ತಿರುವನಂಪುರಂ: ಭಾನುವಾರ ಭಾರತ (India) ಹಾಗೂ ಶ್ರೀಲಂಕಾ (Sri Lanka) ನಡುವಿನ ಕೊನೆಯ ಏಕದಿನ ಪಂದ್ಯ ಕೇರಳದ ತಿರುವನಂತಪುರಂ (Thiruvananthapura) ಸ್ಟೇಡಿಯಂನಲ್ಲಿ (Stadium) ನಡೆದಿತ್ತು. ಈ ಪಂದ್ಯಕ್ಕೆ ಪ್ರೇಕ್ಷಕರಿಲ್ಲದೇ ಸ್ಟೇಡಿಯಂ ಖಾಲಿ ಹೊಡೆದಿತ್ತು. ಇದಕ್ಕೆ ಕಾರಣ ಟಿಕೆಟ್ ತೆರಿಗೆ ದರ ಏರಿಕೆ ಮತ್ತು ಕೇರಳದ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್ (V Abdurahiman) ವಿವಾದಾತ್ಮಕ ಹೇಳಿಕೆ. ಇದೀಗ ಈ ಬಗ್ಗೆ ಕೇರಳ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ಮುಗಿಬಿದ್ದಿದ್ದಾರೆ.
Advertisement
ಟಿಕೆಟ್ ತೆರಿಗೆ ದರ ಏರಿಕೆ ಬಳಿಕ ಟಿಕೆಟ್ ದರ ಇಳಿಕೆ ಬಗ್ಗೆ ಕ್ರೀಡಾ ಪ್ರೇಮಿಗಳು ಆಗ್ರಹಿಸಿದ್ದರು. ಇದಕ್ಕೆ ವಿ.ಅಬ್ದುರಹಿಮಾನ್, ತೆರಿಗೆ ಇಳಿಸುವ ಅಗತ್ಯ ಏನಿದೆ? ದೇಶದಲ್ಲಿ ಬೆಲೆ ಏರಿಕೆ ಸರ್ವೇಸಾಮಾನ್ಯವಾಗಿದೆ. ತೆರಿಗೆಯನ್ನು ಕಡಿಮೆ ಮಾಡಬೇಕು ಎಂಬ ಬೇಡಿಕೆಯಿದೆ ಆದರೆ ಟಿಕೆಟ್ ಹಣ ನೀಡಲಾಗದವರು ಪಂದ್ಯ ನೋಡಬೇಕಾಗಿಲ್ಲ. ಹಸಿವಿನಿಂದ ಬಳಲುತ್ತಿರುವವರು ಪಂದ್ಯ ವೀಕ್ಷಿಸಲು ಬರಬೇಕಾಗಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ: 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್ ಪ್ರಸಾರ ಹಕ್ಕು ಪಡೆದ Viacom18 – ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ.
Advertisement
Advertisement
ಆ ಬಳಿಕ ಪಂದ್ಯವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳು ಕಂಡು ಬಂತು. ಸ್ಟೇಡಿಯಂ ಕೂಡ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಲ್ಲದೆ ಪಂದ್ಯ ನಡೆಯಿತು. ಇದೀಗ ಈ ಬಗ್ಗೆ ಚರ್ಚೆ ಇನ್ನೂ ನಿಂತಿಲ್ಲ.
Advertisement
ವಿ.ಅಬ್ದುರಹಿಮಾನ್ ವಿವಾದಾತ್ಮಕ ಹೇಳಿಕೆ ವಿರುದ್ಧ ಆಕ್ರೋಶ ಕೇಳಿ ಬರುತ್ತಿದೆ. ಕ್ರೀಡಾ ಸಚಿವರ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಕಿಡಿಕಾರಿದ್ದಾರೆ. ಅಬ್ದುರಹಿಮಾನ್ ಏನೇ ಹೇಳಿದರೂ ಜನರು ಪಂದ್ಯಕ್ಕೆ ಬರುವುದನ್ನು ತಪ್ಪಿಸಬಾರದು. ಜನರು ಬರದಿರುವುದರಿಂದ ಸಚಿವರಿಗೆ ಏನು ನಷ್ಟವಿಲ್ಲ ಆದರೆ ಇದು ಕ್ರಿಕೆಟ್ ಮತ್ತು ಕ್ರೀಡೆಯನ್ನು ಪ್ರೀತಿಸುವವರಿಗೆ ನಷ್ಟ. ಪಂದ್ಯವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಪ್ರಚಾರಗಳನ್ನು ನಾನು ನೋಡಿದ್ದೇನೆ. ಅವರ ಪ್ರಚಾರವು ಪರಿಣಾಮಕಾರಿಯಾಗಿ ಕಂಡಿತ್ತು. ಆದರೆ ಈ ರೀತಿ ಮಾಡಬಾರದಿತ್ತು. ಮೂರನೇ ಏಕದಿನ ಪಂದ್ಯವನ್ನು ವೀಕ್ಷಿಸಲು ನಾನು ಮತ್ತು ಅಲ್ಲಿಗೆ ಬಂದವರು ಅದೃಷ್ಟಶಾಲಿಯಾಗಿದ್ದರು. ಉತ್ತಮವಾದ ಪಂದ್ಯವಾಗಿತ್ತು. ಸಚಿವರು ಆ ರೀತಿ ಹೇಳಿಕೆಯನ್ನು ಕೊಡಬಾರದಿತ್ತು ಎಂದಿದ್ದಾರೆ. ಇದನ್ನೂ ಓದಿ: ದೇವರೆಂದು ಕಾಲಿಗೆ ಬಿದ್ದ ಅಭಿಮಾನಿಯ ಆಸೆ ಪೂರೈಸಿದ ಕೊಹ್ಲಿ – ನೆಟ್ಟಿಗರಿಂದ ಭಾರೀ ಮೆಚ್ಚುಗೆ
ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಕೂಡ ವಾಗ್ದಾಳಿ ನಡೆಸಿದ್ದು, ಅಬ್ದುರಹಿಮಾನ್ ಅವರು ತಮ್ಮ ಹೇಳಿಕೆಯಿಂದ ಮಲಯಾಳಿಗಳ ಸ್ವಾಭಿಮಾನವನ್ನು ಪ್ರಶ್ನಿಸಬಾರದಿತ್ತು. ಸಚಿವರ ಹಸಿವಿನ ಹೇಳಿಕೆಯಿಂದ ಖಾಲಿ ಗ್ಯಾಲರಿಯಲ್ಲಿ ಪಂದ್ಯ ನಡೆಯುವಂತಾಯಿತು ಎಂದು ಕೆಂಡ ಕಾರಿದ್ದಾರೆ.
ಆದರೆ ಸಿಪಿಐ(ಎಂ) ಕ್ರೀಡಾ ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ. ಅವರ ಹೇಳಿಕೆಯಲ್ಲಿ ಏನು ತಪ್ಪಿಲ್ಲ ಎಂದು ವಾದಿಸಿದೆ. ತಿರುವನಂತಪುರಂನ ಗ್ರೀನ್‍ಫೀಲ್ಡ್ ಸ್ಟೇಡಿಯಂ 55,000 ಪ್ರೇಕ್ಷಕರು ಹಾಜರಾಗುವಷ್ಟು ಸಾಮರ್ಥ್ಯವನ್ನು ಹೊಂದಿತ್ತು. ಆದರೆ ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯಕ್ಕೆ 10,000ಕ್ಕಿಂತ ಕಡಿಮೆ ಜನ ಹಾಜರಾಗಿದ್ದರು. ಆದರೆ ಪಂದ್ಯದಲ್ಲಿ ಭಾರತ 317 ರನ್‍ಗಳ ದಾಖಲೆಯ ಗೆಲುವಿನೊಂದಿಗೆ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಗೈದಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k