ತಿರುವನಂತಪುರಂ: ದಲಿತ ಶಾಸಕಿರೊಬ್ಬರು ಪಿಡಬ್ಲ್ಯುಡಿ ಕಚೇರಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ ಎಂದು ಅಲ್ಲಿನ ಯುವ ಕಾಂಗ್ರೆಸ್ ಕಾರ್ಯಕರ್ತರು ಕಚೇರಿಯನ್ನು ಸೆಗಣಿ ಸಾರುವ ಮೂಲಕ ಶುದ್ಧೀಕರಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.
ಈ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ನಡೆದಿದೆ. ನಾಟಿಕಾ ಕ್ಷೇತ್ರದ ಸಿಪಿಐ ಪಕ್ಷದ ದಲಿತ ಶಾಸಕಿ ಗೀತಾ ಗೋಪಿ ಅವರು ಪ್ರತಿಭಟನೆ ಮಾಡಿದ್ದಾರೆ. ಈ ಸ್ಥಳವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ದನದ ಸೆಗಣಿಯ ಮೂಲಕ ಶುದ್ಧೀಕರಣ ಮಾಡಿದ್ದಾರೆ. ಈ ಮೂಲಕ ಜಾತಿ ತಾರತಮ್ಯ ಮೆರೆದಿದ್ದಾರೆ ಎಂದು ದೂರು ನೀಡಲಾಗಿದೆ.
Advertisement
Advertisement
ಗೀತಾ ಗೋಪಿ ಅವರು ತಮ್ಮ ಕ್ಷೇತ್ರದಲ್ಲಿ ರಸ್ತೆಗಳು ಸರಿ ಇಲ್ಲ ತುಂಬ ಕಳಪೆ ಕಾಮಗಾರಿ ನಡೆದಿದೆ ಎಂದು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಸಂಬಂಧ ಪಟ್ಟ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ನಂತರ ಗೀತಾ ಅವರು ಪ್ರತಿಭಟನೆ ನಿಲ್ಲಿಸಿದರು. ಈ ವೇಳೆ ಅವರು ದಲಿತ ಮಹಿಳೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಅವರು ಕುಳಿತ ಜಾಗಕ್ಕೆ ಸೆಗಣಿ ಸಾರಿ ಸ್ವಚ್ಛ ಮಾಡುವ ಮೂಲಕ ಜಾತಿ ನಿಂದನೆ ಮಾಡಿದ್ದಾರೆ.
Advertisement
ಗೀತಾ ಗೋಪಿ ಅವರ ವಿರುದ್ಧ ಪ್ರತಿಭಟನೆ ಮಾಡಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಗೀತಾ ಗೋಪಿ ಅವರು ಜನರಿಗೆ ಮೋಸ ಮಾಡಲು ಈ ಪ್ರತಿಭಟನೆಯ ನಾಟಕ ಆಡುತ್ತಿದ್ದಾರೆ ಎಂದು ಆರೋಪ ಮಾಡಿದರು. ನಂತರ ಅವರು ಕುಳಿತು ಪ್ರತಿಭಟನೆ ಮಾಡಿದ ಸ್ಥಳವನ್ನು ನೀರು ಮತ್ತು ದನದ ಸಗಣಿ ಚುಮುಕಿಸಿ ಶುದ್ಧೀಕರಣ ಮಾಡಿದ್ದಾರೆ.
Advertisement
ಈ ವಿಚಾರ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಗಮನಕ್ಕೆ ಗೀತಾ ಗೋಪಿ ಅವರು ತಂದಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತರ ಈ ಕೃತ್ಯವನ್ನು ನಾವು ಒಪ್ಪುವುದಿಲ್ಲ ಎಂದು ಖಂಡಿಸಿದ್ದಾರೆ.
ಶಾಸಕಿ ಗೀತಾ ಗೋಪಿ ಅವರು ಈ ವಿಚಾರವಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಎಸ್‍ಸಿ/ಎಸ್‍ಟಿ ಜಾತಿ ನಿಂದನೆ ಕಾಯ್ದೆಯ ಆಡಿಯಲ್ಲಿ ಚೆರ್ಪುರ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.