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal), ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿಯಿಂದ ಏಷ್ಯಾದ ಮೊದಲ ಗಾರ್ಡನ್ ಟರ್ಮಿನಲ್ ಉದ್ಘಾಟನೆ – ವಿಶೇಷತೆ ಏನು?
Advertisement
Advertisement
ಕೇಸರಿಸಿಂಗ್ ಸೋಲಂಕಿ, ಜನಪ್ರಿಯ, ಶ್ರಮಜೀವಿ, ಮತರ್ ವಿಧಾನಸಭೆ ಕ್ಷೇತ್ರದ ನಿರ್ಭೀತ ಶಾಸಕ, ಅರವಿಂದ್ ಕೇಜ್ರಿವಾಲ್ ಅವರ ಪ್ರಾಮಾಣಿಕ ರಾಜಕೀಯದಿಂದ ಪ್ರೇರಿತರಾಗಿ ಇಂದು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ. ನಾನು ಸೋಲಂಕಿ ಅವರನ್ನು ಆಮ್ ಆದ್ಮಿ ಪಕ್ಷಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನಾವು ಒಟ್ಟಾಗಿ ಗುಜರಾತ್‍ನಲ್ಲಿ ಪ್ರಾಮಾಣಿಕ ಸರ್ಕಾರವನ್ನು ರಚಿಸುತ್ತೇವೆ ಎಂದು ಇಟಾಲಿಯಾ ಗುರುವಾರ ತಡರಾತ್ರಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.
Advertisement
मातर विधानसभा के लोकप्रिय, कर्मठ, निडर विधायक श्री केसरीसिंह सोलंकी जी आज अरविंद केजरीवाल की ईमानदार राजनीति से प्रेरित होकर आम आदमी पार्टी में शामिल हुए है।
मैं श्री केसरीसिंह जी का आम आदमी पार्टी में दिल से स्वागत करता हूँ। हम सब मिलकर गुजरात में ईमानदार सरकार बनाएंगे। https://t.co/4mMoADhhm1
— Gopal Italia (@Gopal_Italia) November 10, 2022
2014 ರಲ್ಲಿ ಆಗಿನ ಶಾಸಕ ದೇವುಸಿನ್ಹ ಚೌಹಾಣ್ ಲೋಕಸಭೆ ಚುನಾವಣೆಯಲ್ಲಿ ಗೆದ್ದ ನಂತರ ನಡೆದ ಉಪಚುನಾವಣೆಯಲ್ಲಿ ಸೋಲಂಕಿ ಗೆದ್ದಿದ್ದರು. ಚೌಹಾಣ್ ಪ್ರಸ್ತುತ ಕೇಂದ್ರ ಸಂಪರ್ಕ ಖಾತೆ ರಾಜ್ಯ ಸಚಿವರಾಗಿದ್ದಾರೆ. ಸೋಲಂಕಿ ಅವರು 2017 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‍ನಲ್ಲಿ ಕ್ಷೇತ್ರದಿಂದ ಗೆದ್ದಿದ್ದರು.