ಸಿಹಿ, ಉಪ್ಪು, ಹುಳಿ, ಖಾರದ ಅದ್ಭುತ ಮಿಶ್ರಣವಾದ ಈ ಪುಳಿ ಇಂಜಿ (Puli Inji) ಕೇರಳದಲ್ಲಿ ಹಬ್ಬಗಳ ಸಂದರ್ಭ ಬಡಿಸುವ ಒಂದು ಪ್ರಮುಖ ಉಪ್ಪಿನಕಾಯಿಯಾಗಿದೆ. ಶುಂಠಿ, ಹಸಿರು ಮೆಣಸಿನಕಾಯಿ, ಹುಣಸೆಹಣ್ಣು ಹಾಗೂ ಬೆಲ್ಲದ ಸಂಯೋಜನೆಯಲ್ಲಿ ಮಾಡುವ ಉಪ್ಪಿನಕಾಯಿ ಬಿಸಿ ಅನ್ನದೊಂದಿಗೆ ಸಖತ್ ಟೇಸ್ಟ್ ನೀಡುತ್ತದೆ. ನೀವೊಮ್ಮೆ ಇದನ್ನು ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಸಣ್ಣಗೆ ಹೆಚ್ಚಿದ ಶುಂಠಿ – ಅರ್ಧ ಕಪ್
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 8
ಕೆಂಪು ಮೆಣಸಿನಕಾಯಿ – 1
ಹುಣಸೆಹಣ್ಣು – 1 ನೆಲ್ಲಿಕಾಯಿ ಗಾತ್ರದಷ್ಟು
ಎಳ್ಳಿನ ಎಣ್ಣೆ – 2 ಟೀಸ್ಪೂನ್
ಸಾಸಿವೆ – 1 ಟೀಸ್ಪೂನ್
ಕರಿಬೇವಿನ ಎಲೆ – ಕೆಲವು
ಅರಿಶಿನ ಪುಡಿ – ಅರ್ಧ ಟೀಸ್ಪೂನ್
ತುರಿದ ಬೆಲ್ಲ – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ರುಚಿಕರ ಬೆಂಡೆಕಾಯಿ ಚಟ್ನಿ ಒಮ್ಮೆ ಟ್ರೈ ಮಾಡಿ ನೋಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಹುಣಸೆಹಣ್ಣನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ರಸವನ್ನು ತೆಗೆಯಿರಿ.
* ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ ಸಿಡಿಸಿ.
* ಈಗ ಕೆಂಪು ಮೆಣಸಿನಕಾಯಿ, ಹೆಚ್ಚಿದ ಶುಂಠಿ, ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ.
* ಶುಂಠಿ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
* ಬಳಿಕ ಹುಣಸೆಹಣ್ಣಿನ ರಸ, ಅರಿಶಿನ ಪುಡಿ, ಉಪ್ಪು ಸೇರಿಸಿ.
* ಹುಣಸೆಹಣ್ಣಿನ ರಸ ಆವಿಯಾಗುವವರೆಗೆ ಹಾಗೂ ಮಿಶ್ರಣ ದಪ್ಪವಾಗುವವರೆಗೆ ಚೆನ್ನಾಗಿ ಕುದಿಸಿ.
* ಪುಳಿ ಇಂಜಿ ದಪ್ಪವಾದ ಮೇಲೆ ಬೆಲ್ಲವನ್ನು ಹಾಕಿ, ಉರಿಯನ್ನು ಆಫ್ ಮಾಡಿ.
* ಇದೀಗ ಪುಳಿ ಇಂಜಿ ತಯಾರಾಗಿದ್ದು, ಇದನ್ನು ಬಿಸಿ ಅನ್ನದೊಂದಿಗೆ ಬಡಿಸಿ. ನೀವಿದನ್ನು ಫ್ರಿಡ್ಜ್ನಲ್ಲಿಟ್ಟರೆ 2 ವಾರಗಳವರೆಗೆ ಬಳಸಬಹುದು. ಇದನ್ನೂ ಓದಿ: ಫಟಾಫಟ್ ಅಂತ ಮಾಡಿ ನೆಲ್ಲಿಕಾಯಿ ಉಪ್ಪಿನಕಾಯಿ