ಇನ್ಮುಂದೆ ಕೇರಳ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗೆ 60 ದಿನ ಹೆರಿಗೆ ರಜೆ

Public TV
1 Min Read
husband forced a woman to eat human bones to get pregnant

ತಿರುವನಂತಪುರಂ: ಕೇರಳದಲ್ಲಿ (Kerala) ಮೊದಲ ಬಾರಿಗೆ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯವು 18 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಪದವಿ ವಿದ್ಯಾರ್ಥಿನಿಯರಿಗೆ 60 ದಿನಗಳ ಹೆರಿಗೆ ರಜೆ (Maternity Leave) ನೀಡಲು ನಿರ್ಧರಿಸಿದೆ.

ಉಪ ಕುಲಪತಿ ಸಿ.ಟಿ. ಅರವಿಂದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯ (University) ಪ್ರಕಟಿಸಿದ್ದು, ವಿದ್ಯಾರ್ಥಿನಿಯರು 60 ದಿನಗಳ ನಂತರ ಅವರು ಯಾವುದೇ ಅಡೆತಡೆಯಿಲ್ಲದೇ ಅಧ್ಯಯನವನ್ನು ಮುಂದುವರಿಸಬಹುದು ಎಂದು ತಿಳಿಸಿದೆ.

University

ವಿಶ್ವವಿದ್ಯಾನಿಲಯದ ಪ್ರಕಾರ, ಮಾತೃತ್ವ ರಜೆಯನ್ನು ಹೆರಿಗೆಯ ಮೊದಲು ಅಥವಾ ನಂತರ ತೆಗೆದುಕೊಳ್ಳಬಹುದು. ಆದರೆ ಮೊದಲ ಅಥವಾ ಎರಡನೆಯ ಗರ್ಭಧಾರಣೆಗೆ ಮಾತ್ರ ಈ ರಜೆ ಅನ್ವಯಿಸಲಿದ್ದು, ಕೋರ್ಸ್ ಅವಧಿಯಲ್ಲಿ ಒಮ್ಮೆ ಮಾತ್ರ ಈ ರಜೆ ತೆಗೆದುಕೊಳ್ಳಬಹುದಾಗಿದೆ.

ರಜೆಯ ಅವಧಿಯು ಸಾರ್ವಜನಿಕ ಮತ್ತು ಸಾಮಾನ್ಯ ರಜಾದಿನಗಳನ್ನು ಒಳಗೊಂಡಿದ್ದು, ಅದನ್ನು ಬೇರೆ ಯಾವುದೇ ರಜೆಯೊಂದಿಗೂ ಸೇರಿಸಲಾಗುವುದಿಲ್ಲ. ಇದರ ಜೊತೆಗೆ ಗರ್ಭಪಾತ, ಟ್ಯೂಬೆಕ್ಟಮಿ ಇತ್ಯಾದಿ ಪ್ರಕರಣಗಳಲ್ಲಿ 14 ದಿನಗಳ ರಜೆ ನೀಡಲಾಗುವುದು ಎಂದು ಮಾಹಿತಿ ನೀಡಿದೆ.

pregnant women

ಮಾತೃತ್ವ ರಜೆಯಲ್ಲಿರುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ, ಲ್ಯಾಬ್ ಮತ್ತು ವೈವಾ ಪರೀಕ್ಷೆಗಳಿದ್ದರೆ, ಸಂಸ್ಥೆ ಅಥವಾ ವಿಭಾಗದ ಮುಖ್ಯಸ್ಥರು ಇದಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು ಎಂದು ಹೇಳಿದೆ. ಇದನ್ನೂ ಓದಿ: ಫೆಬ್ರವರಿಯಲ್ಲಿ ಬಜೆಟ್ ಮಂಡನೆ: ಬೊಮ್ಮಾಯಿ

exam 2

ಮಾತೃತ್ವ ರಜೆ ಪಡೆಯುವ ವಿದ್ಯಾರ್ಥಿನಿಯರು ರಜೆ ಪ್ರಾರಂಭವಾಗುವ 3 ದಿನಗಳ ಮೊದಲು ಅರ್ಜಿಯನ್ನು ಸಲ್ಲಿಸಬೇಕು. ಇದರ ಜೊತೆಗೆ ನೋಂದಾಯಿತ ವೈದ್ಯರ ವೈದ್ಯಕೀಯ ಪ್ರಮಾಣಪತ್ರವನ್ನು ಒದಗಿಸಬೇಕು ಎಂದು ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಮೆಸ್ಕಾಂ ಕಚೇರಿಯಲ್ಲಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಏಟು – ದಲಿತ ಸಂಘಟನೆಗಳ ಆಕ್ರೋಶ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *