ಬೆಂಗಳೂರು: ರಾಜ್ಯದಲ್ಲಿ (Karnataka) ಮತ್ತೆ ಕರೆಂಟ್ ಶಾಕ್ ಕೊಡಲು ವಿದ್ಯುತ್ ಕಂಪನಿಗಳು ಮುಂದಾಗಿವೆ. ರಾಜ್ಯದಲ್ಲಿ ವಿದ್ಯುತ್ ದರ (Power Tariff) ಪರಿಷ್ಕರಣೆ ಮಾಡುವ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿವೆ.
ಈ ಸಂಬಂಧ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(KERC) ಇದೇ 13ರಂದು ರಾಜ್ಯದ ವಿವಿಧೆಡೆಗಳಲ್ಲಿ ಸಾರ್ವಜನಿಕ ಅದಾಲತ್ ಕರೆದಿದೆ. ಸಾರ್ವಜನಿಕರಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಸಂಗ್ರಹಿಸಿ ಕೆಇಆರ್‌ಸಿ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ. ಇದನ್ನೂ ಓದಿ: ಮನೆ ಮುಂದೆ ಮಲಗಿದವರ ಮೇಲೆ ಹುಚ್ಚು ನಾಯಿ ದಾಳಿ – 25ಕ್ಕೂ ಅಧಿಕ ಜನ ಆಸ್ಪತ್ರೆ ದಾಖಲು
Advertisement
Advertisement
ಈಗಾಗಲೇ ಯೂನಿಟ್‍ಗೆ ಒಂದೂವರೆ ರೂಪಾಯಿಯಿಂದ ಎರಡು ರೂಪಾಯಿವರೆಗೂ ದರ ಹೆಚ್ಚಿಸುವಂತೆ ವಿದ್ಯುತ್ ವಿತರಣೆ ಕಂಪನಿಗಳು ಬೇಡಿಕೆ ಇಟ್ಟಿವೆ. ಕಳೆದ ಏಪ್ರಿಲ್‍ನಲ್ಲಷ್ಟೇ ಯೂನಿಟ್‍ಗೆ 35 ಪೈಸೆ ಹೆಚ್ಚಳವಾಗಿತ್ತು. ಸೆಪ್ಟೆಂಬರ್‌ನಲ್ಲಿ ಇಂಧನ ವೆಚ್ಚದ ಹೊಂದಾಣಿಕೆ ನೆಪದಲ್ಲಿ ಪ್ರತಿ ಯೂನಿಟ್‍ಗೆ 43 ಪೈಸೆ ಹೆಚ್ಚಿಸಲಾಗಿತ್ತು.
Advertisement
ಮೇ ತಿಂಗಳಿನಲ್ಲಿ ಚುನಾವಣೆ (Karnataka Election) ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸದ್ಯಕ್ಕೆ ದರ ಪರಿಷ್ಕರಣೆ ಮಾಡುವುದು ಅನುಮಾನ ಎನ್ನಲಾಗುತ್ತಿದೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k