ಮಂಗಳೂರು: ಕೇರಳದಿಂದ ಮಂಗಳೂರಿಗೆ ಗರ್ಭಿಣಿ ಕಾಲ್ನಡಿಗೆಯಲ್ಲಿ ಆಗಮಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತದ ನೆರವಿನಿಂದ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೇರಳದ ಕಣ್ಣೂರಿನಲ್ಲಿ ವಿಜಯಪುರ ಮೂಲದ ಎಂಟು ಜನರು ಕೆಲಸ ಮಾಡಿಕೊಂಡಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿಜಯಪುರಕ್ಕೆ ಹೋಗಲು ಈ ಎಂಟು ಕಾರ್ಮಿಕರು ನಿರ್ಧರಿದ್ದರು. ವಾಹನಗಳ ಸೌಲಭ್ಯ ಸಿಗದಿದ್ದಕ್ಕೆ ಕಾಲ್ನಡಿಗೆಯಲ್ಲಿ ತೆರಳಲು ನಿರ್ಧರಿಸಿದ್ದರು.
Advertisement
Advertisement
ಏಳು ದಿನಗಳ ಹಿಂದೆ ಕಣ್ಣೂರಿನಿಂದ ನಡೆಯಲಾರಂಭಿಸಿದ್ದ ಎಂಟು ಜನ ಇಂದು ಮಂಗಳೂರು ತಲುಪಿದ್ದಾರೆ. ಗರ್ಭಿಣಿ ಸುಸ್ತಾಗಿದ್ದರಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತದ ನೆರವಿನಿಂದ ಗರ್ಭಿಣಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.