ತಿರುವನಂತಪುರಂ: ಪಾನೀಯದಲ್ಲಿ ವಿಷ ಬೆರೆಸಿ ಬಾಯ್‌ಫ್ರೆಂಡ್ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೇರಳದ ಮಹಿಳೆಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ಘಟನೆ ನಡೆದು ಸುಮಾರು ಎರಡು ವರ್ಷಗಳ ನಂತರ, ಗ್ರೀಷ್ಮಾ ಎಂಬ ಮಹಿಳೆಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಈಕೆ ತನ್ನ 23 ವರ್ಷದ ಗೆಳೆಯ ಶರೋನ್ ರಾಜ್‌ಗೆ ವಿಷ ನೀಡಿ ಕೊಲೆ ಮಾಡಿದ್ದಳು. ಬಳಿಕ ಆಕೆಯೂ ವಿಷ ಸೇವಿಸಿದ್ದಳು. ಕೊನೆಗೆ ಆಕೆ ಬದುಕುಳಿದಿದ್ದಳು.
Advertisement
Advertisement
ಕಳೆದ ವಾರ ಕೊಲೆಗೆ ಗ್ರೀಷ್ಮಾ ಮತ್ತು ಆಕೆಯ ಚಿಕ್ಕಪ್ಪನನ್ನು ದೋಷಿಗಳೆಂದು ತೀರ್ಪು ನೀಡಿದ ಸ್ಥಳೀಯ ನ್ಯಾಯಾಲಯವು, ಆರೋಪಿಗಳ ವಯಸ್ಸನ್ನು ಅಪರಾಧದ ಗಂಭೀರತೆಗಿಂತ ಹೆಚ್ಚಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಗ್ರೀಷ್ಮಾ ಕೇರಳದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾದ ಅತ್ಯಂತ ಕಿರಿಯ ಮಹಿಳೆ.
Advertisement
2022 ರಲ್ಲಿ, ಗ್ರೀಷ್ಮಾ ತನ್ನ ಗೆಳೆಯನಿಗೆ ಪ್ಯಾರಾಕ್ವಾಟ್ ಎಂಬ ಕಳೆನಾಶಕ ಬೆರೆಸಿದ ಪಾನೀಯವನ್ನು ನೀಡಿದ್ದಳು. 11 ದಿನಗಳ ನಂತರ ಬಹು ಅಂಗಾಂಗ ವೈಫಲ್ಯದಿಂದ ಆತ ಸಾವನ್ನಪ್ಪಿದ್ದ. ತಮಿಳುನಾಡಿನ ಸೇನಾ ಸಿಬ್ಬಂದಿಯೊಂದಿಗೆ ಗ್ರೀಷ್ಮಾಳ ವಿವಾಹ ನಿಶ್ಚಯವಾಗಿತ್ತು. ಆದರೆ, ಆಕೆಯೊಂದಿಗಿನ ಸಂಬಂಧವನ್ನು ಕೊನೆಗೊಳಿಸಲು ಬಾಯ್‌ಫ್ರೆಂಡ್ ನಿರಾಕರಿಸಿದ್ದ. ಈ ಹಿನ್ನೆಲೆಯಲ್ಲಿ ಆಕೆ ಕೊಲೆಗೆ ಸಂಚು ರೂಪಿಸಿದ್ದಳು.
Advertisement
ಗ್ರೀಷ್ಮಾ ಈ ಹಿಂದೆಯೂ ಹಣ್ಣಿನ ರಸದಲ್ಲಿ ಪ್ಯಾರಸಿಟಮಾಲ್ ಮಾತ್ರೆಗಳನ್ನು ಬೆರೆಸಿ ರಾಜ್‌ಗೆ ವಿಷ ನೀಡಲು ಪ್ರಯತ್ನಿಸಿದ್ದಳು. ಆದರೆ ಅದರ ಕಹಿ ರುಚಿಯಿಂದಾಗಿ ಕುಡಿಯಲು ನಿರಾಕರಿಸಿದ್ದ. ಇದರಿಂದ ಕೊಲೆ ಯತ್ನ ವಿಫಲವಾಗಿತ್ತು.