CrimeLatestMain PostNational

27 ದಿನದ ಶಿಶುವಿನ ತಲೆಯನ್ನು ಗೋಡೆಗೆ ಚಚ್ಚಿ ಕೊಂದ ಕ್ರೂರಿ ತಾಯಿ

ತಿರುವನಂತಪುರಂ: 27 ದಿನದ ನವಜಾತ ಶಿಶುವಿನ ತಲೆಯನ್ನು ಹೆತ್ತ ತಾಯಿಯೇ ಗೋಡೆಗೆ ಬಡಿದು ಕ್ರೂರವಾಗಿ ಕೊಂದಿರುವ ಘಟನೆ ಕೇರಳದಲ್ಲಿ ನಡೆದಿದೆ.

ಮಗು ಅನಾರೋಗ್ಯದಿಂದ ಬಳಲುತ್ತಿದ್ದು, ನಿರಂತರವಾಗಿ ಅಳುತ್ತಿದ್ದ ಕಾರಣ 21 ವರ್ಷದ ತಾಯಿಯೇ ಕೃತ್ಯವೆಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಈ ಘಟನೆ ಡಿಸೆಂಬರ್ 9ರಂದು ನಡೆದಿದ್ದು, ಅಂದು ಬೆಳಗ್ಗೆ 11 ಗಂಟೆಗೆ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಬಳಿಕ ಮನೆಗೆ ಹಿಂದಿರುಗಿದ್ದರು. ಆದರೆ ಮಧ್ಯಾಹ್ನದ ವೇಳೆಗೆ ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಹಾಗಾಗಿ ಮಗುವನ್ನು ಆಸ್ಪತ್ರೆಗೆ ಮತ್ತೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಾಕಾರಿಯಾಗಿದೆ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಪೊಲೀಸರಿಗೆ ತಿಳಿಸಿದ್ದರು.

ತನಿಖೆ ವೇಳೆ ಮಹಿಳೆ ಅಡುಗೆ ಕೆಲಸದವಳಾಗಿದ್ದು, 45 ವರ್ಷದ ಪ್ರಿಯಕರನೊಂದಿಗೆ ಆಶ್ರಮದಲ್ಲಿ ವಾಸಿಸುತ್ತಿರುವುದಾಗಿ, ಆಶ್ರಮವನ್ನು ನಡೆಸುತ್ತಿದ್ದ ಫಾದರ್ ಜೋಜಿ ಥಾಮಸ್ ಹೇಳಿಕೆ ನೀಡಿದ್ದು, ಅದರ ಅನ್ವಯ ಪೊಲೀಸರು ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ನಮಾಜ್ ಮಾಡಲು ಅವಕಾಶ ನೀಡಲ್ಲ – ಹರ್ಯಾಣ ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಡಿಸೆಂಬರ್ 10ರಂದು ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ತಲೆಯ ಭಾಗಕ್ಕೆ ಹಿಂಭಾಗಕ್ಕೆ ಗಾಯವಾಗಿರುವುದು ಕಂಡುಬಂದಿದ್ದು, ಇದೀಗ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲಿ ಓಮ್ರಿಕಾನ್ ರಣಕೇಕೆ – ಬ್ರಿಟನ್‍ನಲ್ಲಿ ಓಮಿಕ್ರಾನ್‍ಗೆ ಮೊದಲ ಬಲಿ

Leave a Reply

Your email address will not be published.

Back to top button