ನವದೆಹಲಿ: `ದಿ ಕೇರಳ ಸ್ಟೋರಿ’ (The Kerala Story) ಚಿತ್ರದ ನಿಷೇಧ ಕುರಿತು ಪಶ್ಚಿಮ ಬಂಗಾಳ (West Bengal) ಮತ್ತು ತಮಿಳುನಾಡಿನ (Tamil Nadu) ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಪಶ್ಚಿಮ ಬಂಗಾಳವು ದೇಶದ ಇತರ ರಾಜ್ಯಗಳಿಗಿಂತ ಭಿನ್ನವಾಗಿಲ್ಲ. ಅದೇ ಪ್ರಜಾಪ್ರಭುತ್ವದ ಅಂಶಗಳನ್ನು ಹೊಂದಿರುವ ಎಲ್ಲಾ ರಾಜ್ಯಗಳಲ್ಲಿ ಚಿತ್ರ ಓಡುತ್ತಿದೆ. ಆದರೆ ಪಶ್ಚಿಮ ಬಂಗಾಳ ಚಿತ್ರವನ್ನು ಏಕೆ ನಿಷೇಧಿಸಿದೆ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಅಲ್ಲದೆ ಥಿಯೇಟರ್‌ಗಳಿಗೆ ಭದ್ರತೆ ಒದಗಿಸಿರುವ ಕುರಿತು ತಮಿಳುನಾಡು ಸರ್ಕಾರಕ್ಕೆ ಕಾರಣ ಕೇಳಿದೆ. ಇದನ್ನೂ ಓದಿ: ಬ್ರಿಜ್ ಭೂಷಣ್ ವಿರುದ್ಧದ ಕಿರುಕುಳ ಆರೋಪ – ತನಿಖೆಗೆ ಎಸ್‍ಐಟಿ ರಚನೆ
Advertisement
Advertisement
ಅರ್ಜಿದಾರರಾದ ಚಲನಚಿತ್ರ ನಿರ್ಮಾಪಕ, ಪಶ್ಚಿಮ ಬಂಗಾಳ ಚಿತ್ರವನ್ನು ನಿಷೇಧ ಮಾಡಿರುವುದರಿಂದ ಆರ್ಥಿಕವಾಗಿ ನಷ್ಟವಾಗುತ್ತಿದೆ. ಅಲ್ಲದೆ ತಮಿಳುನಾಡು ಸಹ ಚಿತ್ರ ನಿಷೇಧಕ್ಕೆ ಮುಂದಾಗಿದೆ. ಅಲ್ಲದೆ ಇದು ಸವಿಂಧಾನದ 19 (1) (ಎ) ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯತ್ನ ಎಂದು ಮೇ 10 ರಂದು ನ್ಯಾಯಾಲಯದ ಮುಂದೆ ಮನವಿ ಮಾಡಿದ್ದರು.
Advertisement
Advertisement
ಚಿತ್ರ ನಿಷೇಧವು ಚಲನಚಿತ್ರದಿಂದ ಬರುವ ಆದಾಯವನ್ನು ಕಡಿತಗೊಳಿಸುವ ಉದ್ದೇಶದಿಂದ ಮಾಡಲಾಗಿದೆ. ಅಲ್ಲದೆ ಇದು ಚಲನಚಿತ್ರದ ಪೈರಸಿ ಪ್ರಚೋದನೆಯನ್ನು ನೀಡುತ್ತದೆ ಎಂದು ನಿರ್ಮಾಪಕರು ದೂರಿದ್ದರು.
ಚಲನಚಿತ್ರಗಳ (ನಿಯಂತ್ರಣ) ಕಾಯಿದೆಯ ಸೆಕ್ಷನ್ 6 (1) ಅಡಿಯಲ್ಲಿ ಶಾಂತಿ ಭಂಗವನ್ನು ಉಂಟುಮಾಡುವ ಸಾಧ್ಯತೆ, ದ್ವೇಷ ಮತ್ತು ಹಿಂಸಾಚಾರ ಸಾಧ್ಯತೆ ಸಲುವಾಗಿ ಪಶ್ಚಿಮ ಬಂಗಾಳ ಈ ಚಿತ್ರಕ್ಕೆ ನಿಷೇಧ ಹೇರಿತ್ತು. ಇದನ್ನೂ ಓದಿ: ಗೇಮ್ಸ್‌ಕ್ರಾಫ್ಟ್ ಜಿಎಸ್‍ಟಿ ಶೋಕಾಸ್ – ರದ್ದುಗೊಳಿಸಿದ ಹೈಕೋರ್ಟ್