ತಿರುವನಂತಪುರಂ: ಕೇರಳದ ದೇವಸ್ಥಾನದ ಉತ್ಸವದಲ್ಲಿ ಕೇರಳದ ಕಲಾವಿದೆಗೆ ನೃತ್ಯ ಪ್ರದರ್ಶನ ನೀಡುವುದನ್ನು ನಿರ್ಬಂಧಿಸಲಾಗಿದೆ. ಮುಸ್ಲಿಂ ಧರ್ಮದವರು ಎಂಬ ಕಾರಣಕ್ಕೆ ದೇಗುಲದಲ್ಲಿ ನೃತ್ಯ ಮಾಡುವುದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.
ದೇವಸ್ಥಾನದ ಉತ್ಸವದಲ್ಲಿ ಪ್ರದರ್ಶನ ನೀಡಲು ಮದ್ರಾಸ್ ವಿವಿಯಿಂದ ಎಂ.ಎ. ಭರತನಾಟ್ಯಂ ಕೋರ್ಸ್‍ನಲ್ಲಿ ಮೊದಲ ರ‍್ಯಾಂಕ್ ಪಡೆದ ಶಾಸ್ತ್ರೀಯ ನೃತ್ಯಗಾರ್ತಿ ಮಾನ್ಸಿಯಾ ವಿ.ಪಿ ಅವರು ಹಿಂದೂ ಅಲ್ಲ ಎಂಬ ಕಾರಣಕ್ಕೆ ತ್ರಿಶ್ಯೂರು ಜಿಲ್ಲೆಯ ಜಲಕೂಡದಲ್ಲಿರುವ ಕೂಡಲ್ ಮಾಣಿಕ್ಯಂ ದೇವಸ್ಥಾನದಲ್ಲಿ ನೃತ್ಯ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Advertisement
Advertisement
ಅನ್ಯ ಧರ್ಮಗಳು ಹೊರಗಿನವರನ್ನು ಆಕರ್ಷಿಸಲು ಅನೇಕ ಮಾರ್ಗಗಳನ್ನು ಹುಡುಕುತ್ತಾರೆ. ಆದರೆ ನಮ್ಮ ಕೆಲವು ಹಿಂದೂಗಳು ದೇವಸ್ಥಾನಗಳನ್ನು ಮುಚ್ಚಲು ಬಯಸುತ್ತಾರೆ. ಎಲ್ಲಿದೆ ವಸುದೈವ ಕುಟುಂಬ ಎಂದು ದೇವಸ್ಥಾನದ ಉತ್ಸವದಲ್ಲಿ ಅನ್ಯ ಕೋಮಿನ ನೃತ್ಯಗಾರ್ತಿಗೆ ಪ್ರದರ್ಶನ ನೀಡಲು ನಿರಾಕರಿಸಿದ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ ಕಿಡಿಕಾರಿದ್ದಾರೆ.
Advertisement
ಕೇರಳದ ದೇವಸ್ಥಾನದ ಉತ್ಸವದಲ್ಲಿ ಕೇರಳದ ಕಲಾವಿದೆಗೆ ನೃತ್ಯ ಪ್ರದರ್ಶನ ನೀಡುವುದನ್ನು ನಿರ್ಬಂಧಿಸಲಾಗಿದೆ. ಮಸ್ಲಿಂ ಮಹಿಳೆ ಎಂಬ ಕಾರಣಕ್ಕೆ ದೇಗುಲದಲ್ಲಿ ನೃತ್ಯ ಮಾಡುವುದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
Advertisement
ಟ್ವೀಟ್‍ನಲ್ಲಿ ಏನಿದೆ?: ಇತರ ಧರ್ಮಗಳು ಇತರರನ್ನು ಆಕರ್ಷಿಸಲು ಅನೇಕ ಮಾರ್ಗಗಳನ್ನು ಹುಡುಕುತ್ತದೆ. ಮಸೀದಿಗಳು, ಚರ್ಚ್‍ಗಳು, ಗುರುದ್ವಾರಗಳ ಬಾಗಿಲುಗಳು ಎಲ್ಲರಿಗೂ ತೆರೆದಿರುತ್ತದೆ. ಆದರೆ ನಮ್ಮ ಕೆಲವು ಸಹ ಹಿಂದೂಗಳು ನಮ್ಮ ದೇವಾಲಯಗಳನ್ನು ಹೊರಗಿನವರಿಗೆ ಮುಚ್ಚಲು ಬಯಸುತ್ತಾರೆ. ವಸುದೈವ ಕುಟುಂಬಕಂ ಎಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ದೆಹಲಿಯ ಲಡ್ಡು ತಿನ್ನಬೇಡಿ: ಮಮತಾ ಬ್ಯಾನರ್ಜಿ
Other faiths go out of their way to attract others to respect their religion, throwing open the doors of mosques, churches, gurudwaras& synagogues to all, but some of my fellow Hindus prefer to shut our temples to outsiders: https://t.co/BKPCiBbbZH
Where’s “vasudaiva kutumbakam”?
— Shashi Tharoor (@ShashiTharoor) March 29, 2022
ಗರ್ಭಗುಡಿಯ ಪ್ರವೇಶದ ಬಗ್ಗೆ ಕೆಲವು ದೇವಾಲಯಗಳಲ್ಲಿ ಕೆಲವು ನಿರ್ಬಂಧಗಳನ್ನು ಹೇರಿರುತ್ತಾರೆ. ಆದರೆ ಇದು ದೇವಾಲಯದ ಆವರಣದಲ್ಲಿ ಇತರ ನೃತ್ಯಗಾರರೊಂದಿಗೆ ನಡೆದ ನೃತ್ಯ ಪ್ರದರ್ಶನವಾಗಿದೆ. ದೇಗುಲ ಅನುಮತಿ ನೀಡದಿರುವುದು ಆಘಾತಕಾರಿಯಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪ್ರಶ್ನೆ ಎದುರಿಸಲಾಗದವರು ಮಾನನಷ್ಟ ಮೊಕದ್ದಮೆ ಮೊರೆ ಹೋಗ್ತಾರೆ: ಡಿಎಂಕೆ ವಿರುದ್ಧ ಅಣ್ಣಾಮಲೈ ಕಿಡಿ