‘ಕೆರಳಿದ ಸಿಂಹ’ ಚಿತ್ರದ ನಿರ್ದೇಶಕ ಚಿ.ದತ್ತರಾಜ್ ನಿಧನ

Public TV
1 Min Read
chi dattaraj

ನಪ್ರಿಯ ಸಾಹಿತಿಗಾರ ಚಿ.ಉದಯಶಂಕರ್ (Chi.Udayashankar) ಅವರ ಸಹೋದರ ನಿರ್ದೇಶಕ ಚಿ.ದತ್ತರಾಜ್ (Chi. Dattaraj) ಅವರು ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಇದನ್ನೂ ಓದಿ:ಸಲ್ಮಾನ್‌ ಖಾನ್‌ಗೆ ಸಹಾಯ ಮಾಡುವವರಿಗೆ ಇದೇ ಗತಿ: ಸಿದ್ದಿಕಿ ಹತ್ಯೆ ಗ್ಯಾಂಗ್‌ನಿಂದ ಬೆದರಿಕೆ ಸಂದೇಶ

chi.dattaraj

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಚಿ.ದತ್ತರಾಜ್‌ಗೆ 87 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಇನ್ನೂ ಇಂದು ಮಧ್ಯಾಹ್ನ 1:30ಕ್ಕೆ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಅಂದಹಾಗೆ, ಡಾ.ರಾಜಕುಮಾರ್ (Dr. Rajkumar) ಅಭಿನಯದ ಕೆರಳಿದ ಸಿಂಹ (Keralidasimha), ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ ಚಿತ್ರ ನಿರ್ದೇಶಿಸಿದ್ದರು. ಶಿವರಾಜಕುಮಾರ್ ನಟನೆಯ ಮೃತ್ಯುಂಜಯ, ಆನಂದ ಜ್ಯೋತಿ ಸೇರಿದಂತೆ ಮಂಜುಳ ನಟಿಸಿದ್ದ ‘ರುದ್ರಿ’ ಮುಂತಾದ ಚಿತ್ರಗಳನ್ನು ಚಿ.ದತ್ತರಾಜ್ ನಿರ್ದೇಶಿಸಿದ್ದರು.

Share This Article