ತಿರುವನಂತಪುರಂ: ಶಿಕ್ಷಣದಲ್ಲಿ ದಾಪುಗಾಲು ಇಟ್ಟಿರುವ ಕೇರಳ ತನ್ನ ಮೊದಲ AI ಟೀಚರ್ “ಐರಿಸ್” ಅನ್ನು ಪರಿಚಯಿಸುವ ಮೂಲಕ ಮತ್ತೊಂದು ವಿನೂತನ ಹೆಜ್ಜೆ ಇಟ್ಟಿದೆ. ಈ ಮೂಲಕ ಭಾರತದ ಮೊದಲ AI ಶಿಕ್ಷಕಿಯನ್ನು ಪರಿಚಯಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೇಕರ್‌ಲ್ಯಾಬ್ಸ್ ಎಜುಟೆಕ್ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ತಿರುವನಂತಪುರಂನಲ್ಲಿರುವ ಕೆಟಿಸಿಟಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅನಾವರಣಗೊಂಡ ಐರಿಸ್, ವಿದ್ಯಾರ್ಥಿಗಳಿಗೆ ಕಲಿಕೆಯ ಅನುಭವವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.
Advertisement
View this post on Instagram
Advertisement
ಇದರ ವೀಡಿಯೋವನ್ನು ಮೇಕರ್‌ಲ್ಯಾಬ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಜೊತೆಗೆ ಐಆರ್‌ಐಎಸ್‌ನೊಂದಿಗೆ ನಾವು ನಿಜವಾದ ವೈಯಕ್ತಿಕಗೊಳಿಸಿದ ಕಲಿಕೆಯ ಅನುಭವವನ್ನು ರಚಿಸಲು AI ಯ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಶಿಕ್ಷಣವನ್ನು ಕ್ರಾಂತಿಗೊಳಿಸಲು ಹೊರಟಿದ್ದೇವೆ ಎಂದು ಬರೆದುಕೊಳ್ಳಲಾಗಿದೆ.
Advertisement
Advertisement
ನೀತಿ ಆಯೋಗ ಪ್ರಾರಂಭಿಸಿದ ಅಟಲ್ ಟಿಂಕರಿಂಗ್ ಲ್ಯಾಬ್ (ATL) ಯೋಜನೆಯಡಿಯಲ್ಲಿ ನಿರ್ಮಿಸಲಾದ ಐರಿಸ್ ಸಾಂಪ್ರದಾಯಿಕ ಬೋಧನಾ ವಿಧಾನಗಳನ್ನು ಕ್ರಾಂತಿಗೊಳಿಸುವ ಗುರಿಯನ್ನು ಹೊಂದಿರುವ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಮೂರು ಭಾಷೆಗಳನ್ನು ಮಾತನಾಡುವ ಮತ್ತು ಪ್ರಶ್ನೆಗಳನ್ನು ನಿಭಾಯಿಸುವ ಸಾಮರ್ಥ್ಯದೊಂದಿಗೆ ಐರಿಸ್ ಪ್ರತಿ ವಿದ್ಯಾರ್ಥಿಗೆ ಕಲಿಕೆಯ ಅನುಭವ ನೀಡುತ್ತದೆ.
ವಿಶೇಷವೆಂದರೆ, ಇದು ಧ್ವನಿ ನೆರವು, ಸಂವಾದಾತ್ಮಕ ಕಲಿಕೆ ಮಾಡ್ಯೂಲ್‌ಗಳು, ಮ್ಯಾನಿಪ್ಯುಲೇಷನ್ ಸಾಮರ್ಥ್ಯಗಳು ಮತ್ತು ಚಲನಶೀಲತೆಯನ್ನು ಒಳಗೊಂಡಿರುತ್ತದೆ. ಇದನ್ನೂ ಓದಿ: ದೇಶದ್ರೋಹಿಗಳಿಗೂ, ಕೈ ನಾಯಕರಿಗೂ ಅಪ್ಪುಗೆಯ ನಂಟಿನ ಕಾರಣ FSL ವರದಿ ವಿಳಂಬ: ಸಿ.ಟಿ.ರವಿ