ತಿರುವನಂತಪುರಂ: ಮಹಿಳೆ ತನ್ನ ಪತಿಗೆ 6 ವರ್ಷದಿಂದ ಗಂಡನ ಆಹಾರಕ್ಕೆ ಡ್ರಗ್ಸ್ ಸೇರಿಸುತ್ತಿದ್ದಳು. ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾ ಪಟ್ಟಣದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಆಶಾ (36) ಬಂಧಿತ ಆರೋಪಿಯಾಗಿದ್ದಾಳೆ. ಈಕೆ ಪತಿ ಸತೀಶ್ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿದ್ದಾರೆ.
ದಂಪತಿ 2006ರಲ್ಲಿ ವಿವಾಹವಾಗಿದ್ದಾರೆ. ಐಸ್ ಕ್ರೀಮ್ ಉದ್ಯಮವನ್ನು ಸತೀಶ್ ಪ್ರಾರಂಭಿಸಿದರು. 2012ರಲ್ಲಿ ದಂಪತಿ ಪಾಲಕ್ಕಾಡ್‍ನಲ್ಲಿ ಸ್ವಂತ ಮನೆಯನ್ನು ಖರೀದಿ ಮಾಡಿದರು. ದಂಪತಿ ಮಧ್ಯೆ ಆಗಾಗಾ ಸಣ್ಣ, ಪುಟ್ಟ ವಿಚಾರಗಳಿಗೆ ಜಗಳವಾಡುತ್ತಿತ್ತು. ಇತ್ತ ಸತೀಶ್‌ಗೆ ಅನಾರೋಗ್ಯವು ಕಾಡುತ್ತಿತ್ತು. ಬಹಳ ಸುಸ್ತಾಗುತ್ತಿತ್ತು, ಹೀಗಾಗಿ ವೈದ್ಯರನ್ನು ಸಂಪರ್ಕಿಸಿದ ವೇಳೆ ಅವರು ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿರುವುದು ಸುಸ್ತಿಗೆ ಕಾರಣವಾಗಿರಬಹುದು ಎಂದು ಸಲಹೆ ನೀಡಿದರು. ಸತೀಶ್ ವೈದ್ಯರು ಕೊಟ್ಟ ಔಷಧವನ್ನು ಸೇವಿಸಿದರೂ ಸತೀಶ್ ಆರೋಗ್ಯ ಸುಧಾರಿಸಲಿಲ್ಲ. ಇದನ್ನೂ ಓದಿ: ಶಾರೂಖ್ ಜೊತೆ ಪ್ರಾರ್ಥನೆ ಮಾಡಿದ್ದು ಪತ್ನಿ ಗೌರಿ ಖಾನ್ ಅಲ್ಲ
2021ರ ಸೆಪ್ಟೆಂಬರ್ ನಂತರ ಸತೀಶ್ ಮನೆಯ ಆಹಾರವನ್ನು ಊಟ ಮಾಡುವುದನ್ನು ಬಿಟ್ಟರು. ನಂತರ ಅವರ ಆರೋಗ್ಯ ಕ್ರಮೇಣವಾಗಿ ಸುಧಾರಿಸುತ್ತಾ ಬಂದಿದೆ. ಈ ವಿಚಾರವಾಗಿ ಅನುಮಾನಗೊಂಡು ಆಶಾ ತನ್ನ ಆಹಾರಕ್ಕೆ ಯಾವುದಾದರೂ ಔಷಧ ಸೇರಿಸುತ್ತಿದ್ದಾಳೆಯೇ ಎಂದು ಪತ್ತೆ ಹಚ್ಚಲು ಸತೀಶ್ ಸ್ನೇಹಿತನ ಸಹಾಯ ಕೇಳಿದ್ದಾನೆ.
ಸತೀಶ್ ಸ್ನೇಹತ ಆಶಾಳವನ್ನು ವಿಚಾರಿಸಿದಾಗ ಆಕೆ ಪತಿಯ ಊಟಕ್ಕೆ ಮಾದಕ ವಸ್ತೂವನ್ನು ಬಳಸುತ್ತಿರುವುದಾಗಿ ಹೇಳಿದ್ದಾಳೆ. ಈ ವಿಚಾರವನ್ನು ತಿಳಿದ ಸತೀಶ್ ಸಿಸಿಟಿವಿ ದೃಶ್ಯಗಳನ್ನು ಇಟ್ಟುಕೊಂಡು ಪೊಲೀಸರಲ್ಲಿ ದೂರು ನೀಡಿದ್ದಾನೆ. ಪತಿ ನೀಡಿದ ದೂರಿನ ಆದಾರದ ಮೇಲೆ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.