ತಿರುವನಂತಪುರಂ: ಯುವಕನೊಬ್ಬನ ಹತ್ಯೆಗೈದು ಆತನ ಶವವನ್ನು ಪೊಲೀಸ್ ಠಾಣೆ ಮುಂದೆ ಎಸೆದಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಶಾನ್ ಬಾಬು(19) ಎಂದು ಗುರುತಿಸಲಾಗಿದ್ದು, ಶವವನ್ನು ಠಾಣೆ ಬಳಿ ಕೊಂಡೊಯ್ದ ಆರೋಪಿ ಕೆ.ಟಿ. ಜೋಮೋನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಆತನೇ ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ. ವಿಚಾರಣೆ ವೇಳೆ ಜೋಮೋನ್ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಳ್ಳಲು ಸಹ ಯತ್ನಿಸಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ಇದನ್ನೂ ಓದಿ: ಗ್ಯಾಸ್ ವಿತರಣಾ ಯೋಜನೆಗೆ 7000 ಕೋಟಿ ರೂ. ಹೂಡಿಕೆ: ಇಂಡಿಯನ್ ಆಯಿಲ್
Advertisement
Advertisement
ಶಾನ್ ತನಗೆ ಸ್ಪರ್ಧೆ ನೀಡುತ್ತಿದ್ದು, ತನ್ನ ಪ್ರದೇಶದ ಮೇಲೆ ಹಿಡಿತ ಸಾಧಿಸಲು ತನ್ನ ಮೇಲೆ ದಾಳಿ ಮಾಡಿದ್ದನು. ಹೀಗಾಗಿ ನಾನು ಅವನ ಮೇಲೆ ದಾಳಿ ಮಾಡಲು ಯತ್ನಿಸಿದೆ ಆದರೆ ಕೊಲೆ ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ಆರೋಪಿ ತಿಳಿಸಿದ್ದಾನೆ.
Advertisement
Advertisement
ಭಾನುವಾರದಿಂದ ಕಾಣೆಯಾಗಿರುವ ಶಾನ್ ವಿರುದ್ಧ ಇಲಿಯವರೆಗೂ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ. ಇದೀಗ ಶಾನ್ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಕೊಟ್ಟಾಯಂ ಎಸ್‍ಪಿ. ಡಿ. ಶಿಲ್ಪ ತಿಳಿಸಿದ್ದಾರೆ. ಇದನ್ನೂ ಓದಿ: ಯೋಗಿ ಸರ್ಕಾರದಿಂದ 16.5 ಲಕ್ಷ ಯುವಕರು ಉದ್ಯೋಗದಿಂದ ವಂಚಿತ: ಪ್ರಿಯಾಂಕಾ ಗಾಂಧಿ
ಪೊಲೀಸರು ಕೊಟ್ಟಾಯಂ ಜನರಲ್ ಆಸ್ಪತ್ರೆಗೆ ಶಾನ್ ಕರೆದೊಯ್ದು ದಾಖಲಿಸಿದರು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಶಾನ್ ಮೃತಪಟ್ಟಿದ್ದಾನೆ. ಜಿಲ್ಲೆಯಲ್ಲಿ ಡ್ರಗ್ಸ್ ಮಾರಾಟದ ಜಾಲದಲ್ಲಿ ತೊಡಗಿರುವ ಎರಡು ಗ್ಯಾಂಗ್‍ಗಳ ನಡುವಿನ ಹಿಂಸಾಚಾರವೇ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ಸದ್ಯ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.