ತಿರುವನಂತಪುರಂ: ಕೇರಳ (Kerala) ದ ಮೊದಲ ಸಲಿಂಗಕಾಮಿ ಬಾಡಿಬಿಲ್ಡರ್ (Transgender Bodybuilder) ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.
ಪ್ರವೀಣ್ ನಾತ್ ಆತ್ಮಹತ್ಯೆ ಮಾಡಿಕೊಂಡವ. ಈತ ಗುರುವಾರ ಮಧ್ಯಾಹನದ ಬಳಿಕ ತನ್ನ ರೆಸಿಡೆನ್ಸಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಪ್ರವೀಣ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಪ್ರಚಾರದ ವೇಳೆ ಕಲ್ಲು ತೂರಾಟ – ಕಾರ್ಯಕರ್ತೆ ತಲೆಗೆ ಗಂಭೀರ ಪೆಟ್ಟು
ಇದೇ ವರ್ಷ ಪ್ರೇಮಿಗಳ ದಿನದಂದು ಪ್ರವೀಣ್ ತನ್ನ ಸಂಗಾತಿಯನ್ನು ವರಿಸಿದ್ದನು. ಆ ಬಳಿಕ ಅವರ ಸಂಸಾರದಲ್ಲಿ ಬಿರುಕು ಮೂಡಿದೆ ಎಂದು ಕೆಲವೊಂದು ಆನ್‍ಲೈನ್ ಮಾಧ್ಯಗಳು ಸುಳ್ಳು ಸುದ್ದಿ ಹಬ್ಬಿಸಿದ್ದವು. ಇದರಿಂದ ಪ್ರವೀಣ್ ನೊಂದಿದ್ದನು ಎಂದು ಹೇಳಲಾಗುತ್ತಿದೆ.