ಬೆಂಗಳೂರು: ಮಂಡ್ಯ (Mandya) ಕೆರಗೋಡು(Keragodu) ಗ್ರಾಮದಲ್ಲಿ ಹನುಮ ಧ್ವಜ ತೆರವು ವೇಳೆ ಲಾಠಿಚಾರ್ಜ್ (Lathi Charge) ಮಾಡಿದನ್ನು ಪ್ರಶ್ನಿಸಿ ಗ್ರಾಮಸ್ಥರು ಈಗ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಹನುಮ ಧ್ವಜ ತೆರವಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದಾಗ ಗಲಾಟೆ ನಡೆದು ಪೊಲೀರು ಪ್ರತಿಭಟನಕಾರರ ಮೇಲೆ ಲಾಠಿ ಚಾರ್ಜ್ ಕೂಡ ಮಾಡಿದ್ದರು.
ಪೊಲೀಸರು ಲಾಠಿ ಚಾರ್ಜ್ ಮಾಡಿದ ಬಗ್ಗೆ ಕಾನೂನು ಹೋರಾಟ ನಡೆಸಲು ಹೈಕೋರ್ಟ್ ವಕೀಲ ವಿವೇಕ್ ರೆಡ್ಡಿ ಅವರನ್ನು ಗ್ರಾಮಸ್ಥರು ಸಂಪರ್ಕಿಸಿದ್ದಾರೆ. ಆಗಿರುವ ಅನ್ಯಾದ ವಿರುದ್ಧ ಕಾನೂನು ಹೋರಾಟ ನಡೆಸಲು ಕಾನೂನಾತ್ಮಕವಾಗಿ ಸಹಕರಿಸುವಂತೆ ವಿವೇಕ್ ಸುಬ್ಬಾರೆಡ್ಡಿ ಬಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗದಗ ಕಟೌಟ್ ದುರಂತ: ಗಾಯಾಳುಗಳ ಕುಟುಂಬಕ್ಕೆ ಯಶ್ 1 ಲಕ್ಷ ಪರಿಹಾರ
ಕೆರಗೋಡು ಗ್ರಾಮದ ಮುಖಂಡ ಮಹೇಶ್ ಅವರ ಜೊತೆ ಗ್ರಾಮಸ್ಥರು ವಕೀಲರನ್ನು ಭೇಟಿಯಾಗಿ ಅಂದು ಏನೇನು ನಡೆಯಿತು ಎನ್ನುವುದರ ಕುರಿತು ವಿವರಣೆ ನೀಡಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ. ಈ ಕಾರಣಕ್ಕೆ ಕಾನೂನು ಹೋರಾಟದ ಮಾಡೋ ಮೂಲಕ ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕೆರೆಗೋಡು ಗ್ರಾಮಸ್ಥರ ಮನವಿಗೆ ವಿವೇಕ್ ಸುಬ್ಬಾರೆಡ್ಡಿ ಸ್ಪಂದಿಸಿದ್ದು ಕಾನೂನು ಹೋರಾಟಕ್ಕೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.


